ಬೆಂಗಳೂರು: ಮೋದಿಯವರು (PM Modi) ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ದರು. ಆದಾಯ ದ್ವಿಗುಣ ಆಗಿದೆಯಾ? ಚುನಾವಣೆ ವೇಳೆ ಮೋದಿಯವರು ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಅನುಷ್ಠಾನ ಮಾಡಿದ್ದಾರಾ? ಪ್ರಧಾನಿಗಳ ಮಾತು ಅತ್ಯಂತ ಜವಾಬ್ದಾರಿಯಿಂದ ಇರಬೇಕು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಕಿಡಿಕಾರಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳ (Congress Guarantee) ಕುರಿತು ಮೋದಿ ಟೀಕಿಸಿದ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮೋದಿಯವರು ಈ ದೇಶದ ಪ್ರಧಾನಿ. ಜನ ಪ್ರಧಾನಿಯವರ ಮಾತನ್ನು ಗಮನಿಸುತ್ತಿರುತ್ತಾರೆ. ಪ್ರಧಾನಿ ಆಡುವ ಮಾತು ಅತ್ಯಂತ ಜವಾಬ್ದಾರಿಯಿಂದ ಇರಬೇಕು. ಮೋದಿಯವರು ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ದರು. ಆದಾಯ ದ್ವಿಗುಣ ಆಗಿದೆಯಾ? ಚುನಾವಣೆ ವೇಳೆ ಮೋದಿಯವರು ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಅನುಷ್ಠಾನ ಮಾಡಿದ್ದಾರಾ? ಕಳೆದ ಸಲ ಮಹಾರಾಷ್ಟ್ರದಲ್ಲಿ ಏನೆಲ್ಲ ಭರವಸೆ ಕೊಟ್ಟಿದ್ದರೂ, ಅನುಷ್ಠಾನ ಮಾಡಿದ್ದಾರಾ? ಟೀಕೆ, ಅಭಿಪ್ರಾಯ ತಿಳಿಸುವುದು ಅವರ ಹಕ್ಕು, ನಾವು ಪ್ರಶ್ನೆ ಮಾಡಲ್ಲ. ಆದರೆ ಬಿಜೆಪಿಯಲ್ಲಿ ಬೇರೆಯವರು ಟೀಕೆ ಮಾಡಿದರೆ ಅದು ಬೇರೆ. ಪ್ರಧಾನಿಯವರು ಈ ರೀತಿ ಟೀಕೆ ಮಾಡುವುದು ಔಚಿತ್ಯವಲ್ಲ ಎಂದು ಟಕ್ಕರ್ ನೀಡಿದ್ದಾರೆ.ಇದನ್ನೂ ಓದಿ: ಜನರ ಸಮಸ್ಯೆ ಕಂಡಾಗ ಮಾತೃ ಹೃದಯ ಇದ್ದವರಿಗೆ ಕಣ್ಣೀರು ಬರುತ್ತೆ, ಕಟುಕರಿಗಲ್ಲ: ಹೆಚ್‌ಡಿಕೆ
Advertisement
Advertisement
ನಾವು ಚುನಾವಣೆ ವೇಳೆ ಗ್ಯಾರಂಟಿಗಳ ಬಗ್ಗೆ ಮಾತು ಕೊಟ್ಟಿದ್ದೆವು, ಪ್ರಣಾಳಿಕೆಯಲ್ಲೂ ತಿಳಿಸಿದ್ದೆವು. ಭರವಸೆ ಈಡೇರಿಸಿರುವುದು ನಮ್ಮ ಬದ್ಧತೆ ತೋರಿಸುತ್ತದೆ. ನಮ್ಮ ಪ್ರಣಾಳಿಕೆ ತಯಾರು ಮಾಡುವ ಜವಾಬ್ದಾರಿ ನನಗೆ, ಪ್ರೊ.ರಾಧಾಕೃಷ್ಟ, ಮಧು ಬಂಗಾರಪ್ಪ ಅವರಿಗೆ ಕೊಟ್ಟಿದ್ದರು. ನಾವು 3 ಜನ ಸೇರಿ ತಯಾರು ಮಾಡಿದ್ದೆವು. ಐದು ಗ್ಯಾರಂಟಿಗಳನ್ನು ಕೂಡಾ ನಾವು ನಮ್ಮ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ, ಇದರ ಸಾಧಕ ಬಾಧಕಗಳನ್ನು, ಆರ್ಥಿಕ ಹೊರೆಯನ್ನು ಚರ್ಚೆ ಮಾಡಿ ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದೆವು ಎಂದರು.
Advertisement
ಮೊದಲ ಸಂಪುಟದಲ್ಲಿ ತೀರ್ಮಾನ ಮಾಡುವುದಾಗಿ ಕಮಿಟ್ ಆಗಿದ್ದೆವು. ಅದೇ ಪ್ರಕಾರ ಮೊದಲ ಸಂಪುಟದಲ್ಲೇ ತೀರ್ಮಾನ ಮಾಡಿ ಸಂಬಂಧ ಪಟ್ಟ ಇಲಾಖೆಗಳಿಗೆ ಸೂಚನೆ ಕೊಡಲಾಯಿತು. ಒಂದೆರಡು ತಿಂಗಳ ನಂತರ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆವು. ಇವತ್ತು ಹಣ ಖರ್ಚಾಗುತ್ತಿದೆ, ಆರ್ಥಿಕ ಹೊರೆ ಆಗುತ್ತಿದೆ. ಕರ್ನಾಟಕ ಆರ್ಥಿಕ ಸ್ಥಿತಿ ದಿವಾಳಿ ಆಗಿದೆ ಎಂದು ಟೀಕೆ, ಟಿಪ್ಪಣಿ ಬಂದಿರುವುದು ನಿಜ. ಆದರೆ ಈ ಟೀಕೆ, ಟಿಪ್ಪಣಿ ಮಧ್ಯೆ ನಾವು ಯಶಸ್ವಿಯಾಗಿ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದರಿಂದ 3.17 ಲಕ್ಷ ಕೋಟಿ ರೂ. ಬಜೆಟ್, 3.5 ಲಕ್ಷ ಕೋಟಿಗೆ ಹೋಗಿದೆ. ಹೆಚ್ಚುವರಿ ಹೊರೆ ಆಗುತ್ತದೆ ಎಂದು ಗೊತ್ತಿದ್ದೇ ಬಜೆಟ್ ಕೊಟ್ಟಿದ್ದೇವೆ. ಯಾವುದೇ ಗೊಂದಲ ಇಲ್ಲ, ಗ್ಯಾರಂಟಿಗಳು ಅನುಷ್ಠಾನ ಆಗುತ್ತಿದೆ ಎಂದು ತಿಳಿಸಿದರು.ಇದನ್ನೂ ಓದಿ: ನಡು ರಸ್ತೆಯಲ್ಲಿ ಪಟಾಕಿ – ಪುಂಡರಿಂದ ವಾಹನಗಳಿಗೆ ಕಿರಿಕ್
Advertisement
ಇನ್ನೂ ಡಿಕೆಶಿಯವರಿಗೆ (DK Shivakumar) ಶಕ್ತಿ ಯೋಜನೆ ಬಗ್ಗೆ ಕೆಲವರು ಏನು ಅಭಿಪ್ರಾಯ ಹೇಳಿದ್ದಾರೆ ಅದನ್ನೇ ಹೇಳಿದ್ದಾರೆ. ಆದರೆ ಅವರು ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ಹೇಳಿಲ್ಲ. ನಮಗೂ ಅರಿವಿದೆ. ಗ್ಯಾರಂಟಿಗಳಿಂದ ಹಣಕಾಸು ಹೊರೆ ಹೆಚ್ಚಾಗಿದೆ. ಬಿಜೆಪಿಯವರ (BJP) ಸಲಹೆಗಳನ್ನೂ ತೆಗೆದುಕೊಳ್ಳುತ್ತೇವೆ. ಆದರೆ ಜನರಿಗೆ ಕೊಟ್ಟ ಮಾತಿನ ಹಾಗೇ ನಡೆದುಕೊಂಡಿದ್ದೇವೆ. ಆದರೆ ಬಿಜೆಪಿಯವರು ಚುನಾವಣೆಗಳಿಗಾಗಿ ಈ ರೀತಿಯ ರಾಜಕೀಯ ಆರೋಪ ಮಾಡುತ್ತಿದ್ದಾರೆ ಎಂದರು ಹೇಳಿದರು.
ನಾವು ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಡಿಕೆಶಿಯವರೂ ಸಹ ಅಂದು ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ಹೇಳಿಲ್ಲ. ಒಂದು ವೇಳೆ ಆ ರೀತಿ ಏನಾದರೂ ತೀರ್ಮಾನಗಳನ್ನು ತೆಗೆದುಕೊಳ್ಳುವುದಾದರೆ, ಸಿಎಂ ಆಗಲೀ, ಡಿಕೆಶಿ ಆಗಲೀ ಅಥವಾ ನಾನು ಯಾರೂ ಕೂಡ ಒಬ್ಬೊಬ್ಬರೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಅದನ್ನು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ, ಸಾಧಕ ಬಾಧಕ ಚರ್ಚೆ ಮಾಡಿ ತೀರ್ಮಾನ ಆಗುತ್ತದೆ. ಆದರೆ ಗ್ಯಾರಂಟಿಗಳನ್ನು ನಿಲ್ಲಿಸುವ ಸ್ಥಿತಿಗೆ ನಾವು ಯಾರೂ ಬಂದಿಲ್ಲ. ಇಲ್ಲಿಯವರೆಗೆ ಗ್ಯಾರಂಟಿಗಳನ್ನು ನಿಲ್ಲಿಸುವ ಬಗ್ಗೆ ನಾವು ಎಲ್ಲೂ ಕೂಡ ಚರ್ಚೆ ಮಾಡಿಲ್ಲ. ಅದರ ಬದಲಾಗಿ ಗ್ಯಾರಂಟಿಗಳನ್ನು ಮುಂದುವರೆಸುತ್ತೇವೆ ಎಂದು ಪದೇ ಪದೇ ಹೇಳುತ್ತಿದ್ದೇವೆ ಎಂದರು.
ಖರ್ಗೆಯವರು ಹಿರಿಯರಾಗಿ ಡಿಕೆಶಿಯವರಿಗೆ ಎಲ್ಲರೂ ಎಚ್ಚರಿಕೆಯಿಂದ ಆಡಳಿತದಲ್ಲಿ ಹೋಗಬೇಕು ಎಂದು ಹೇಳಿದ್ದಾರೆ. ಆದರೆ ಮೋದಿಯವರು ಇದಕ್ಕೆ ಪ್ರತಿಕ್ರಿಯೆ ಕೊಟ್ಟು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಡೆ ಎಲ್ಲ ಸುಳ್ಳು ಭರವಸೆ ಕೊಡುತ್ತಾರೆ ಎಂದು ಅರ್ಥ ಬರುವಂತೆ ಹೇಳಿದ್ದಾರೆ. ಮೋದಿಯವರು 2014ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಕೊಟ್ಟಿದ್ದರು. ಇದು ಜಾರಿ ಮಾಡಿದ್ದಾರಾ ಅವರು? ರೈತರ ಆದಾಯ ದ್ವಿಗುಣ ಮಾಡುವ ವಿಚಾರವಾಗಿ ರೈತರ ಬಳಿ ಕೇಳೋಣ, ಆದಾಯ ದ್ವಿಗುಣ ಆಗಿದೆಯಾ ಎಂದು? ಅವರು ಕೊಟ್ಟಿರುವ ಭರವಸೆಗಳನ್ನು ಅವರೇ ಈಡೇರಿಸಿಲ್ಲ, ನಮ್ಮ ಮೇಲೆ ಅನಾವಶ್ಯಕ ಆರೋಪ ಮಾಡುವುದು ಸರಿನಾ? ಎಂದು ಪ್ರಶ್ನಿಸಿದರು.
ವಕ್ಫ್ ವಿವಾದ ವಿಚಾರ:
ಮುಖ್ಯಮಂತ್ರಿಗಳು (CM Siddaramaiah) ಎಲ್ಲ ಡಿಸಿಗಳಿಗೂ ಯಾವುದೇ ನೋಟಿಸ್ ಕೊಡಬೇಡಿ, ಕೊಟ್ಟಿದ್ದರೆ ವಾಪಸ್ ಪಡೆಯಲು ಸೂಚಿಸಿದ್ದಾರೆ. ಅಲ್ಲಿಗೆ ಅದು ಮುಗಿದಿದೆ. ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತದೆ ಗೊತ್ತಿಲ್ಲ. ಕಂದಾಯ ದಾಖಲಾತಿ ಹಾಗೂ ವಕ್ಫ್ ದಾಖಲಾತಿಯಲ್ಲಿ ಒಂದೇ ಇದ್ದರೆ ಮಾತ್ರ ಇದ್ದರೆ ಒಳ್ಳೆಯದು ಆದರೆ ಬೇರೆ ಬೇರೆ ರೀತಿ ಗೊಂದಲ ಆಗುತ್ತದೆ. ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯ, ಇದರಲ್ಲಿ ಏನಿದೆಯೋ ಅದರಂತೆ ದಾಖಲಾಗಲಿದೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಮಾಡಲ್ಲ. ಆದರೆ ಸಿಎಂ ಸದ್ಯದಲ್ಲಿ ಯಾವ ನೋಟಿಸ್ ಕೊಡಬೇಡಿ, ನಂತರ ಪರಿಶೀಲಿಸೋಣ ಎಂದಿದ್ದಾರೆ ಎಂದರು.ಇದನ್ನೂ ಓದಿ: ಪಟಾಕಿ ಸಿಡಿತದಿಂದ ಜನರ ಕಣ್ಣಿಗೆ ಕುತ್ತು – ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿಗೆ ಚಿಕಿತ್ಸೆ