ಮೋದಿ ಭಯೋತ್ಪಾದಕನಂತೆ ಕಾಣ್ತಾರೆ – ಜನ ಪ್ರಧಾನಿಯನ್ನ ಕಂಡ್ರೆ ಭಯಪಡ್ತಿದ್ದಾರೆ: ಕಾಂಗ್ರೆಸ್ ಸ್ಟಾರ್ ನಾಯಕಿ

Public TV
1 Min Read
modi VIJAYASANTHI

ಹೈದರಾಬಾದ್: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ಟೀಕೆಗಳು ಹೆಚ್ಚಾಗುತ್ತಿದ್ದು, ಈ ಪಟ್ಟಿಗೆ ತೆಲಂಗಾಣದ ಕಾಂಗ್ರೆಸ್ ನಾಯಕಿ, ನಟಿ ವಿಜಯಶಾಂತಿ ಕೂಡ ಸೇರ್ಪಡೆಯಾಗಿದ್ದಾರೆ.

ತೆಲಂಗಾಣದ ಶಾಂಶಬಾದ್ ನಗರದಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಕಾಂಗ್ರೆಸ್ ನಾಯಕಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಮೋದಿ ಅವರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿ ಟೀಕೆ ಮಾಡಿದ್ದಾರೆ.

ಯಾವುದೇ ಕ್ಷಣದಲ್ಲಿ ಮೋದಿ ನಮ್ಮ ಮೇಲೆ ಬಾಂಬ್ ಹಾಕ್ತಾರೆ ಎಂಬ ಭಯದಲ್ಲಿ ಜನರಿದ್ದಾರೆ. ಮೋದಿ ಭಯೋತ್ಪಾದಕನಂತೆ ಕಾಣುತ್ತಿದ್ದಾರೆ. ಜನರನ್ನು ಪ್ರೀತಿಸಿ ಅವರ ಮನಸ್ಸು ಗೆಲ್ಲುವುದನ್ನ ಬಿಟ್ಟು, ಭಯ ಮಾಡುವಂತೆ ಮಾಡುತ್ತಿದ್ದಾರೆ. ಪ್ರಧಾನಿಯಾಗಿ ನಡೆದುಕೊಳ್ಳುವ ರೀತಿ ಇದಲ್ಲ ಎಂದು ಕಿಡಿಕಾರಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದ ಈ ಸಮಾವೇಶದಲ್ಲಿ ರಾಹುಲ್ ಮಾತನಾಡುವ ಮುನ್ನ ವಿಜಯಶಾಂತಿ ಈ ಹೇಳಿಕೆ ನೀಡಿದ್ದಾರೆ.

rahul gandhi 2

ಅಂದಹಾಗೇ ವಿಜಯಶಾಂತಿ ನಟಿಯಾಗಿ ಹೆಸರು ಪಡೆದ ಬಳಿಕ ರಾಜಕೀಯ ಪ್ರವೇಶವನ್ನು ಬಿಜೆಪಿ ಪಕ್ಷದಿಂದಲೇ ಮಾಡಿದ್ದರು. ಸುಮಾರು 10 ವರ್ಷಗಳ ಕಾಲ ಪಕ್ಷದಲ್ಲಿದ್ದ ವಿಜಯಶಾಂತಿ, ಬಿಜೆಪಿಯಿಂದ ಹೊರ ಬಂದು ತಮ್ಮದೇ ಪಕ್ಷ ಕಟ್ಟಿದ್ದರು. ಆದರೆ ಅಲ್ಲಿಯೂ ಯಶಸ್ಸು ಕಾಣದೇ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಪಕ್ಷದಲ್ಲಿ ತಮ್ಮ ಪಕ್ಷವನ್ನು ವಿಸರ್ಜನೆ ಮಾಡಿದ್ದರು. ಕಳೆದ 2014 ಚುನಾವಣೆ ವೇಳೆ ಉಂಟಾದ ಕಲಹದಿಂದ ಅಲ್ಲಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಇವರನ್ನು ಸ್ಟಾರ್ ಪ್ರಚಾರಕಿಯಾಗಿ ಆಯ್ಕೆ ಮಾಡಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷದ ನಾಯಕ ಬೇಳೂರು ಗೋಪಾಲಕೃಷ್ಣ ಅವರು ಮೋದಿಯನ್ನು ಗುಂಡಿಟ್ಟು ಕೊಲ್ಲುತ್ತೀರಾ ಎಂದು ಪ್ರಶ್ನೆ ಮಾಡುವ ಮೂಲಕ ವಿವಾದತ್ಮಾಕ ಹೇಳಿಕೆ ನೀಡಿದ್ದರು. ಆ ಬಳಿಕ ತಮ್ಮ ಮಾತಿಗೆ ಸ್ಪಷ್ಟನೆ ನೀಡಿ ಕ್ಷಮೆ ಕೋರಿದ್ದರು.

Beluru Gopalakrishna

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *