ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ರದ್ದುಗೊಳಿಸಲ್ಲ, ಎಷ್ಟು ದೂರು ಪ್ರಯಾಣ ಮಾಡ್ತಿರೋ, ಅಷ್ಟೇ ದೂರ ಟೋಲ್ ಪಾವತಿಸಿ ಎಂಬ ನೂತನ ಟೋಲ್ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ.
ಲಾರಿ ಮಾಲೀಕರುಗಳು ರಾಷ್ಟೀಯ ಹೆದ್ದಾರಿಗಳಲ್ಲಿ ಟೋಲ್ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದವು. ಆದರೆ ಟೋಲ್ ರದ್ದುಗೊಳಿಸುವ ಕುರಿತು ಯಾವುದೇ ನಿರ್ಧಾರ ಇಲ್ಲ. ಇದರ ಬದಲು ನೂತನ ಟೋಲ್ ಪಾವತಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ.
Advertisement
ಯೋಜನೆಯಲ್ಲೇನಿದೆ?
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ನು ಮುಂದೆ ಟೋಲ್ ನಿಯಮ ಬದಲಾಗಲಿದ್ದು, ವಾಹನ ಸವಾರರು ಎಷ್ಟು ದೂರಕ್ಕೆ ಪ್ರಯಾಣಿಸುತ್ತಾರೋ, ಅಷ್ಟೇ ದೂರಕ್ಕೆ ಟೋಲ್ ಕಟ್ಟುವ ನೂತನ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ನೀವು 60 ಕಿಲೋ ಮೀಟರ್ ಉದ್ದದ ಟೋಲ್ ರಸ್ತೆಯಲ್ಲಿ 30 ಕಿಲೋ ಮೀಟರ್ ಪಯಣವನ್ನು ಮಾಡಿದರೆ, ಆಗ ಕೇವಲ 30 ಕಿಲೋ ಮೀಟರ್ ಗಷ್ಟೇ ಟೋಲ್ ಪಾವತಿಸಿದರೆ ಸಾಕು.
Advertisement
Advertisement
ಹೇಗೆ ಕಾರ್ಯನಿರ್ವಹಿಸುತ್ತದೆ?
ಟೋಲ್‍ಗಳಲ್ಲಿ ಸ್ಯಾಟಲೈಟ್ ಮೂಲಕ ಟೋಲ್ ಕಲೆಕ್ಟ್ ಮಾಡುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ. ಜಿಪಿಎಸ್ ಮತ್ತು ಮೊಬೈಲ್ ಟೆಕ್ನಾಲಜಿ ಬಳಸಿ ನಿಮ್ಮ ವಾಹನ ಎಷ್ಟು ದೂರ ಕ್ರಮಿಸಿದೆ ಅನ್ನೋದು ಈ ಯಂತ್ರದ ಮೂಲಕ ತಿಳಿಯುತ್ತದೆ. ಬಳಿಕ ನೀವು ಪ್ರಯಾಣಿಸಿದ ಕಿ.ಮೀ.ಗೆ ಅಷ್ಟೇ ಪ್ರಮಾಣದ ಮೊತ್ತವನ್ನು ನಿಮ್ಮ ಅಕೌಂಟ್‍ನಿಂದ ಪಾವತಿ ಮಾಡಿಕೊಳ್ಳುತ್ತದೆ.
Advertisement
ವಾಹನ ಸವಾರರಿಗೆ ಟೋಲ್ ಪಾವತಿಸುವ ಹೊರೆ ಕಡಿಮೆಗೊಳಿಸಲು ಈ ಯೋಜನೆಯನ್ನು ಜಾರಿಗೆ ತರುವುದಕ್ಕೆ ನರೇಂದ್ರ ಮೋದಿ ಸರ್ಕಾರ ತೀರ್ಮಾನಿಸಿದ್ದು, ಸದ್ಯಕ್ಕೆ ಇದನ್ನು ಪ್ರಾಯೋಗಿಕವಾಗಿ ದೆಹಲಿ ಹೊರವಲಯಗಳ ಟೋಲ್‍ಗಳಲ್ಲಿ ಜಾರಿಗೊಳಿಸಲಾಗಿದೆ.