ಚಿಕ್ಕಬಳ್ಳಾಪುರ: ನರೇಂದ್ರ ಮೋದಿ ಈ ದೇಶಕ್ಕೆ ಭಸ್ಮಾಸುರ ರೀತಿ ವಕ್ಕರಿಸಿದ್ದಾರೆ. ಮಿಸ್ಟರ್ ಮೋದಿ ಈ ದೇಶದ ಆಧುನಿಕ ಭಸ್ಮಾಸುರ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಹೇಳಿಕೆ ನೀಡಿದರು.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಭಾಗಿಯಾಗಿ ನರೇಂದ್ರ ಮೋದಿ ವಿರುದ್ಧ ಉಗ್ರಪ್ಪ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಕೇವಲ 100 ದಿನ ಅಧಿಕಾರ ಕೊಡಿ ಎಂದು, ಅಂಗೈಯಲ್ಲಿ ಆಕಾಶ ತೋರಿಸಿ ಅಧಿಕಾರಕ್ಕೆ ಬಂದವರು. 100 ದಿನ ಅಧಿಕಾರ ಕೊಡಿ, ದೇಶವನ್ನು ಬದಲಾಯಿಸುತ್ತೇನೆ ಎಂದರು. ಆದರೆ ಈಗ 100 ದಿನ ಹೋಗಿ 8 ವರ್ಷ ಮುಗಿದಿದೆ. 2014ರಲ್ಲಿ ಕೊಟ್ಟ ಯಾವುದಾದರೂ ಒಂದು ಆಶ್ವಾಸನೆ ಈಡೇರಿಸಿದ್ದೀರಿ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಈಶ್ವರಪ್ಪಗೆ B-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಗೊತ್ತಿತ್ತು: ಸಿದ್ದರಾಮಯ್ಯ
ವಿದೇಶದಿಂದ ಕಪ್ಪು ಹಣ ವಾಪಸ್ ತರುತ್ತೇನೆ ಎಂದು ಭಾಷಣ ಮಾಡಿದರು. ದಿನಬಳಕೆ ವಸ್ತುಗಳ ಬೆಲೆ ಕಡಿಮೆ ಮಾಡುವುದಾಗಿ ಹೇಳಿದರು. ಪ್ರತಿ ವರ್ಷ ಯುವಕ ಯುವತಿಯರಿಗೆ 2 ಕೋಟಿ ಉದ್ಯೋಗಾವಕಾಶ ಕೊಡುವುದಾಗಿಯೂ ಹೇಳಿದರು. ಆದರೆ ಈಗ 100 ದಿನ ಹೋಗಿ 8 ವರ್ಷ ಮುಗಿದಿದೆ. ಇವುಗಳನ್ನು ನೀವು ಈಡೇರಿಸಿದ್ದರೆ, ನಿಮಗೆ ತಾಕತ್ತು, ಧಮ್ ಇದ್ದರೆ ಸಂಸತ್ತು ಅಥವಾ ವಿಧಾನಸೌಧದ ಮುಂಭಾಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್‌ನವರು ನನ್ನನ್ನು ಜೈಲಿಗೆ ಹಾಕಲು ಪ್ರಯತ್ನಿಸಿದ್ದರು: ಎಚ್‍ಡಿಕೆ