ಬೆಂಗಳೂರು: ಫೆಬ್ರವರಿಯ 28 ದಿನದಲ್ಲಿ ನಾಲ್ಕೈದು ದಿನ ಟೈಂ ಕೊಡ್ತೀನಿ, ಪ್ಲಾನ್ ಮಾಡಿ. ಕರ್ನಾಟಕ ಗೆಲ್ಲುವ ಮೋದಿ ಕೊಟ್ಟ ಟೈಂಗೆ ಬಿಜೆಪಿ ಹೈಕಮಾಂಡ್ (BJP HighCommand) ಮೆಗಾ ಪ್ಲಾನ್ ಮಾಡ್ತಿದೆ ಎನ್ನಲಾಗಿದೆ.
ಸ್ಥಳೀಯ ಮಾಸ್ ಲೀಡರ್ ಇಲ್ಲದ ಕರ್ನಾಟಕ ಬಿಜೆಪಿ (BJP) ಗೆ ಈಗ ಪ್ರಧಾನಿ ಮೋದಿ (Narendra Modi) ಆಸರೆ ಆಗಿದ್ದಾರೆ. ಕರ್ನಾಟಕದಲ್ಲಿ ಮೋದಿಯೇ ಫೇವರೆಟ್ ಏಕೆ ಎಂಬುದು ಹೈಕಮಾಂಡ್ ಗೆ ತಲುಪಿರುವ ವರದಿಯಲ್ಲಿ ಗೊತ್ತಾಗಿದೆ ಅಂತೆ. ಇದನ್ನೂ ಓದಿ: ಗುಜರಾತ್ ಸಕ್ಸಸ್: ಹುಬ್ಬಳ್ಳಿಯಲ್ಲಿ ಮೋದಿ ಶೋ ಸ್ಯಾಂಪಲ್ ಅಷ್ಟೇ – ಕರ್ನಾಟಕದಲ್ಲಿ ಮುಂದಿದೆ ಮೆಗಾ ಹವಾ
Advertisement
Advertisement
ಕರ್ನಾಟಕ ಎಲೆಕ್ಷನ್‍ಗೂ ಮುನ್ನ ಬಿಜೆಪಿ ಹೈಕಮಾಂಡ್‍ನಿಂದ ಭರ್ಜರಿ ತಾಲೀಮು ನಡೆಸುತ್ತಿದೆ. ಫೆಬ್ರವರಿಯಲ್ಲಿ ಮೋದಿಯಿಂದ ನಾಲ್ಕೈದು ಟೂರ್ ಫಿಕ್ಸ್ ಮಾಡಲು ಪ್ಲಾನ್ ನಡೆದಿದೆ. ಫೆಬ್ರವರಿ ತಿಂಗಳಲ್ಲಿ ಕರ್ನಾಟಕಕ್ಕೆ ಹೆಚ್ಚು ಸಮಯ ಕೊಡುವುದಾಗಿ ಪ್ರಧಾನಿ ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಧಾನಿ ಸಮಯಕ್ಕೆ ತಕ್ಕಂತೆ ಟೂರ್ ಫಿಕ್ಸ್ ಮಾಡಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಬ್ಲೂಪ್ರಿಂಟ್ ರೆಡಿ ಮಾಡ್ತಿದೆ. ಇದನ್ನೂ ಓದಿ: ತಾಯಿ ಮೇಲೆ ಆಣೆ ಮಾಡಿ ಸಿಎಂ ಕೊಟ್ಟ ಮಾತು ತಪ್ಪಿದ್ರು – ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ
Advertisement
Advertisement
ಹಳೇ ಮೈಸೂರು, ಮಧ್ಯ ಕರ್ನಾಟಕ, ಬೆಂಗಳೂರು ವ್ಯಾಪ್ತಿಗಳಲ್ಲಿ ಫೆಬ್ರವರಿ ಮೋದಿ ಕಹಳೆ ಸಾಧ್ಯತೆ ಇದೆ. ಯಡಿಯೂರಪ್ಪ (BS Yediyurappa) ನಾಯಕತ್ವದಿಂದ ನಿರ್ಗಮನದ ನಂತರ ಬಿಜೆಪಿಗೆ ಮಾಸ್ ಲೀಡರ್ ಗಳ ಕೊರತೆ ಎದುರಾಗಿದೆ. ಹಾಗಾಗಿ ಯಡಿಯೂರಪ್ಪ ಕೊರತೆ ತುಂಬಲು ಮೋದಿ ಮ್ಯಾಜಿಕ್ ಅವಶ್ಯಕತೆ ಇದೆ ಎಂಬ ಗುಪ್ತ್ ವರದಿ ಹೈಕಮಾಂಡ್‍ಗೆ ತಲುಪಿದೆ. ಗುಪ್ತ್ ವರದಿ ಬೆನ್ನಲ್ಲೇ ಮೋದಿ ಮೋಡಿಗೆ ತಂತ್ರ ಹೂಡುತ್ತಿರುವ ಹೈಕಮಾಂಡ್ ಸಾಕಷ್ಟು ರಾಲಿಗಳಿಗೆ ಪ್ಲಾನ್ ಮಾಡ್ತಿದೆ. ಹಾಗಾಗಿ ಮುಂದಿನ ಮೂರು ತಿಂಗಳು ಕರ್ನಾಟಕದಲ್ಲಿ ನಮೋ ಮೇನಿಯಾ ಮೋದಿ ಅಬ್ಬರ ಫಿಕ್ಸ್ ಎನ್ನಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k