ರಾಯಚೂರು: ಲೋಕಸಭಾ ಹಾಗೂ ಪಂಚರಾಜ್ಯ ಚುನಾವಣೆ ವಾತಾವರಣ ಕಾಂಗ್ರೆಸ್‌ಗೆ (Congress) ಪೂರಕವಾಗಿದೆ. ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ, ತೆಲಂಗಾಣ ಎಲ್ಲೆಡೆಯೂ ಕಾಂಗ್ರೆಸ್ ಪರ ಒಲವು ಕಾಣುತ್ತಿದೆ. ಇದರಿಂದಾಗಿ ಮೋದಿಯವರಿಗೆ (Narendra Modi) ನೋವಾಗುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ (N. Chaluvaraya Swamy) ವ್ಯಂಗ್ಯವಾಡಿದ್ದಾರೆ.
ರಾಜ್ಯ ಲೂಟಿಗೆ ಸಿಎಂ ಮತ್ತು ಡಿಸಿಎಂ ಪೈಪೋಟಿ ನಡೆಸಿದ್ದಾರೆ ಎನ್ನುವ ಮೋದಿ ಹೇಳಿಕೆ ವಿಚಾರವಾಗಿ ರಾಯಚೂರಿನಲ್ಲಿ (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಅನಾವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಉಚಿತ ಭಾಗ್ಯದಿಂದ ಪರಿಶಿಷ್ಟರ ಅಂತ್ಯಕ್ರಿಯೆಗೂ ಸರ್ಕಾರದ ಬಳಿ ದುಡ್ಡಿಲ್ಲ: ಬಿಎಸ್‌ವೈ
ನಾಲ್ಕೈದು ತಿಂಗಳಲ್ಲಿ ಜನಪರವಾದ ಕಾರ್ಯಕ್ರಮ ಮಾಡಿ ತೋರಿಸಿದ್ದೇವೆ. ಜನರು ಬಿಜೆಪಿಯನ್ನು (BJP) ಸೋಲಿಸಿ ನಮ್ಮನ್ನು ಗೆಲ್ಲಿಸಿದ್ದಾರೆ. ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ. ಮೋದಿ ಅವರು ರಾಜ್ಯದಲ್ಲಿ 26 ಕಾರ್ಯಕ್ರಮ ಮಾಡಿದರೂ ಬಿಜೆಪಿಗೆ ಸೋಲಾಯಿತು. 36,000 ಕೋಟಿಯ ಗ್ಯಾರಂಟಿ ಯೋಜನೆ (Guarantee Scheme) ನಾವು ಜಾರಿ ಮಾಡಿದ್ದೇವೆ. ವರ್ಷಕ್ಕೆ 56,000 ಕೋಟಿ ರೂ. ಆಗುತ್ತದೆ. ಈಗ ಎಲ್ಲಾ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಹೊಸ ಕಾಮಗಾರಿ ತೆಗೆದುಕೊಳ್ಳುವ ಎಲ್ಲಾ ಪ್ರಯತ್ನವೂ ನಡೆದಿದೆ. ಇದನ್ನು ತಡೆಯಲು ಆಗದೇ ಮೋದಿ ಹೀಗೆ ಹೇಳುತ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹೆಚ್‌ಡಿಕೆ ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ, ಈಗ ಫ್ರೀಯಾಗಿದ್ದರೆ ಯಾತ್ರೆ ಮಾಡಲಿ: ಚಲುವರಾಯಸ್ವಾಮಿ ಲೇವಡಿ