– ಇವತ್ತು ಸಂವಿಧಾನ ನಡೆಸುತ್ತಿರುವ ಜನ ಸರಿ ಇಲ್ಲ
ಬೆಂಗಳೂರು: ಮೋದಿಯವರು (Narendra Modi) ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿ ನಡೆದುಕೊಂಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಿಡಿಕಾರಿದ್ದಾರೆ.
Advertisement
ಕೆಪಿಸಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರೆವೇರಿಸಿ, ಸಿಎಂ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿಕೆಶಿ(D.K. Shivakumar) ಉಪಸ್ಥಿತಿಯಲ್ಲಿ ಮಾತನಾಡಿದ ಅವರು, ಜನವರಿ 26 ನಮ್ಮ ಜೀವನದಲ್ಲಿ ಹಾಗೂ ಭಾರತದ ಇತಿಹಾಸದಲ್ಲಿ ವಿಶೇಷ ದಿನ. ಈ ದೇಶದ ಸಂವಿಧಾನ ಅಸ್ತಿತ್ವದಲ್ಲಿ ಇಲ್ಲದೇ ಹೋಗಿದ್ದರೆ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ಇಷ್ಟೊಂದು ಪ್ರಯತ್ನ ಮಾಡಿ ಸ್ವಾತಂತ್ರ‍್ಯಕ್ಕೆ ಹೋರಾಟ ಮಾಡಿ ಸಂವಿಧಾನ ರಚಿಸಿದರು. ದೇಶದ ಸಂವಿಧಾನದಲ್ಲಿ ಇರುವ ಪ್ರಮುಖ ಅಂಶಗಳು ಸಮಾನತೆ, ಭ್ರಾತೃತ್ವತೆ, ಜಾತ್ಯಾತೀತ ತತ್ವಗಳು. ಇದೆಲ್ಲ ಕೂಡಿ ನಮ್ಮ ಸಂವಿಧಾನ ಆಗಿದೆ ಎಂದಿದ್ದಾರೆ. ಇದನ್ನೂ ಓದಿ: Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ
Advertisement
Advertisement
ಇವತ್ತು ಸಂವಿಧಾನ ತಿರುಚಿ ಬದಲಾವಣೆ ಮಾಡಬೇಕು ಎಂಬ ಬಹಳ ದೊಡ್ಡ ಕುತಂತ್ರವನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮಾಡುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನೆಲ್ಲ ನಾಶ ಮಾಡಬೇಕು ಅಂತ ಬಿಜೆಪಿ ಸರ್ವ ಪ್ರಯತ್ನ ಮಾಡ್ತಿದೆ. ಇದರಿಂದ ನ್ಯಾಯಾಂಗ ಹಾಗೂ ಜಾತ್ಯಾತೀತ ತತ್ವಕ್ಕೆ ದೊಡ್ಡ ಪೆಟ್ಟು ಬೀಳ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Republic Day: ನುಡಿದಂತೆ ನಡೆದಿರುವ ಸರ್ಕಾರ 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ: ಗೆಹ್ಲೋಟ್
Advertisement
ಜೊತೆಗೆ ಆರ್‌ಎಸ್‌ಎಸ್ ನವರು ನಾವೇ ದೇಶ ಕಾಪಾಡುವವರು. ಬೇರೆ ಯಾರೂ ಇಲ್ಲ ಅಂತ ದೇಶಭಕ್ತಿ ಬಗ್ಗೆ ಮಾತಾಡ್ತಾರೆ. ಸ್ವಾತಂತ್ರ‍್ಯ ಬಂದಿದ್ದು, ತಂದಿದ್ದು ಕಾಂಗ್ರೆಸ್ ಪಕ್ಷ. ಕರ್ನಾಟಕದ ಅನೇಕ ಮಹಾಪುರುಷರು ಇದಕ್ಕೆ ಹೋರಾಟ ಮಾಡಿ ಸ್ವಾತಂತ್ರ‍್ಯವನ್ನು ತಂದಿದ್ದಾರೆ. ಆದರೆ ಇವತ್ತು ಈ ಬಿಜೆಪಿ, ಪ್ರಧಾನಮಂತ್ರಿ ಮತ್ತು ಗೃಹ ಮಂತ್ರಿ ಸೇರಿ ತಮ್ಮ ಕೈಗೊಂಬೆನ್ನಾಗಿ ಮಾಡಿಟ್ಟುಕೊಳ್ಳಬೇಕು ಅಂತ ಸರ್ವ ಪ್ರಯತ್ನ ನಡೆದಿದೆ. ಸ್ವಾತಂತ್ರ‍್ಯ ಸಂವಿಧಾನ ಉಳಿದರೆ ಮುಂದಿನ ಪೀಳಿಗೆಗೆ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. ಪ್ರಜಾಪ್ರಭುತ್ವ ಇಲ್ಲ ಅಥವಾ ಸಂವಿಧಾನ ಇಲ್ಲ ಅಂದ್ರೆ ನಮಗೆ ಯಾರಿಗೂ ಕೂಡ ಮುಂದೆ ಅವಕಾಶ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 5th Republic Day: ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ – ಡಿಕೆಶಿ
ಇವತ್ತು ಸಂವಿಧಾನ ನಡೆಸುತ್ತಿರುವ ಜನ ಸರಿ ಇಲ್ಲ. ಸ್ವಾತಂತ್ರ್ಯ ಬಂದ ದಿನದಿಂದ 2014 ರವರೆಗೆ ದೇಶದಲ್ಲಿ 55 ಲಕ್ಷ ಕೋಟಿ ರೂಪಾಯಿ ಸಾಲ ಇತ್ತು. ಈಗ ಇದು ಒಂದು ಕೋಟಿ 50 ಲಕ್ಷ ರೂಪಾಯಿ ಹೆಚ್ಚಾಗಿದೆ. ನಮ್ಮ ಎಲ್ಲಾ ಅನುಭವದಿಂದ ದೇಶಕ್ಕೆ ಒಳ್ಳೆಯ ಕೆಲಸವನ್ನು ನಮ್ಮ ನಾಯಕರು ಮಾಡಿಕೊಟ್ಟಿದ್ದಾರೆ. ನಮ್ಮ ಯುವಕರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಧಕ್ಕೆ ಇದೆ ಎಂದು ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ
ಜಗದೀಶ್ ಶೆಟ್ಟರ್ ಕುರಿತು ಪ್ರತಿಕ್ರಿಯಿಸಿ, ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳಬೇಕಾದಾಗ ಯೋಚನೆ ಮಾಡಬೇಕು. ಅವರ ಹಿನ್ನೆಲೆ ಏನು, ಸಿದ್ದಾಂತ ಏನು, ತತ್ವ ಏನು ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ತತ್ವ ಸಿದ್ದಾಂತಕ್ಕೆ ಸೂಕ್ತ ಆಗುವವರನ್ನು ನೋಡಿದ ನಂತರ ಮಾತ್ರ ಪಕ್ಷಕೆ ಸೇರಿಸಿಕೊಳ್ಳಬೇಕು. ಯಾಕಂದ್ರೆ ಇವತ್ತು ಬಂದ ನಾಳೆ ಹೋದ ಎಂಬುದು ಆಗಬಾರದು. ಶೆಟ್ಟರ್ ವಾಪಸ್ ಹೋಗಿದ್ದು ಲೋಕಲ್ ಇಶ್ಯು. ಅದರ ಬಗ್ಗೆ ವಿವರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಕೋಲಾರದ ಇಬ್ಬರು ಮಹಿಳೆಯರಿಗೆ ಪ್ರಧಾನಿ ಮೋದಿ ಸನ್ಮಾನ