ಶೀಘ್ರದಲ್ಲೇ 10 ಸಾವಿರ ರೂ. ಬೆಲೆಯ ವಿದ್ಯುತ್ ಮೀಟರ್ 1000 ರೂ. ಗೆ- ಮೋದಿ ಸರ್ಕಾರದ ಹೊಸ ಯೋಜನೆ

Public TV
1 Min Read
electricity

 

ನವದೆಹಲಿ: ದುಬಾರಿ ಎಲೆಕ್ಟ್ರಿಸಿಟಿ ಮೀಟರ್‍ಗಳು ಹಾಗೂ ದೊಡ್ಡ ರೀಡಿಂಗ್‍ಗಳ ದಿನಗಳು ಶೀಘ್ರದಲ್ಲೇ ಕೊನೆಯಾಗಲಿವೆ. ಎಲ್‍ಇಡಿ ಬಲ್ಬ್‍ಗಳನ್ನು ಕಡಿಮೆ ಬೆಲೆಯನ್ನು ವಿತರಿಸಿದ ನಂತರ ಇದೀಗ ಮೋದಿ ಸರ್ಕಾರ ಮನೆ ಹಾಗೂ ಕಚೇರಿಗಳಿಗೆ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್‍ಗಳ ಬೆಲೆಯನ್ನು ಇಳಿಸಲು ಚಿಂತನೆ ನಡೆಸಿದೆ.

ಸುಮಾರು 10 ರಿಂದ 15 ಸಾವಿರ ರೂ. ಬೆಲೆಯಿರುವ ವಿದ್ಯುತ್ ಮೀಟರ್‍ಗಳು 1 ಸಾವಿರ ರೂ.ಗೆ ಇಳಿಕೆಯಾಗಲಿದೆ ಎಂದು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡುವ ವೇಳೆ ಪಿಯೂಶ್ ಗೋಯಲ್ ಸರ್ಕಾರದ ಈ ಯೋಜನೆಯ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಲಕ್ಷಾಂತರ ಹೊಸ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್‍ಗಳನ್ನು ಖರೀದಿಸಲು ಮುಂದಾಗಿರುವ ಬಗ್ಗೆ ಹೇಳಿದ್ರು. ಒಂದು ವೇಳೆ ಈ ಯೋಜನೆ ಜಾರಿಗೆ ಬಂದ್ರೆ ವಿದ್ಯುತ್ ಕಳ್ಳತನ ಹಾಗೂ ರೀಡಿಂಗ್‍ನಲ್ಲಿ ಮೋಸವಾಗುದನ್ನು ತಡೆಯಬಹುದು ಅಂತ ಅವರು ಹೇಳಿದ್ರು.

ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್‍ಗಳು ನಕಲು ಮಾಡದಂತವಾಗಿರುತ್ತವೆ. ರೀಡಿಂಗ್‍ಗಳು ನೇರವಾಗಿ ಕಂಪ್ಯೂಟರ್‍ಗೆ ಹೋಗುವುದರಿಂದ ಲೈನ್‍ಮನ್‍ಗಳಿಗೆ ಇದರಲ್ಲಿ ಕೆಲಸ ಇರುವುದಿಲ್ಲ. ಮೊದಲಿಗೆ ಇದರ ಬೆಲೆಯನ್ನು 2 ಸಾವಿರದಿಂದ 1500 ರವರೆಗೆ ಇಳಿಸಿ ಕೊನೆಗೆ 1 ಸಾವಿರ ರೂ. ಗಿಂತಲೂ ಕಡಿಮೆಗೆ ಇಳಿಸುವ ಪ್ರಯತ್ನ ಇದಾಗಿದೆ ಅಂದ್ರು. ಹರಿಯಾಣಾದಲ್ಲಿ ಇದೇ ರೀತಿಯ ಯೋಜನೆಗೆ ಮುಂದಾಗಿರುವ ಬಗ್ಗೆ ತಿಳಿಸಿದ್ರು.

ಇಡೀ ವಿಶ್ವದಲ್ಲೇ ಈ ರೀತಿಯ ಸಾಧನ ತಯಾರಿಸವಲ್ಲಿ ಭಾರತ ಅತ್ಯುತ್ತಮ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ಈ ಮೀಟರ್‍ಗಳು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಆಗಿರಲಿವೆ ಅಂತ ಹೇಳಿದ್ರು.

ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಅಂತ ಅವರು ಹೇಳಿದ್ರು. ಅಲ್ಲದೆ ಹೇಗೆ ಸರ್ಕಾರ ಎಲ್‍ಇಡಿ ಬಲ್ಬ್‍ಗಳ ಬೆಲೆಯನ್ನು 300 ರೂ.ನಿಂದ 40 ರೂ. ಗೆ ಇಳಿಸುವಲ್ಲಿ ಸಫಲವಾಗಿದೆ ಎಂಬ ಬಗ್ಗೆ ಗೋಯಲ್ ಮಾತನಾಡಿದ್ರು.

Share This Article
Leave a Comment

Leave a Reply

Your email address will not be published. Required fields are marked *