ಬೆಂಗಳೂರು: ಕೇಂದ್ರ ಸರ್ಕಾರ 5,700 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳನ್ನು (Electric Bus) ಬೆಂಗಳೂರಿಗೆ ನೀಡಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, FAME ಯೋಜನೆಗಳು ಮತ್ತು PM E-ಡ್ರೈವ್ ಮೂಲಕ 21,000 ಕ್ಕೂ ಹೆಚ್ಚು ವಿದ್ಯುತ್ ಬಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿತು. ಇವುಗಳಲ್ಲಿ 5,700 ಕ್ಕೂ ಹೆಚ್ಚು ಬಸ್‌ಗಳನ್ನು ಬೆಂಗಳೂರಿಗೆ ಹಂಚಿಕೆ ಮಾಡಲಾಗಿದೆ ಮತ್ತು 1,221 ಬಸ್‌ಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಚೇರಿ ಇನ್ಮುಂದೆ ಸೇವಾ ತೀರ್ಥ; ರಾಜಭವನಗಳಿಗೆ ಲೋಕಭವನ ಎಂದು ಮರುನಾಮಕರಣ ಮಾಡಿದ ಕೇಂದ್ರ
India is rapidly moving towards sustainable mobility under PM Shri @NarendraModi Ji with Bengaluru benefiting the most.
In response to my question in Lok Sabha today, GoI informed that over 21,000 electric buses have been awarded through the FAME schemes and PM E-Drive. Of… pic.twitter.com/Bmski7fGcT
— Tejasvi Surya (@Tejasvi_Surya) December 2, 2025
ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರ ಎಷ್ಟು ಎಲೆಕ್ಟ್ರಿಕ್ ಬಸ್ಸುಗಳನ್ನು ಬೆಂಗಳೂರಿಗೆ ನೀಡಿದೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಬೃಹತ್ ಕೈಗಾರಿಕೆ ರಾಜ್ಯ ಖಾತೆ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಉತ್ತರ ನೀಡಿದ್ದಾರೆ.
ಉತ್ತರ ಏನಿದೆ?
ಒಟ್ಟು FAME ನಲ್ಲಿ 425, FAME II ನಲ್ಲಿ 6,862, ಪಿಎಂ ಇ ಡ್ರೈವ್‌ನಲ್ಲಿ 13,800 ಎಲೆಕ್ಟ್ರಿಕ್ ಬಸ್ಸುಗಳನ್ನು ನೀಡಲಾಗಿದೆ. ಈ ಪೈಕಿ ಬೆಂಗಳೂರು ನಗರಕ್ಕೆ FAME II ನಲ್ಲಿ 1,221 ಪಿಎಂ ಇ ಡ್ರೈವ್‌ನಲ್ಲಿ 4,500 ಬಸ್ಸುಗಳನ್ನು ನೀಡಲಾಗಿದ್ದು ಈ ಪೈಕಿ 1,221 ಬಸ್ಸುಗಳು ಕಾರ್ಯಾಚರಣೆ ನಡೆಸುತ್ತಿದೆ.

