ಮುಂಬೈ: ಅಂಡರ್ ವರ್ಲ್ಡ್ ಡಾನ್ ಹಾಗೂ ಗ್ಯಾಂಗ್‍ಸ್ಟಾರ್ ದಾವೂದ್‍ನ ಸಹೋದರ ಇಕ್ಬಾಲ್ ಕಸ್ಕರ್ ಬಂಧನವಾದ ನಂತರ ಡಿ-ಕಂಪನಿಯ ಬಗ್ಗೆ ಹಲವಾರು ಶಾಕಿಂಗ್ ಸಂಗತಿಗಳನ್ನ ಬಹಿರಂಗಪಡಿಸಿದ್ದಾನೆ.
ದಾವೂದ್ ಇಬ್ರಾಹಿಂ ತನ್ನ ಡಿ-ಕಂಪನಿಯ ವ್ಯವಹಾರಗಳನ್ನು ನಡೆಸಲು ಹಲವು ಕೋಡ್‍ವರ್ಡ್‍ಗಳನ್ನು ಬಳಸುತ್ತಿದ್ದು, ಅದರಲ್ಲಿ ಭಾರತದ ಮತ್ತೊಬ್ಬ ಗ್ಯಾಂಗ್ ಸ್ಟಾರ್ ಚೋಟಾ ಶಕೀಲ್ ಹೆಸರಿನ ಬದಲಿಗೆ ಮೋದಿ ಹೆಸರನ್ನು, ಕರಾಚಿ ಹೆಸರಿನ ಬದಲಾಗಿ ದೆಹಲಿ ಎಂಬ ಕೋಡ್‍ವರ್ಡ್ ಬಳಸುತ್ತಿದ್ದ ಎಂದು ಕಸ್ಕರ್ ಹೇಳಿದ್ದಾನೆ.
Advertisement
ವರದಿಯೊಂದರ ಪ್ರಕಾರ ಡಿ-ಕಂಪನಿಯ ಮುಖ್ಯಸ್ಥ ದಾವೂದ್ ಹೆಸರಿಗೆ `ಬಡೆ’ ಎಂಬ ಕೋಡ್, ಪೊಲೀಸ್ ವ್ಯಾನ್‍ಗೆ `ಡಬ್ಬ’ ಎಂಬ ಕೋಡ್ ಬಳಸಲಾಗ್ತಿತ್ತು.
Advertisement
ಇದೀಗ ಒಂದು ಲಕ್ಷ ರೂ. ಸೂಚಿಸಲು ಬಳಸುತ್ತಿದ್ದ ಏಕ್ ಡಬ್ಬ ಕೋಡ್ ಬದಲಿಗೆ ಏಕ್ ಪೇಟಿ ಎಂಬ ಹೊಸ ಕೋಡ್ ಹಾಗೇ ಒಂದು ಕೋಟಿ ರೂ.ಗೆ ಇದ್ದ ಏಕ್ ಕೋಕಾ ಕೋಡ್ ಬದಲಿಗೆ ಏಕ್ ಬಾಕ್ಸ್ ಎಂಬ ಕೋಡ್ ಪದಗಳನ್ನು ಬಳಸಲಾಗುತ್ತಿದೆ ಎಂದು ಕಸ್ಕರ್ ತಿಳಿಸಿದ್ದಾನೆ.
Advertisement
ದಾವೂದ್ ಡಿ-ಕಂಪನಿಯು ಈ ಕೋಡ್‍ಗಳನ್ನು ತನ್ನ ಕ್ರಮಿನಲ್ ಚಟುವಟಿಕೆಗಳಿಗಾಗಿ ಬಳಸಿಕೊಳ್ಳುತ್ತಿತ್ತು. ಇದರ ಜೊತೆಗೆ ತನ್ನ ಸಹೋದರರಾದ ದಾವೂದ್ ಮತ್ತು ಅನೀಸ್ ಇಬ್ರಾಹಿಂ ಇಬ್ಬರೂ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಅವರು ದುಬೈ ಪ್ರಯಾಣವನ್ನು ಮಾಡುವ ವೇಳೆ ಯಾವುದೇ ದಾಖಲೆಗಳನ್ನು ಬಳಸುವುದಿಲ್ಲ. ಗುಪ್ತಚರ ಸಂಸ್ಥೆಗಳ ಕಣ್ ತಪ್ಪಿಸಲು ಈ ರೀತಿಯ ಮಾರ್ಗವನ್ನು ಅನುಸರಿಸುತ್ತಾರೆ ಎಂದು ಕಸ್ಕರ್ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
Advertisement
ದಾವೂದ್ ಸಹೋದರ ಕಸ್ಕರ್‍ನನ್ನು ಮುಂಬೈ ಪೊಲೀಸರು ಸುಲಿಗೆ ದಂಧೆ ಪ್ರಕರಣದಲ್ಲಿ ಸೆಪ್ಟೆಂಬರ್ 23 ರಂದು ಬಂಧಿಸಿದ್ದರು. ಕೇಂದ್ರ ಗುಪ್ತದಳ ಮತ್ತು ಠಾಣೆ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಕಸ್ಕರ್ ವಿಚಾರಣೆಯನ್ನು ಮಾಡುತ್ತಿದ್ದಾರೆ.