– ಸಿಎಂ ವಿಚಾರದ ಹೇಳಿಕೆಗೆ ಈಗಲು ಬದ್ಧ
ಬೆಂಗಳೂರು: ಪ್ರಧಾನಿ ಮೋದಿ (PM Modi) ಹಳ್ಳಿ-ಹಳ್ಳಿಗೆ ಹೋಗಿ ಕರ್ನಾಟಕದ (Karnataka) ವಿಚಾರ ಪ್ರಚಾರ ಮಾಡ್ತಾರೆ, ಅದಕ್ಕೆ ಕಾಂಗ್ರೆಸ್‌ಗೆ ಹಿನ್ನಡೆ ಆಗುತ್ತದೆ ಎಂದು ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ (KB Koliwada) ಕಿಡಿಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಅವರು, ನಾನು ಅವತ್ತೇ ಹೇಳಿದ್ದೆ. ಮೋದಿ ಹರಿಯಾಣದಲ್ಲಿ (Hariyana) ಹಳ್ಳಿ ಹಳ್ಳಿಗೆ ಹೋಗಿ ಕರ್ನಾಟಕದ ವಿಚಾರ ಪ್ರಚಾರ ಮಾಡ್ತಾರೆ. ಆದ್ದರಿಂದ ಹಿನ್ನಡೆ ಆಗುತ್ತದೆ ಎಂದು ಹೇಳಿದ್ದೆ, ಈಗ ಅದು ಎಫೆಕ್ಟ್ ಆಗಿದೆ. ಹರಿಯಾಣದಲ್ಲಿ ಹಿನ್ನಡೆ ಆಗುತ್ತಿದೆ. ಪಾರ್ಟಿಗೆ ಮುಜುಗರ ಆಗಿದೆ ಎಂದು ಬೇಸರ ಹೊರಹಾಕಿದರು.ಇದನ್ನೂ ಓದಿ: Haryana Election Results | ಆಪ್‌ನಿಂದ ಬಿಜೆಪಿ ಮುನ್ನಡೆ?
ಸಿಎಂ ವಿಚಾರದಲ್ಲಿ ನಾನು ಅಂದು ಹೇಳಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಪಕ್ಷಕ್ಕೆ ಧಕ್ಕೆಯಾದರೆ ನೋಟಿಸ್ ಕೊಡುತ್ತಾರೆ. ಪಕ್ಷದ ದೃಷ್ಟಿಯಿಂದ ಹೇಳಿದ್ದೇನೆ. ಇವತ್ತು ಹರಿಯಾಣ ಚುನಾವಣೆಯಲ್ಲಿ ಎಫೆಕ್ಟ್ ಆಗಿದೆ. ಪ್ರಚಾರದಲ್ಲಿ ಮೋದಿ ಕರ್ನಾಟಕದ ಬಗ್ಗೆ ಮಾತನಾಡಿದ್ದರು. ಪದೇ ಪದೇ ಮಾತನಾಡಿರುವುದು ಎಫೆಕ್ಟ್ ಆಗಿದೆ. ಇನ್ನೂ ಪೂರ್ಣ ಪ್ರಮಾಣದ ಫಲಿತಾಂಶ ಬಂದಿಲ್ಲ ಆದರೆ ಎಫೆಕ್ಟ್ ಆಗಿದೆ. ನಾನು ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಆದರೆ ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜಾತಿ ಜನಗಣತಿ ವಿಚಾರ:
ಜಾತಿ ಜನಗಣತಿ (Caste Census) ಮಾಡುವಾಗ ನಾನೇ ವೈಯಕ್ತಿಕವಾಗಿ ಹಲವು ಕಡೆ ಹೋಗಿದ್ದೇನೆ. ಪ್ರತಿಯೊಂದು ಮನೆಗೆ ಭೇಟಿ ನೀಡಿದ್ದೇನೆ. ನಾನು ಪ್ರತಿ ಊರು ಪ್ರತಿ ಹಳ್ಳಿ ಅಡ್ಡಾಡಿದ್ದೇನೆ. ಜಾತಿ ಜನಗಣತಿ ಸರಿಯಾಗಿ ಆಗಿದೆ. ಶಾಮನೂರು ಶಿವಶಂಕರಪ್ಪ ಅಡ್ಡಾಡಿದ್ದಾರಾ? ಮನೆಯಲ್ಲಿ ಕುಳಿತು ಮಾತನಾಡಿದ್ರೆ ಆಗಲ್ಲ. ಆದಷ್ಟು ಬೇಗ ಜಾರಿ ಮಾಡಬೇಕು ಎಂದರು.ಇದನ್ನೂ ಓದಿ: ಹರಿಯಾಣದಲ್ಲಿ ನಮ್ದೇ ಸರ್ಕಾರ, 50 ಸೀಟ್ ಪಕ್ಕಾ ಅಂತ ಆಂತರಿಕ ಸಮೀಕ್ಷೆ ಹೇಳಿದೆ: ಪರಮೇಶ್ವರ್
ಜಾತಿ ಉಪಜಾತಿಯನ್ನೂ ಕೂಡ ದಾಖಲು ಮಾಡಿಕೊಂಡಿದ್ದಾರೆ. ಬಹಳ ಉತ್ತಮವಾಗಿ ಜನಗಣತಿ ಮಾಡಿದ್ದಾರೆ ಅದನ್ನು ಆದಷ್ಟು ಬೇಗ ಜಾರಿ ಮಾಡಬೇಕು. ಜಾರಿ ಮಾಡುವುದು ಇನ್ನೂ ಮುಂದೂಡುವ ಅವಶ್ಯಕತೆ ಇಲ್ಲ. ಒಂದು ತಿಂಗಳು ಟೈಂ ಕೊಟ್ಟು ಏನಾದರೂ ಬದಲಾವಣೆ ಇದ್ದರೆ ಮಾಡಲಿ. ಸಬ್ ಕಮಿಟಿ ಮಾಡಿ ಇನ್ನೂ ಮುಂದೂಡುವ ಅವಶ್ಯಕತೆ ಇಲ್ಲ. ಕಾಂತರಾಜು ವರದಿ ಕೇವಲ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಜನಗಣತಿ ಮಾತ್ರವಲ್ಲ. ಅದು ಜಾತಿ ಜನಗಣತಿ ಕೂಡ ಹೌದು. ವೈಜ್ಞಾನಿಕ ಅವೈಜ್ಞಾನಿಕ ಎಂದರೆ ಏನೂ ಅಂತ ಅರ್ಥ ಆಗುತ್ತಿಲ್ಲ. ಇದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದು ನನಗೆ ಅನಿಸುವುದಿಲ್ಲ ಎಂದು ತಿಳಿಸಿದರು.