ನಿನ್ನೆ ನಡೆದ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಔತಣಕೂಟದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಸ್ಯಾಂಡಲ್ ವುಡ್ ಸಿಲೆಬ್ರಿಟಿಗಳು. ರಾತ್ರಿ 8.20 ರಿಂದ ರಾಜಭವನದಲ್ಲಿ ನಡೆದ ಔತಣಕೂಟದಲ್ಲಿ ಯಾರೆಲ್ಲ ಭಾಗಿ ಆಗಲಿದ್ದಾರೆ ಎನ್ನುವುದು ಸಂಜೆವರೆಗೂ ಸ್ವತಃ ರಾಜ್ಯ ಸರಕಾರಕ್ಕೂ ಮಾಹಿತಿ ಇರಲಿಲ್ಲ. ಆ ಮಟ್ಟದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿತ್ತು. ಸಂಜೆ 8.30ರ ನಂತರ ನಡೆದ ಔತಣಕೂಟದಲ್ಲಿ ನಟ ಯಶ್, ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್, ಹಾಗೂ ಶ್ರದ್ಧಾ ಜೈನ್ ಅವರು ಭಾಗಿಯಾಗಿದ್ದರು.
Advertisement
ನಿನ್ನೆ ನಡೆದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಚಿತ್ರೋದ್ಯಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದ ಚಿತ್ರಗಳಿಗಿಂತ ಹೆಚ್ಚು ಖ್ಯಾತಿ ಗಳಿಸುತ್ತಿರುವುದಕ್ಕೆ ಪ್ರಧಾನಿ ಮೆಚ್ಚುಗೆಯನ್ನೂ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:`ಕಾಂತಾರ’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲಲು ಅಸಲಿ ಕಾರಣ ಬಿಚ್ಚಿಟ್ಟ ರಿಷಬ್ ಶೆಟ್ಟಿ
Advertisement
Advertisement
ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನ್ನಡ ಚಿತ್ರೋದ್ಯಮವು ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹಾಡಿಹೊಗಳಿದ್ದಾರೆ. ದೇಶ-ವಿದೇಶಗಳಿಗೆ ನಮ್ಮ ಪರಂಪರೆಯನ್ನು ಕನ್ನಡ ಚಿತ್ರರಂಗದ ಮೂಲಕ ಪರಿಚಯಿಸುತ್ತಿರುವುದಕ್ಕೆ ಅಭಿನಂದನೆ ವ್ಯಕ್ತ ಪಡಿಸಿದ್ದಾರೆ. ಕನ್ನಡ ಚಿತ್ರೋದ್ಯಮದ ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ.
Advertisement
ಕನ್ನಡ ಸಿನಿಮಾ ರಂಗದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರ ಜನಪ್ರಿಯತೆಯನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ಅಶ್ವಿನಿ ಕುಮಾರ್ ಜೊತೆ ಕೆಲ ಸಮಯ ಮಾತನಾಡಿದ ಪ್ರಧಾನಿ, ಪುನೀತ್ ಅವರು ಈ ನಾಡಿಗೆ ನೀಡಿದ ಕೊಡುಗೆಯನ್ನು ಕೊಂಡಾಡಿದ್ದಾರೆ. ಪುನೀತ್ ಅವರ ಸೇವೆಯನ್ನು ಈ ದೇಶ ಯಾವತ್ತೂ ಮರೆಯುವುದಿಲ್ಲ ಎಂದು ಸ್ಮರಿಸಿದ್ದಾರೆ.
ಕನ್ನಡ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ಯಶ್ ಮತ್ತು ರಿಷಬ್ ಶೆಟ್ಟಿ ಜೊತೆಯೂ ಪ್ರಧಾನಿ ಮೋದಿ ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ. ಇಬ್ಬರ ಕಲಾಪ್ರೌಢಿಮೆಯನ್ನು ಮೆಚ್ಚಿ ಮಾತನಾಡಿದ್ದಾರೆ.
ಇನ್ನಷ್ಟು ಕೀರ್ತಿಗಳಿಸುವಂತೆ ಇಬ್ಬರಿಗೂ ಬೆನ್ನು ತಟ್ಟಿ ಶುಭ ಹಾರಿಸಿದ್ದಾರೆ. ಜೊತೆಗೆ ಹೊಂಬಾಳೆ ಫಿಲ್ಮ್ಸ್ ಬಗ್ಗೆಯೂ ಮೆಚ್ಚಿಕೊಂಡ ಮೋದಿ, ಯುವ ನಿರ್ಮಾಪಕ ವಿಜಯ್ ಕಿರಗಂದೂರು ಬೆನ್ನು ತಟ್ಟಿದ್ದಾರೆ. ಮಾಜಿ ರೆಡಿಯೋ ಜಾಕಿ ಶ್ರದ್ಧಾ ಜೈನ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k