ಬೆಂಗಳೂರು: ಸಿಎಂ ಮತ್ತು ನನ್ನ ಫೋನ್ ಅನ್ನು ಪ್ರಧಾನಿ ಮೋದಿ (PM Modi), ಅಮಿತ್ ಶಾ (Amit Shah) ಟ್ಯಾಪ್ ಮಾಡಿಸ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿಯಿಂದ (Rahul Gandhi) ಪ್ರಧಾನಿ ಮೋದಿಯವರ ಮೇಲೆ ಫೋನ್ ಕದ್ದಾಲಿಕೆ ಮಾಡಿರೋ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಫೋನ್ ಕದ್ದಾಲಿಕೆ ಮೊದಲು ಅವರ ಮಿನಿಸ್ಟರ್ರದ್ದೇ ಪ್ರಾರಂಭ ಮಾಡ್ತಾರೆ. ಪೆಗಾಸಿಸ್ ಏನ್ ಮಾಡಿದ್ರು. ಪೆಗಾಸಿಸ್ ಸಾಫ್ಟ್ವೇರ್, ಸ್ಪೈವೇರ್ ಅನ್ನು ಇಸ್ರೇಲ್ನಿಂದ ಕೊಂಡುಕೊಂಡಿದ್ದು ನಿಜಾನಾ? ದಾಖಲೆ ಸುಪ್ರೀಂಕೋರ್ಟ್ ನಲ್ಲಿ ಇವೆ. ಅದನ್ನ ಮೊದಲು ಅವರ ಕ್ಯಾಬಿನೆಟ್ ಮಂತ್ರಿಗಳ ಮೇಲೆ ಪ್ರಯೋಗ ಮಾಡಿದ್ರು. ಅದಾದ ಮೇಲೆ ವಿಪಕ್ಷಗಳಿಗೆ ಬಂದಿದ್ದಾರೆ. ಇದು ನಿಜವಾದ ಗುಜರಾತ್ ಮಾಡೆಲ್ ಡೆವಲಪ್ಮೆಂಟ್ ಅವರದ್ದು. ಗುಜರಾತ್ನಲ್ಲೂ ಹೀಗೆ ಮಾಡಿ ವಿಪಕ್ಷಗಳನ್ನ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ರು. ಇದೇ ಗುಜರಾತ್ ಮಾಡೆಲ್ ಅನ್ನ ರಾಷ್ಟ್ರಾದ್ಯಂತ ಉಪಯೋಗ ಮಾಡ್ತಾ ಇದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹಿರಿಯೂರು ಟಿಕೆಟ್ ಹೈಕಮಾಂಡ್ ನಿರ್ಧಾರವೇ ಅಂತಿಮ – ರಾಜ್ಯದಲ್ಲಿರುವುದು ಬೆಲೆ ಏರಿಕೆ ಸರ್ಕಾರ: ಅಶೋಕ್ ವಾಗ್ದಾಳಿ
ಫೋನ್ ಕದ್ದಾಲಿಕೆ ಮಾಡಿಯೇ ಅವರಿಗೆ ಮಾಹಿತಿ ಸಿಗುತ್ತಿದೆ. ಬಿಜೆಪಿ ಅವರು ವಾಷಿಂಗ್ ಮಿಷನ್ ಇಟ್ಟಿದ್ದಾರೆ. ಕಾಂಗ್ರೆಸ್ನಲ್ಲಿ ಇದ್ದರೆ ದುಷ್ಟರು, ಭ್ರಷ್ಟರು. ಬಿಜೆಪಿಗೆ ಸೇರಿದ್ರೆ ಕಂಪ್ಲೀಟ್ ವೈಟ್ ವಾಶ್ ಆಗಿ ಅವರಷ್ಟು ಸಾಚಾ ಮನುಷ್ಯ ಯಾರು ಇಲ್ಲ. ಬೆಂಗಾಲ್, ಅಸ್ಸಾಂ, ಮಹಾರಾಷ್ಟ್ರ ಕರ್ನಾಟಕ ಅನೇಕ ಉದಾಹರಣೆ ಇವೆ. ಮೋದಿ, ಅಮಿತ್ ಶಾ ಅವರು ಸಿಕ್ಕಾಪಟ್ಟೆ ಇನ್ ಸೆಕ್ಯೂರ್ ಆಗಿದ್ದಾರೆ. 10 ವರ್ಷಗಳಿಂದ ಏನು ಸಾಧನೆ ಮಾಡಿಲ್ಲ. ನಾವು ಅದನ್ನ ವೋಟ್ ಚೂರಿ, ಎಲೆಕ್ಷನ್ ಕಮೀಷನ್ ವಿಚಾರ, ನಿರುದ್ಯೋಗ ಇರಬಹುದು, ಚೈನಾ ವಿದೇಶಿ ನೀತಿ ವೈಫಲ್ಯ, ಪಾಕಿಸ್ತಾನ ವಿದೇಶ ನೀತಿ ವೈಫಲ್ಯ ಇವೆಲ್ಲದರ ಬಗ್ಗೆ ಜನ ಪ್ರಶ್ನೆ ಕೇಳ್ತಿದ್ದಾರೆ. ಇದೆಲ್ಲವನ್ನೂ ವೀಕ್ ಮಾಡೋದಕ್ಕೆ, ಹೆದರಿಸೋಕೆ, ಬೆದರಿಸೋಕೆ ವಿಪಕ್ಷಗಳನ್ನ ಹತೋಟಿಯಲ್ಲಿ ಇಟ್ಟುಕೊಳ್ಳೋಕೆ ಪ್ರಯತ್ನ ಆಗ್ತಿದೆ. ಇದಕ್ಕೆಲ್ಲ ಜಗ್ಗೋದಿಲ್ಲ ಬಗ್ಗೋದಿಲ್ಲ ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನನ್ನದು ಇರಬಹುದು ಎಲ್ಲರದ್ದು ಫೋನ್ ಕದ್ದಾಲಿಕೆ ಆಗುತ್ತಿರುತ್ತದೆ. ಸಿಎಂ ಅವರದ್ದು 100% ಫೋನ್ ಕದ್ದಾಲಿಕೆ ಮಾಡಿರುತ್ತಾರೆ. ನಾನು ಗೃಹ ಸಚಿವ ನನ್ನ ಫೋನ್ ಕದ್ದಾಲಿಕೆ ಮಾಡೇ ಮಾಡಿರುತ್ತಾರೆ. ನನಗೆ ಆರ್ಎಸ್ಎಸ್ ಅವರು ಬಿಡ್ತಾರಾ?. ನಮಗೆ ಫೋನ್ ಬೆದರಿಕೆ ಬಂದಿರೋದು ನಿಜ ಅಲ್ಲವಾ? ಮೋದಿ, ಅಮಿತ್ ಶಾ ನಂಬೋಕೆ ಆಗಲ್ಲ. ನಿಮ್ಮದು ಬೇಕಾದ್ರೆ ಮಾಡ್ತಾರೆ. ನೀವು ನಾಳೆ ಅವರಿಗೆ ಥ್ರೆಟ್ ಅಂತ ಗೊತ್ತಾದ್ರೆ ನಿಮ್ಮದು ಮಾಡ್ತಾರೆ. ಅವರಿಗೆ ಯಾರು ಥ್ರೆಟ್ ಅನ್ನಿಸ್ತಾರೆ, ಯಾರು ಅವರನ್ನ ಪ್ರಶ್ನೆ ಮಾಡ್ತಾರೆ ಅದು ಅವರಿಗೆ ಇಷ್ಟ ಆಗಲ್ಲ. ಆಗ ಅವರು ಏನ್ ಮಾಡಬೇಕೋ ಮಾಡ್ತಾರೆ ಅಂತ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ಬಾಗಲಕೋಟೆಯಲ್ಲಿ ಕೆಆರ್ಎಸ್ ಕಾರ್ಯಕರ್ತರ ಪ್ರತಿಭಟನೆ
