– ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಕೆ
ಬೆಂಗಳೂರು: ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ (Bengaluru) ಸಾಧಾರಣ ಮಳೆಯಾಗುವ (Rain) ಸಾಧ್ಯತೆಯಿದ್ದು, ಮೇ 7 ಹಾಗೂ 8 ರ ಬಳಿಕ ನಗರದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಮುಂದಿನ ಮೂರು ದಿನ ಉಷ್ಣಾಂಶ ಗರಿಷ್ಠ 38 ಹಾಗೂ ಕನಿಷ್ಠ 24 ಡಿಗ್ರಿ ತಾಪಮಾನ ಮುಂದುವರಿಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆಲ ಕಡೆ ಹಗುರ ಮಳೆಯಾಗುವ ಸಂಭವವಿದೆ. ಮೇ 7ರ ಬಳಿಕ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಲಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಇದನ್ನೂ ಓದಿ: ಎಳನೀರು ಸೇವಿಸಿ ದಲಿತರೊಂದಿಗೆ ನಾವಿದ್ದೇವೆ ಅಂದ್ರು ಯದುವೀರ್
ಸತತ ಎರಡನೇ ದಿನವೂ ನಗರದಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಗಾಳಿ ಸಹಿತ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶುಕ್ರವಾರವೂ ಸಿಲಿಕಾನ್ ಸಿಟಿಯ ಹಲವೆಡೆ ಗಾಳಿ ಸಹಿತ ಮಳೆಯಾಗಿದ್ದು, ನಾಯಂಡಹಳ್ಳಿಯಲ್ಲಿ ಗರಿಷ್ಠ ಪ್ರಮಾಣದ ಮಳೆ ದಾಖಲಾಗಿದೆ. ಇಂದೂ ಕೂಡ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಜಾಗತಿಕ ವೇದಿಕೆಯಲ್ಲಿ ಭಾರತವಲ್ಲ ಈಗ ಪಾಕಿಸ್ತಾನ ಅಳುತ್ತಿದೆ: ಮೋದಿ
ಶುಕ್ರವಾರ ಎಲ್ಲೆಲ್ಲಿ ಎಷ್ಟು ಮಳೆ ದಾಖಲಾಗಿದೆ?
ನಾಯಂಡಹಳ್ಳಿ -2.9 ಸೆಂ.ಮೀ
ರಾಜರಾಜೇಶ್ವರಿನಗರ- 2.90 ಸೆಂ.ಮೀ
ಮಾರುತಿ ಮಂದಿರವಾರ್ಡ್- 2.65 ಸೆಂ.ಮೀ
ಬಿಳೇಕಹಳ್ಳಿ- 2.45 ಸೆಂ.ಮೀ
ಹಂಪಿನಗರ – 2.40 ಸೆಂ.ಮೀ
ಕೆಂಗೇರಿ – 2.05 ಸೆಂ.ಮೀ
ವಿದ್ಯಾಪೀಠ – 2.05 ಸೆಂ.ಮೀ
ಕಮ್ಮನಹಳ್ಳಿ – 1.90 ಸೆಂ.ಮೀ
ರಾಮಮೂರ್ತಿನಗರ – 1.75 ಸೆಂ.ಮೀ
ಹೊರಮಾವು – 1.75 ಸೆಂ.ಮೀ
ಕೊಟ್ಟಿಗೆಪಾಳ್ಯ – 1.70 ಸೆಂ.ಮೀ
ಹೆಮ್ಮಿಗೆಪುರ – 1.45 ಸೆಂ.ಮೀ
ಅರಕೆರೆ – 1.35 ಸೆಂಟಿ ಮೀ
ಬಿಟಿಎಂ ಲೇಔಟ್ – 1.35 ಸೆಂ.ಮೀ
ಚಾಮರಾಜಪೇಟೆ – 1.35 ಸೆಂ.ಮೀ
ಉತ್ತರಹಳ್ಳಿ – 1.15 ಸೆಂ.ಮೀ
ಸಂಪಂಗಿರಾಮನಗರ – 1.10 ಸೆಂ.ಮೀ