ಸ್ಯಾನ್ ಸಾಲ್ವಡೋರ್: ಸೌಂದರ್ಯ ಸ್ಪರ್ಧೆಯೊಂದಲ್ಲಿ ರೂಪದರ್ಶಿಯ ಕಾಸ್ಟ್ಯೂಮ್‍ಗೆ ಬೆಂಕಿ ಹೊತ್ತಿಕೊಂಡ ಘಟನೆ ಮಧ್ಯ ಅಮೆರಿಕದ ಎಲ್ ಸಾಲ್ವಡೋರ್‍ನಲ್ಲಿ ನಡೆದಿದೆ. ಅದೃಷ್ಟವಶಾತ್ ಆಕೆ ಅಗ್ನಿ ಅವಘಡದಿಂದ ಪಾರಾಗಿದ್ದಾರೆ.
ದೊಡ್ಡದಾದ ಪುಕ್ಕದ ಕಿರೀಟ ತೊಟ್ಟು ವೇದಿಕೆ ಮೇಲೆ ರೂಪದರ್ಶಿ ಬಂದ್ರು. ವೇದಿಕೆಯ ಎರಡೂ ಬದಿಯಲ್ಲಿ ಯುವಕರಿಬ್ಬರು ಪಂಜು ಹಿಡಿದು ನಿಂತಿದ್ರು. ರೂಪದರ್ಶಿ ಹೆಜ್ಜೆ ಹಾಕುವಾಗ ಒಂದು ಪಂಜಿಗೆ ತೀರಾ ಸಮೀಪ ಹೋಗಿದ್ದು, ಪುಕ್ಕಕ್ಕೆ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಿರೀಟವನ್ನ ಆವರಿಸಿದೆ.
ತನ್ನ ಕಾಸ್ಟ್ಯೂಮ್‍ಗೆ ಬಂಕಿ ಹೊತ್ತಿಕೊಂಡಿದ್ದು ಗೊತ್ತಾಗದೆ ರೂಪದರ್ಶಿ ತನ್ನ ನಡಿಗೆ ಮುಂದುವರೆಸಿದ್ದರು. ಅದೃಷ್ಟವಶಾತ್ ಅಲ್ಲಿದ್ದವರು ಇದನ್ನ ನೋಡಿ ಕೂಡಲೇ ರೂಪದರ್ಶಿಯ ನೆರವಿಗೆ ಧಾವಿಸಿದ್ರು. ಇಬ್ಬರು ವ್ಯಕ್ತಿಗಳು ಬರಿಗೈಯಲ್ಲೇ ಬೆಂಕಿಯನ್ನ ಆರಿಸಿದ್ದು, ಇನ್ನಿತರರು ಸ್ಪರ್ಧಿಯ ತಲೆಯಿಂದ ಉಳಿದ ಪುಕ್ಕವನ್ನ ತೆಗೆಸಿದ್ರು.
ಘಟನೆಯಲ್ಲಿ ರೂಪದರ್ಶಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ವಿಡಿಯೋದಲ್ಲಿ ಕಾಣುತ್ತದೆ. ಬಳಿಕ ಆಕೆ ವೇದಿಕೆಯಿಂದ ಹೊರನಡೆದಿದ್ದಾರೆ. ಮಾಧ್ಯಮವೊಂದರ ಪ್ರಕಾರ ಕೆಲ ಸಮಯದ ನಂತರ ಸೌಂದರ್ಯ ಸ್ಪರ್ಧೆಯನ್ನು ಮುಂದುವರೆಸಲಾಗಿದೆ.
https://www.youtube.com/watch?v=jtJt1lSTbHQ