Connect with us

International

200ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ – ಸರಿಯಾದ ಸಂಗಾತಿ ಸಿಗದ್ದಕ್ಕೆ ನಾಯಿ ಜೊತೆ ಮದ್ವೆ

Published

on

ಲಂಡನ್: ಮಾಡೆಲ್ ಒಬ್ಬಳು 200ಕ್ಕೂ ಹೆಚ್ಚು ಯುವಕರ ಜೊತೆ ಡೇಟ್ ಮಾಡಿ ಕೊನೆಗೆ ಸರಿಯಾದ ಸಂಗಾತಿ ಸಿಗಲಿಲ್ಲ ಎಂದು ನಾಯಿಯನ್ನು ಮದುವೆಯಾದ ಘಟನೆ ಲಂಡನ್‍ನಲ್ಲಿ ನಡೆದಿದೆ.

49 ವರ್ಷದ ಸ್ವಿಮ್‍ಸೂಟ್ ಮಾಡೆಲ್ ಎಲಿಜಬೆತ್ ಹುಡ್ 6 ವರ್ಷದ ಸಾಕು ನಾಯಿಯನ್ನು ಮದುವೆಯಾಗಿದ್ದಾಳೆ. ವಿಶೇಷವೆನೆಂದರೆ ಎಲಿಜಬೆತ್ ಮದುವೆ ಟಿವಿಯಲ್ಲಿ ಪ್ರಸಾರವಾಗಿದ್ದು, ವಿಶ್ವಾದ್ಯಂತ ಹಲವು ಮಂದಿ ಇದನ್ನು ವೀಕ್ಷಿಸಿದ್ದಾರೆ.

ಎಲಿಜಬೆತ್ ಕಳೆದ ವರ್ಷ 200ಕ್ಕೂ ಹೆಚ್ಚು ಯುವಕರ ಜೊತೆ ಡೇಟ್ ಮಾಡಿದ್ದಾಳೆ. ಆದರೆ ಆಕೆಗೆ ಇಷ್ಟವಾಗುವಂತಹ ಸಂಗಾತಿ ಸಿಗಲಿಲ್ಲ. ಹೀಗಾಗಿ ಆಕೆ ತಾನು ಸಾಕಿದ ನಾಯಿಯನ್ನೇ ತನ್ನ ಜೀವನ ಸಂಗಾತಿಯಾಗಿ ಮಾಡಿಕೊಂಡಿದ್ದಾಳೆ. ಎಲಿಜಬೆತ್‍ಗೆ ಈಗಾಗಲೇ 25 ವರ್ಷದ ಮಗ ಇದ್ದಾನೆ. ನನ್ನ ತಾಯಿಗೆ ಯಾವುದೇ ಪುರುಷನ ಅಗತ್ಯ ಇಲ್ಲ. ಈಗ ಅವರು ತಮ್ಮ ಇಡೀ ಜೀವನವನ್ನು ನಾಯಿಯ ಜೊತೆ ಕಳೆಯುತ್ತಾರೆ ಎಂದು ಮಗ ಪ್ರತಿಕ್ರಿಯಿಸಿದ್ದಾನೆ.

ಹಲವು ಡೇಟಿಂಗ್ ವೆಬ್‍ಸೈಟ್ ಮೂಲಕ ಎಲಿಜಬೆತ್ 200ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ ಮಾಡಿದ್ದಾಳೆ. ಆದರೆ ಯಾರು ಇಷ್ಟ ಆಗದಿದ್ದಾಗ ತಾನು ಸಾಕಿದ್ದ ನಾಯಿ ಲೋಗನ್‍ನನ್ನು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಎಲಿಜಬೆತ್‍ಗೆ ಯಾವುದೇ ಷರತ್ತು ಹಾಕದ ಪ್ರೇಮಿ ಬೇಕಾಗಿತ್ತು. ಹಾಗಾಗಿ ಆಕೆ 6 ವರ್ಷದ ನಾಯಿಯ ಜೊತೆ ಮದುವೆಯಾಗಿದ್ದಾಳೆ. ಮದುವೆ ದಿನದಂದು ಲೋಗನ್ ರಿಸ್ಟ್ ಬ್ಯಾಂಡ್ ಧರಿಸಿತ್ತು ಹಾಗೂ ಎಲಿಜಬೆತ್ ವೆಡ್ಡಿಂಗ್ ರಿಂಗ್ ಧರಿಸಿದ್ದಳು.

ತನ್ನ ಮದುವೆಗೆ ಎಲಿಜಬೆತ್ ಕೇವಲ 20 ಮಂದಿಯನ್ನು ಆಹ್ವಾನಿಸಿದ್ದು, ಮದುವೆ ನಂತರ ಎಲಿಜಬೆತ್ ತನ್ನ ನಾಯಿಯೊಂದಿಗೆ ಹನಿಮೂನ್ ಕೂಡ ಹೋಗಿದ್ದಾಳೆ. ಎಲಿಜಬೆತ್ ತನ್ನ ನಾಯಿಗಾಗಿ ಡಾಗ್ ಫ್ರೆಂಡ್ಲಿ ಹೋಟೆಲಿನಲ್ಲಿ ರೂಂ ಬುಕ್ ಕೂಡ ಮಾಡಿದ್ದಳು. ಎಲಿಜಬೆತ್‍ಗೆ ಈಗಾಗಲೇ ಇಬ್ಬರ ಜೊತೆ ನಿಶ್ಚಿತಾರ್ಥವಾಗಿದೆ. ನಿಶ್ಚಿತಾರ್ಥ ಮಾಡಿಕೊಂಡ ನಂತರ ಯಾವುದೋ ಕಾರಣಕ್ಕೆ ಸಂಬಂಧ ಮುರಿದು ಬಿದ್ದಿತ್ತು. ಇದರಿಂದ ನಿರಾಸೆಯಾಗಿದ್ದ ಎಲಿಜಬೆತ್ ನಾಯಿಯನ್ನು ಮದುವೆಯಾಗಿದ್ದಾಳೆ.

ನನಗೆ ಡೇಟಿಂಗ್ ಹಾಗೂ ಪುರುಷರ ಸಹವಾಸ ಸಾಕಾಗಿ ಹೋಗಿದೆ. ನಾನು ಕಳೆದ 8 ವರ್ಷದಿಂದ ಆರು ವೆಬ್‍ಸೈಟ್ ಮೂಲಕ 200ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ ಮಾಡಿದ್ದೇನೆ. ಆದರೆ ಅವರ ಜೊತೆಗಿನ ನನ್ನ ಅನುಭವ ಚೆನ್ನಾಗಿ ಇರಲಿಲ್ಲ. ಹಾಗಾಗಿ ನಾನು ಲೋಗನ್‍ನನ್ನು ಮದುವೆಯಾದೆ. ನಾನು ಹಾಗೂ ಲೋಗನ್ ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾನು ಹುಚ್ಚಿ ಆಗಿದ್ದೇನೆ ಎಂದು ಜನರು ಹೇಳುತ್ತಾರೆ. ಆದರೆ ಜನರ ಮಾತು ಕೇಳಿಸಿಕೊಂಡು ನಾನು, ಲೋಗನ್ ದೂರವಾಗುವುದಿಲ್ಲ ಎಂದು ಎಲಿಜಬೆತ್ ತಿಳಿಸಿದ್ದಾಳೆ.

Click to comment

Leave a Reply

Your email address will not be published. Required fields are marked *