ದುಬೈ: ತನ್ನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ವ್ಯಕ್ತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಾಡೆಲ್ವೊಬ್ಬರು ಕಟ್ಟಡದ 6ನೇ ಮಹಡಿಯಿಂದ ಜಿಗಿದಿರುವ ಘಟನೆ ದುಬೈನಲ್ಲಿ ನಡೆದಿದೆ.
ರಷ್ಯಾ ಮೂಲದ ನಟಿಯಾಗಿರುವ ಎಕಡೆರಿನಾ ಸ್ಟೆಟ್ಸುಕ್ ಕಟ್ಟಡದಿಂದ ಜಿಗಿದ ಮಾಡೆಲ್ ಆಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಎತ್ತರದಿಂದ ಜಿಗಿದ ಕಾರಣ ಅವರ ಬೆನ್ನುಮೂಳೆ ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ವರದಿಯ ಪ್ರಕಾರ ಅಮೆರಿಕ ಮೂಲದ ಬಿಸಿನೆಸ್ ಮೆನ್ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಾಡೆಲ್ ತನ್ನನ್ನು ರಕ್ಷಿಸಿಕೊಳ್ಳಲು ಚಾಕುವಿನಿಂದ ಆತನನ್ನು ಬೆದರಿಸಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಆಕೆ ಕೊಠಡಿಯ ಕಿಟಕಿಯಿಂದ ಜಿಗಿದಿದ್ದಾರೆ.
Advertisement
ಸ್ಟೆಟುಕ್ಸರ್ ತನ್ನ ಮಾನ ಹಾಗೂ ಗೌರವವನ್ನು ಉಳಿಸಿಕೊಳ್ಳಲು ಹೀಗೆ ಮಾಡಿದ್ದು, ಪ್ರಸ್ತುತ ಆಕೆಯ ಬೆನ್ನುಮೂಳೆ ಮುರಿದ ಕಾರಣ ನಡೆಯಲು ಸಾಧ್ಯವಿಲ್ಲ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ಮಾಡೆಲ್ ಸ್ನೇಹಿತೆ ಐರಿನಾ ಗ್ರಾಸ್ಮನ್ ತಿಳಿಸಿದ್ದಾರೆ.
Advertisement
ಘಟನೆ ನಂತರ ದೇಶ ಬಿಟ್ಟು ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿಯ ಹೆಸರು ಇದುವರೆಗೆ ಬಹಿರಂಗಪಡಿಸಿಲ್ಲ. ಒಂದು ವೇಳೆ ಆತನ ಮೇಲಿನ ಆರೋಪ ಸಾಬೀತಾದರೆ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.
ತನ್ನ ಮಗಳು ಎಸ್ಕಾರ್ಟ್ ಎಂಬ ವದಂತಿಯನ್ನ ಸ್ಟೆಟುಕ್ಸರ್ ಅವರ ತಾಯಿ ಗೋಚಾ ಬುಕಿಡ್ವೆ ನಿರಾಕರಿಸಿದ್ದಾರೆ. ತಮ್ಮ ಮಗಳು ಪ್ರಸಿದ್ಧ ಮಾಡೆಲ್ ಆಗಿದ್ದು, ಕಾರ್ಯಕ್ರಮವೊಂದರ ಒಪ್ಪಂದದ ಮೇರೆಗೆ ಆಕೆ ದುಬೈಗೆ ಒಂದು ತಿಂಗಳ ಕಾಲ ಹೋಗಿದ್ದಳು ಎಂದು ತಿಳಿಸಿದ್ದಾರೆ. ಮಾಡೆಲ್ ಸ್ಟೆಟುಕ್ಸರ್ ಆಸ್ಪತ್ರೆಯ ಬೇಡ್ ಮೇಲೆಯೇ ಒಂದು ವಿಡಿಯೋ ಮಾಡಿ ತಮ್ಮ ತಾಯಿಗೆ ಕಳುಹಿಸಿದ್ದು, ತನ್ನ ಬಗ್ಗೆ ಚಿಂತಿಸಬೇಡಿ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ತನಿಖೆ ಮುಂದುವರೆದಿದ್ದು, ಮಾಡೆಲ್ ಕೋರಿಕೆ ಮೇರೆಗೆ ಸದ್ಯ ಘಟನೆ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.