ಚಿಕ್ಕಬಳ್ಳಾಪುರ: ಬೆಂಗಳೂರು ನಗರದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ದೇವನಹಳ್ಳಿ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ದ್ರೋಣಾಚಲಂ ಗ್ರಾಮದ ನಿವಾಸಿ ಆರೋಪಿ ನಾಗಾರ್ಜುನನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುಮಾರು 3 ಲಕ್ಷ ಮೌಲ್ಯದ 24 ಸ್ಮಾರ್ಟ್ ಫೋನ್ ಗಳನ್ನು ಕಳ್ಳತನ ಮಾಡಿದ್ದನು. ಪೊಲೀಸರು ಈತನಿಂದ ಮೊಬೈಲ್ ಫೋನ್ ಹಾಗೂ ಒಂದು ಬೊಲೆರೋ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ದೇವನಹಳ್ಳಿ ಬೈಪಾಸ್ ರಸ್ತೆಯಲ್ಲಿ ತಪಾಸಣೆ ಮಾಡುವ ವೇಳೆ ಈ ಸ್ಮಾರ್ಟ್ ಫೋನ್ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಇನ್ನೂ ದ್ರೋಣಾಚಲಂ ಗ್ರಾಮದ ಹಲವಾರು ಮಂದಿ ಮೊಬೈಲ್ ಕಳ್ಳತನವನ್ನೇ ವೃತ್ತಿಯನ್ನಾಗಿರಿಸಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿ ಬೊಲೆರೋದಲ್ಲಿ ಬಂದು ಮೊಬೈಲ್ ಅಂಗಡಿಗೆ ಬಂದು ಫೋನ್ ಕದ್ದು ಹೋಗುತ್ತಿದ್ದನು.
ಸದ್ಯಕ್ಕೆ ದೇವನಹಳ್ಳಿ ಪಟ್ಟಣ ಪೊಲೀಸರಿಂದ ಆರೋಪಿ ನಾಗಾರ್ಜುನ ಅರೆಸ್ಟ್ ಆಗಿದ್ದು, ಇನ್ನೂ ಉಳಿದ ಖದೀಮರು ಮೂಲ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv