ಲಂಡನ್: ಮೊಬೈಲ್ ಫೋನೊಂದು ಮಹಿಳೆಯನ್ನು ಸಾವಿನಿಂದ ಪಾರು ಮಾಡಿದ ಆಶ್ಚರ್ಯಕರ ಘಟನೆಯೊಂದು ಶುಕ್ರವಾರ ಮ್ಯಾಂಚೆಸ್ಟರ್ ನಲ್ಲಿ ನಡೆದಿದೆ.
ಮಹಿಳೆಯನ್ನು ಬ್ರಿಟನ್ ಮೂಲದ ಲಿಸಾ ಬ್ರಿಡ್ಜೆಟ್ ಎಂದು ಗುರುತಿಸಲಾಗಿದೆ.
Advertisement
Advertisement
ಏನಿದು ಘಟನೆ?: ಸೋಮವಾರ ಮ್ಯಾಂಚೆಸ್ಟರ್‍ನಲ್ಲಿ ಭೀಕರವಾಗಿ ಬಾಂಬ್ ದಾಳಿ ನಡೆದಿದೆ. ಸ್ಫೋಟದಲ್ಲಿ ಬ್ರಿಟನ್ ಮೂಲದ ಲಿಸಾ ಎಂಬವರ ಪ್ರಾಣವನ್ನು ಮೊಬೈಲ್ ಉಳಿಸಿದ್ದು, ಗಂಭೀರ ಗಾಯಗಳಾಗಿವೆ.
Advertisement
ಲಿಸಾ ತನ್ನ ಮೊಬೈಲ್ ಚೆಕ್ ಮಾಡ್ತಾ ಇದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟವಾಗಿದೆ. ಸ್ಫೋಟದ ರಭಸಕ್ಕೆ ನಟ್ ಒಂದು ಲಿಸಾ ಕಡೆ ತೂರಿ ಬಂದಿದೆ. ಪರಿಣಾಮ ಅವರ ಕೈಯಲಿದ್ದ ಮೊಬೈಲ್ ಗೆ ನಟ್ ತಾಗಿದ್ದು, ಮೊಬೈಲ್ ಸೀಳಿ ಹೋಗಿದೆ. ಹೀಗಾಗಿ ಅವರ ಪ್ರಾಣಕ್ಕೆ ಕುತ್ತಾಗಲಿಲ್ಲ. ಆದ್ರೆ ಲಿಸಾ ತನ್ನ ಮಧ್ಯದ ಬೆರಳನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಕೆನ್ನೆ ಹಾಗೂ ಮೂಗಿಗೆ ಗಾಯಗಳಾಗಿವೆ ಅಂತಾ ಬಿಬಿಸಿ ವರದಿ ಮಾಡಿದೆ.
Advertisement
ಲಿಸಾ ಕೈಯಲ್ಲಿದ್ದ ಫೋನಿಗೆ ನಟ್ ತಗುಲಿದ್ದರಿಂದ ಅದು ಡೈವರ್ಟ್ ಆಗಿತ್ತು. ಹೀಗಾಗಿ ನಟ್ ರಭಸ ಸ್ವಲ್ಪ ಕಡಿಮೆಯಾಗಿತ್ತು. ಇಲ್ಲದೇ ಹೋದ್ರೆ ಲಿಸಾ ಪ್ರಾಣಕಳೆದುಕೊಳ್ತಾ ಇದ್ಲು ಅಂತಾ ಆಕೆಯ ಪತಿ ಸ್ಟೀವ್ ಹೇಳಿದ್ದಾರೆ.
ಲಿಸಾಳ ದೇಹದ ಇತರ ಭಾಗಗಳಿಗೂ ಕೂಡ ಗಾಯಗಳಾಗಿದ್ದು, ಸದ್ಯ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಮೊಬೈಲ್ ಆಕೆಯನ್ನು ಸಾವಿನ ದವಡೆಯಿಂದ ಪಾರು ಮಾಡಿದೆ ಅಂತಾ ಸ್ಟೀವ್ ತನ್ನ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.
ಮ್ಯಾಂಚೆಸ್ಟರ್ ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 22 ಮಂದಿ ಮೃತಪಟ್ಟಿದ್ದು, 64 ಜನರು ಗಾಯಗೊಂಡಿದ್ದಾರೆ.