ಮೈಸೂರು: ಜಿಲ್ಲೆಯ ತಹಶೀಲ್ದಾರ್ ಹುದ್ದೆಗೆ ಒಂದೇ ಸಮುದಾಯದ ಇಬ್ಬರು ಅಧಿಕಾರಿಗಳ ನಡುವೆ ನಡೆದಿದ್ದ ಮೊಬೈಲ್ ಸಂಭಾಷಣೆ ವೈರಲ್ ಆಗಿದ್ದು, ಈ ಸಂಬಂಧ ಆರ್‌ಟಿಐ ಕಾರ್ಯಕರ್ತನನ್ನು ಹಾಗೂ ಕಚೇರಿಯ ಸಿಬ್ಬಂದಿಯನ್ನು ಬಲಿಪಶು ಮಾಡಲು ಮೈಸೂರು ತಹಶೀಲ್ದಾರ್ ಮುಂದಾಗಿರುವ ವಿಚಾರವೊಂದು ಬೆಳಕಿಗೆ ಬಂದಿದೆ.
ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ಹಾಗೂ ಮೈಸೂರು ತಾಲೂಕು ಕಚೇರಿ ಸಿಬ್ಬಂದಿ ವಿರುದ್ಧ ಮೈಸೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬು ಅವರು ಈ ಬಗ್ಗೆ ಅಶೋಕಪುರಂನಲ್ಲಿರುವ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
Advertisement
Advertisement
ದೂರಿನಲ್ಲೇನಿದೆ..?
ನಾನು ರೇಣುಕುಮಾರ್ ಮಾತನಾಡಿದ್ದು ನನ್ನ ಮೊಬೈಲ್‍ನಲ್ಲಿಯೇ ರೆಕಾರ್ಡ್ ಆಗಿದೆ. ಕಣ್ತಪ್ಪಿನಿಂದ ನಮ್ಮ ಆಫೀಸ್ ವಾಟ್ಸಾಪ್ ಗ್ರೂಪ್‍ಗೆ ಶೇರ್ ಮಾಡಿದ್ದೇನೆ. ನಾನು ಸರಿಯಾಗಿ ಡಿಲೀಟ್ ಮಾಡಿರಲಿಲ್ಲ. ಹೀಗಾಗಿ ನಮ್ಮ ಕಚೇರಿ ಸಿಬ್ಬಂದಿ ಆರ್‌ಟಿಐ ನಾಗೇಂದ್ರಗೆ ಆಡಿಯೋ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Advertisement
ಮೈಸೂರು ತಹಶೀಲ್ದಾರ್ ಕುರ್ಚಿ ಉಳಿಸಿಕೊಳ್ಳಲು ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರದ ಮಾತುಗಳನ್ನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣದ ನಂತರ ತನ್ನ ಚೇಂಬರ್ ಬಾಗಿಲಿಗೆ ಬೀಗ ಹಾಕಿಸಿ ಗುಪ್ತವಾಗಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿ ಈಗ ತಾವು ಮಾಡಿದ ತಪ್ಪಿಗೆ ಆರ್‌ಟಿಐ ಕಾರ್ಯಕರ್ತನನ್ನು ಹಾಗೂ ಕಚೇರಿ ಸಿಬ್ಬಂದಿಯನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv