ಕನ್ನಡ ಸಿನಿಮಾ ರಂಗದ ಇಬ್ಬರು ಪ್ರತಿಭಾವಂತ ನಟರ ಹೆಸರಿನಲ್ಲಿ ಮೊಬೈಲ್ ಕ್ಲಿನಿಕ್ ಮಾಡಲು ಮುಂದಾಗಿದೆ ರೋಟರಿ ಸಂಸ್ಥೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಪುನೀತ್ ರಾಜ್‌ಕುಮಾರ್ ಮತ್ತು ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಸುಸಜ್ಜಿತ 4 ಮೊಬೈಲ್ ಕ್ಲಿನಿಕ್ – ಲ್ಯಾಬ್ ಬ್ಯುಲ್ಟ್ ಆನ್ ವೀಲ್ಸ್ ರೆಡಿ ಮಾಡಿದೆ. ಇವುಗಳಿಗೆ ಇಂದು ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ
Advertisement
ಈ ಮೊಬೈಲ್ ಕ್ಲಿನಿಕ್‌ಗಾಗಿ ಇನ್ಫೋಸಿಸ್ ಫೌಂಡೇಶನ್ ಸುಮಾರು ನಾಲ್ಕು ಕೋಟಿ ರೂಪಾಯಿ ಅನುದಾನವನ್ನು ಸಿ.ಎಸ್.ಆರ್ ಅನುದಾನದ ಅಡಿಯಲ್ಲಿ ನೀಡಿದೆಯಂತೆ. ರೋಟರಿ ಬೆಂಗಳೂರು ಹೈಗ್ರೌಂಡ್ಸ್, ರೋಟರಿ ಬೆಂಗಳೂರು ಈಸ್ಟ್ ವೆಸ್ಟ್, ರೋಟರಿ ಬೆಂಗಳೂರು ಎಚ್.ಎಸ್.ಆರ್ ಸಹಯೋಗದೊಂದಿಗೆ ಸಾಯಿಕಾರ್ಪ್ ಸಂಸ್ಥೆಯು ಇವುಗಳನ್ನು ನಿರ್ಮಾಣ ಮಾಡಿದೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ
Advertisement
Advertisement
ಈ ಮೊಬೈಲ್ ಕ್ಲಿನಿಕ್‌ನಲ್ಲಿ ಟೆಲಿ ಮೆಡಿಸಿನ್, ಫಾರ್ಮಸಿ, ವ್ಯಾಕ್ಷಿನ್ ಮತ್ತು ಇತರ ಔಷಧಿಗಳನ್ನು ಹೊಂದಿದ್ದು, ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್ ಜೊತೆ ಪ್ರತ್ಯೇಕ ಬೆಡ್‌ವುಳ್ಳ ಕೊಠಡಿ ಕೂಡ ಹೊಂದಿದೆಯಂತೆ. ಗ್ರಾಮೀಣ ಭಾಗದ ಜನರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಇವುಗಳು ನೆರವಾಗಲಿವೆ ಎಂದಿದೆ ಸಂಸ್ಥೆ.