ಲೈಟರ್ ವಿಚಾರಕ್ಕೆ ಪುಂಡರ ಜಗಳ – ಮಹಿಳೆ ಜುಟ್ಟು ಎಳೆದಾಡಿ, ಪತಿ ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ

Advertisements

ಮೈಸೂರು: ಲೈಟರ್ ವಿಚಾರಕ್ಕೆ ಜಗಳ ಆಡಿದ ಕಿಡಿಗೇಡಿಗಳು ಮಹಿಳೆಯ ಕೂದಲು ಎಳೆದಾಡಿ, ಆಕೆಯ ಪತಿಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರದ ತಿಬ್ಬಾದೇವಿ ಕಾಫಿ ಡೇ ಶಾಪ್‍ನಲ್ಲಿ ನಡೆದಿದೆ.

Advertisements

ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಮೇಶ್ ಮತ್ತು ಶೋಭಾ ಹಲ್ಲೆಗೊಳಗಾದ ದಂಪತಿಯಾಗಿದ್ದು, ಈ ದಂಪತಿ ಟಿ.ನರಸೀಪುರದಲ್ಲಿ ಟೀ ಹಾಗೂ ಜ್ಯೂಸ್ ಅಂಗಡಿ ನಡೆಸುತ್ತಿದ್ದಾರೆ. ಮೊನ್ನೆ ರಾತ್ರಿ ಲೈಟರ್ ತೆಗೆದುಕೊಳ್ಳಲು ಬಂದ ಇಬ್ಬರು ಯುವಕರು ಲೈಟರ್‌ಗೆ 20 ರೂಪಾಯಿ ಕೊಡಲು ಹಿಂದೇಟು ಹಾಕಿ, ನಿಮ್ಮ ಅಂಗಡಿಯಲ್ಲಿ ಲೈಟರ್ ರೇಟ್ ಜಾಸ್ತಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನಿಗೆ ಸ್ಟಾಲಿನ್ ಪತ್ರ

Advertisements

ನಂತರ ಕೋಪಗೊಂಡ ರಮೇಶ್ ಏರು ಧ್ವನಿಯಲ್ಲೇ ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಬೇರೆ ಅಂಗಡಿಗೆ ಹೋಗಿ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕರು ರಮೇಶ್ ಪತ್ನಿ ಶೋಭಾ ಕೂದಲು ಎಳೆದು ಗಲಾಟೆ ಮಾಡಿದ್ದಾರೆ. ಆಗ ಶೋಭಾ ಏಕಾಂಗಿಯಾಗಿ ಯುವಕರನ್ನು ಹೊಡೆದು ಓಡಿಸಿದ್ದಾರೆ. ಇದನ್ನೂ ಓದಿ:  ಬೆಡ್‌ಶೀಟ್‌ನಲ್ಲಿ ಆನೆ ದಂತ ಸಾಗಾಟ, ಮೂವರು ಅರೆಸ್ಟ್‌, ಓರ್ವ ಪರಾರಿ

Advertisements

ಬೆಳಗ್ಗೆ ಮತ್ತೆ ಸ್ನೇಹಿತರೊಟ್ಟಿಗೆ ಬಂದ ಇಬ್ಬರು ಯುವಕರು. ಕಬ್ಬಿಣದ ರಾಡ್ ಹಿಡಿದು ಬಂದು ಹಲ್ಲೆ ಮಾಡಿ ಅಂಗಡಿಯಲ್ಲಿದ್ದ ಸಾಮಾನುಗಳನ್ನು ಒಡೆದು ಹಾಕಿದ್ದಾರೆ. ಏಕಾಏಕಿ ರಮೇಶ್ ಅವರನ್ನು ಅಂಗಡಿಯಿಂದ ಎತ್ತಿಕೊಂಡು ಹೋಗಿ ವಿವಸ್ತ್ರಗೊಳಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದೀಗ ಯುವಕರ ಗುಂಪಿನ ವಿರುದ್ಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisements
Exit mobile version