ಬೀದರ್: ಮದರಸಾಗೆ (Mosque) ನುಗ್ಗಿ ಪೂಜೆ ಮಾಡಿದ 9 ಹಿಂದೂಗಳ (Hindu) ಮೇಲೆ ಎಫ್‍ಐಆರ್ (FIR) ಆಗಿ ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ 20 ವರ್ಷಗಳ ಹಿಂದೆ ವಿವಾದಿತ ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡುವ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
ಬೀದರ್‌ನ (Bidar) ಒಳಕೋಟೆಯಿಂದ ಚೌಬಾರ್, ಗವಾನ್ ಚೌಕ್, ನಗರ ಠಾಣೆ, ಮಹ್ಮದ್ ಗವಾನ್ ಮದರಸಾ ರಸ್ತೆಯಲ್ಲಿ ಭವಾನಿ ಭವ್ಯ ಮೆರವಣಿಗೆ ಮಾಡುತ್ತಾ ಸಾಗುತ್ತಿರುವ ಹಾಗೂ ಮದರಸಾ ಸೇರಿದಂತೆ ವಿವಿಧ ಕಡೆಗಳಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿರುವ ಹಳೆಯ ಪಾರಂಪರಿಕ ವೀಡಿಯೋ ತುಣುಕುಗಳು ಹರಿದಾಡುತ್ತಿದೆ. ಇದನ್ನೂ ಓದಿ: ಮದರಸಾದಲ್ಲಿ 1985ರಿಂದಲೂ ಪೂಜೆ ಇತ್ತು, ಪೊಲೀಸರ ಅನುಮತಿ ಸಿಕ್ಕಿತ್ತು: ಹಿಂದೂ ಮುಖಂಡರ ಸ್ಪಷ್ಟನೆ
Advertisement
Advertisement
ಮದರಸಾ ವಿವಾದದ ಬೆನ್ನಲ್ಲೇ ಹಲವು ಅನ್ಯಕೋಮಿನ ಜನರು ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆ ಮದರಸಾದಲ್ಲಿ ಹಿಂದೂಗಳ ಪೂಜೆ ಮಾಡುವ ಹಳೆಯ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ದಸರಾ (Dasara) ಮೆರವಣಿಗೆ ವೇಳೆ ಹಿಂದೂ ಸಮುದಾಯದ ಗುಂಪೊಂದು ಮದರಸಾಗೆ (Madrasa) ನುಗ್ಗಿ ಪೂಜೆ ಮಾಡಿರುವ ಘಟನೆ ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಐತಿಹಾಸಿಕ ಮೊಹಮ್ಮದ್ ಗವಾನ್ ಮದರಸಾದಲ್ಲಿ ನಡೆದಿತ್ತು. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್ಐಆರ್