ಲಂಡನ್: ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಆಗಿರುವ ಓಟಗಾರ ಮೊ ಫರಾ ತಮ್ಮ 9ನೇ ವಯಸ್ಸಿನಲ್ಲಿ ಜಿಬೌಟಿಯಿಂದ ಬ್ರಿಟನ್‌ಗೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತಾನು ಹಿಂದೆಂದೂ ಭೇಟಿಯಾಗದ ಮಹಿಳೆ ತನ್ನ ನಕಲಿ ಪ್ರಯಾಣದ ದಾಖಲೆಗಳನ್ನು ಸೃಷ್ಟಿಸಿ ಬ್ರಿಟನ್‌ಗೆ ಕರೆದೊಯ್ದಿದ್ದಳು. ತನ್ನ ಹೊಟ್ಟೆಪಾಡಿಗಾಗಿ ಅಲ್ಲಿ ಮನೆಕೆಲಸ ಹಾಗೂ ಮಕ್ಕಳನ್ನು ಆರೈಕೆ ಮಾಡಲು ಒತ್ತಾಯಿಸಲಾಗಿತ್ತು. ಮಾತ್ರವಲ್ಲದೇ ತನ್ನ ನಿಜ ಹೆಸರು ಹುಸೇನ್ ಅಬ್ದಿ ಕಹಿನ್‌ನಿಂದ ಮೊಹಮ್ಮದ್ ಫರಾ ಎಂದು ಬದಲಿಸಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.
Advertisement
Advertisement
ತಾನು ಬ್ರಿಟನ್‌ಗೆ ಬಂದ ಬಳಿಕ ಮಹಿಳೆ ಪಶ್ಚಿಮ ಲಂಡನ್‌ನ ಹೌನ್ಸ್ಲೋನಲ್ಲಿರುವ ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಳು. ತನ್ನ ಸಂಬಂಧಿಕರ ಸಂಪರ್ಕದ ದಾಖಲೆಗಳನ್ನು ಆಕೆ ಹರಿದು ಹಾಕಿದ್ದಳು. ತನಗೆ 12 ವರ್ಷಗಳ ವರೆಗೂ ಆಕೆ ಶಾಲೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಹಿಂದಿನ ಘಟನೆಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ನೋಡಿ ಕಲಿಯಬೇಕು – ಐಸಿಸಿ ವಿರುದ್ಧ ಕ್ರೀಡಾ ವಾಹಿನಿಗಳು ಕಿಡಿ
Advertisement
ಈ ಸಂದರ್ಭ ನನಗೆ ಅಲ್ಲಿಂದ ಹೊರ ಬರಬೇಕಿತ್ತು. ಆಗಾಗ ನಾನು ಬಾತ್‌ರೂಮ್‌ನಲ್ಲಿ ಬೀಗ ಹಾಕಿಕೊಂಡು ಅಳುತ್ತಿದ್ದೆ. ಬಳಿಕ ನಾನು ಈ ಪರಿಸ್ಥಿತಿಯಿಂದ ಓಡಿ ಹೋಗುವ ನಿರ್ಧಾರ ಮಾಡಿದೆ. ನನಗೆ ಆಗ ದೈಹಿಕ ಶಿಕ್ಷಕ ಅಲನ್ ವಾಟ್ಕಿನ್ಸನ್ ಅವರ ಪರಿಚಯವಾಗಿ, ಅವರು ನನಗಾಗಿ ಸಾಮಾಜಿಕ ಸೇವಾ ಕೇಂದ್ರವನ್ನು ಸಮಪರ್ಕಿಸಿದರು. ನನ್ನನ್ನು ಸಾಕಲು ಸೋಮಾಲಿ ಸಮುದಾಯದ ಕುಟುಂಬವನ್ನು ಹುಡುಕಲು ಸಹಾಯ ಮಾಡಿದರು ಎಂದರು.
Advertisement
ಅವರ ಸಹಾಯದಿಂದ ನನಗೆ ನನ್ನ ಭುಜದಿಂದ ಒಂದು ದೊಡ್ಡ ಹೊರೆ ಇಳಿದಂತಾಗಿತ್ತು. ನನ್ನಂತಹ ಅದೆಷ್ಟೋ ಮಕ್ಕಳು ಇದೇ ರೀತಿ ಕಳ್ಳಸಾಗಣೆಗೊಳಪಟ್ಟಿದ್ದಾರೆ. ಆದರೆ ನಾನೊಬ್ಬ ಅದೃಷ್ಟಶಾಲಿಯಾಗಿದ್ದೆ. ಇದರಿಂದ ನಾನು ಉಳಿದುಕೊಂಡೆ, ಇತರರಿಗಿಂತ ಭಿನ್ನವಾದೆ ಎಂದು ಹೇಳಿದರು. ಇದನ್ನೂ ಓದಿ: ವಿಂಬಲ್ಡನ್ ಟೆನ್ನಿಸ್ ಟೂರ್ನಿಯಲ್ಲೂ ಕೆಜಿಎಫ್ ಹವಾ
2012 ಹಾಗೂ 2016ರ ಒಲಿಂಪಿಕ್‌ನಲ್ಲಿ 5,000 ಹಾಗೂ 10,000 ಮೀ.ನ ಓಟದಲ್ಲಿ ಗೆದ್ದಿರುವ ಫರಾ ಈ ಬಾರಿ ಅಕ್ಟೋಬರ್‌ನಲ್ಲಿ ಲಂಡನ್ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ ಲಂಡನ್‌ನ 10,000 ಮೀ. ಓಟದಲ್ಲಿ ರನ್ನರ್ ಅಪ್ ಆದ ಫರಾ ಈ ತಿಂಗಳ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದನ್ನು ತಳ್ಳಿಹಾಕಿದ್ದಾರೆ. ಮೇ ತಿಂಗಳಿನಲ್ಲಿ ತಮ್ಮ ವೃತ್ತಿ ಜೀವನಕ್ಕೆ ಶೀಘ್ರವೇ ವಿದಾಯ ಹೇಳುವ ಸುಳಿವನ್ನು ನೀಡಿದ್ದರು.