ಮುಂಬೈ: ಐಪಿಎಲ್‌ನಲ್ಲಿ ಹೇಗೆ ಪಾರದರ್ಶಕವಾಗಿ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡಲಾಯಿತೋ ಅದೇ ರೀತಿಯಾಗಿ ಐಸಿಸಿ ತನ್ನ ಟೂರ್ನಿಯ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡಬೇಕು ಎಂದು ದೇಶದಲ್ಲಿರುವ ಕ್ರೀಡಾ ವಾಹಿನಿಗಳು ಆಗ್ರಹಿಸಿವೆ.
ಐಸಿಸಿ ಪುರುಷರ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಪ್ರಸಾರ ಸಂಬಂಧ ಕ್ರೀಡಾ ವಾಹಿನಿಗಳಿಂದ ಬಿಡ್ ಆಹ್ವಾನಿಸಲಾಗಿದೆ. 2024ರಿಂದ 8 ವರ್ಷ ಅವಧಿಗೆ ಪ್ರಸಾರ ಹಕ್ಕನ್ನು ಆನ್‌ಲೈನ್ ಮೂಲಕ ಮಾರಾಟ ಮಾಡದ್ದಕ್ಕೆ ಕ್ರೀಡಾ ವಾಹಿನಿಗಳು ಆಕ್ಷೇಪ ವ್ಯಕ್ತಪಡಿಸಿವೆ.
Advertisement
Advertisement
ಭಾರತ ಕ್ರಿಕೆಟ್‌ನ ದೊಡ್ಡ ಮಾರುಕಟ್ಟೆಯಾಗಿರುವ ಕಾರಣ ಭಾರತದ ಮಾಧ್ಯಮ ಹಕ್ಕು ಮಾರಾಟಕ್ಕೆ ಪ್ರತ್ಯೇಕ ಬಿಡ್ ಕರೆಯಲಾಗಿದೆ. ಡಿಸ್ನಿಸ್ಟಾರ್, ಎಸ್‌ಪಿಎನ್, ಝಿ ಮತ್ತು ವಯಾಕಾಮ್ 18 ಕಂಪನಿಗಳು ಖರೀದಿಗೆ ಆಸಕ್ತಿ ತೋರಿಸಿವೆ.
Advertisement
ಆಕ್ಷೇಪ ಯಾಕೆ?
ಇ ಹರಾಜು ನಡೆಸದೇ ಮುಚ್ಚಿದ ಲಕೋಟೆಯಲ್ಲಿ ಬಿಡ್ ಮೊತ್ತವನ್ನು ನೀಡಬೇಕು. ಬಿಡ್ ಸಲ್ಲಿಕೆ ಮತ್ತು ಅಂತಿಮ ಪ್ರಕಟಣೆಗೆ ಮೂರು ವಾರಗಳ ಅವಧಿ ನೀಡಿರುವುದು. 4 ವರ್ಷ ಮತ್ತು 8 ವರ್ಷಗಳ ಹಕ್ಕು ಖರೀದಿಗೆ ಸರಿಯಾದ ಮಾನದಂಡ ಇಲ್ಲದಿರುವುದು. ಬಿಡ್‌ನ ಮೊತ್ತ ಶೇ.5 ರಷ್ಟು ಹಣವನ್ನು ಠೇವಣಿಯಾಗಿ ಇಡಬೇಕೆಂಬ ಷರತ್ತಿಗೆ ವಿರೋಧ ವ್ಯಕ್ತಪಡಿಸಿವೆ.
Advertisement
ಪಾರದರ್ಶಕವಾಗಿ ಮಾಧ್ಯಮ ಹಕ್ಕುಗಳ ಮಾರಾಟವನ್ನು ಹೇಗೆ ಮಾಡಬಹುದು ಎಂಬುದನ್ನು ಬಿಸಿಸಿಐ ನೋಡಿ ಐಸಿಸಿ ಕಲಿಯಬೇಕೆಂದು 4 ಕ್ರೀಡಾ ವಾಹಿನಿಗಳ ಅಧಿಕಾರಿಗಳು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
8 ವರ್ಷಕ್ಕೆ ನಾವು 100 ದಶಲಕ್ಷ ಡಾಲರ್ ಬಿಡ್ ಮಾಡಿದ್ದರೆ 4 ವರ್ಷಕ್ಕೆ ನನ್ನ ಪ್ರತಿಸ್ಪರ್ಧಿ ವಾಹಿನಿ 60 ದಶಲಕ್ಷ ಡಾಲರ್ ಬಿಡ್ ಮಾಡಿದರೆ ಅತಿ ಹೆಚ್ಚು ಬಿಡ್ ಮಾಡಿದವರು ಯಾರು ಎಂದು ವಾಹಿನಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಂಬಲ್ಡನ್ ಟೆನ್ನಿಸ್ ಟೂರ್ನಿಯಲ್ಲೂ ಕೆಜಿಎಫ್ ಹವಾ
ಐಸಿಸಿ ವಾದವೇನು?
ಪಾರದರ್ಶಕತೆ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ನಾವು ಇ-ಹರಾಜು ಮಾಡುತ್ತಿಲ್ಲ. ಏಕೆಂದರೆ ಜಾಗತಿಕ ಮಟ್ಟದಲ್ಲಿ ಈ ಪ್ರಕ್ರಿಯೆ ಮಾಡಬೇಕಾಗುವುದರಿಂದ ಮುಚ್ಚಿನ ಲಕೋಟೆಯಲ್ಲಿ ಬಿಡ್‌ಗಳನ್ನು ಆಹ್ವಾನಿಸುತ್ತಿದ್ದೇವೆ. ಈ ಹಿಂದೆಯೂ ಈ ವಿಧಾನವನ್ನು ಬಳಸಲಾಗಿತ್ತು ಎಂದು ಐಸಿಸಿ ಹೇಳಿದೆ.
ಐಸಿಸಿ ಬಿಡ್‌ಗೆ ಯಾವುದೇ ಮೂಲ ಬೆಲೆಯನ್ನು ನಿಗದಿ ಪಡಿಸಿಲ್ಲ. ಆಗಸ್ಟ್ 22ರ ಒಳಗಡೆ ವಾಹಿನಿಗಳು ಬಿಡ್ ಸಲ್ಲಿಸಬೇಕಿದೆ. ಬಿಡ್ ವಿಜೇತರ ಹೆಸರನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಕಟಿಸಲಿದೆ.
ಈ ಹಿಂದೆ ಐಸಿಸಿ ಕೇಂದ್ರ ಕಚೇರಿ ಲಂಡನ್‌ನಲ್ಲಿ ಇತ್ತು. ಆದರೆ ಇಂಗ್ಲೆಂಡ್ ಸರ್ಕಾರ ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 2005ರಲ್ಲಿ ಐಸಿಸಿಯ ಪ್ರಧಾನ ಕಚೇರಿಯನ್ನು ಲಾರ್ಡ್ಸ್‌ನಿಂದ ದುಬೈಗೆ ಸ್ಥಳಾಂತರಿಸಲಾಗಿದೆ.