ಎಂಎಂ ಕಲ್ಬುರ್ಗಿ ಹತ್ಯೆ ಕೇಸ್- 1,600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‍ಐಟಿ

Public TV
3 Min Read
MM Kalburgi DH 1559754383

-ಹತ್ಯೆಗೆ ಕಾರಣ ತಿಳಿಸಿದ ಎಸ್‍ಐಟಿ

ಬೆಂಗಳೂರು: ವಿಚಾರವಾದಿ ಡಾ. ಎಂ.ಎಂ.ಕಲಬುರ್ಗಿ ಹತ್ಯೆ ನಡೆದು ನಾಲ್ಕು ವರ್ಷಗಳ ಬಳಿಕ ಸುಧೀರ್ಘ ತನಿಖೆ ನಡೆಸಿದ ಎಸ್‍ಐಟಿ ನ್ಯಾಯಾಲಯಕ್ಕೆ 1,600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

2015ರ ಆಗಸ್ಟ್ 30 ರಂದು ಧಾರವಾಡದಲ್ಲಿ ನಡೆದ ಚಿಂತಕ ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿತ್ತು. ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡ ಎಸ್‍ಐಟಿ ಪ್ರಕರಣವನ್ನು ಭೇದಿಸಿದೆ. ಈ ಸಂಬಂಧ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ, ಪ್ರವೀಣ್ ಚತುರ್ ಸೇರಿದಂತೆ ಆರು ಆರೋಪಿಗಗಳನ್ನು ಬಂಧಿಸಿ ಜೈಲಿಗಟ್ಟಿದೆ. ಗಣೇಶ್ ಮಿಸ್ಕಿನ್, ಪ್ರವೀಣ್, ಅಮಿತ್ ಬದ್ದಿಗೆ ಮಹಾರಾಷ್ಟ್ರ ಮತ್ತು ಬೆಳಗಾವಿಯ ಅರಣ್ಯ ಪ್ರದೇಶದಲ್ಲಿ ಗನ್, ಪಿಸ್ತೂಲ್, ನಾಡ ಬಾಂಬ್ ತಯಾರಿಕೆ ಬಗ್ಗೆ ತರಬೇತಿಯನ್ನು ಅಮೋಲ್ ಕಾಳೆ ನೀಡಿರುವ ಅಂಶವನ್ನು ಆರೋಪಿಗಳು ಎಸ್‍ಐಟಿ ಅಧಿಕಾರಿಗಳ ಮುಂದೆ ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ಗೌರಿ ಹತ್ಯೆಗೆ ಆಯುಧ ಒದಗಿಸಿದ್ದು ನಾನೇ – ಎಸ್‍ಐಟಿ ಮುಂದೆ ನವೀನ್ ಹೇಳಿಕೆ

Ganesha miskin amit baddi

ಸೂತ್ರಧಾರಿ ಅಮೋಲ್ ಕಾಳೆ:
ತರಬೇತಿ ಮುಗಿಸಿ ವಾಪಸ್ ಬಂದಿದ್ದ ಹಂತಕರು, ಆಗಸ್ಟ್ 3ರಂದು ಕಲ್ಬುರ್ಗಿ ಅವರ ಮನೆ ನೋಡಿಕೊಂಡು ಹೋಗಿದ್ದರು. ಹಂತಕರ ಗ್ಯಾಂಗ್ ಆಗಸ್ಟ್ 30ರಂದು ಎಂ.ಎಂ.ಕಲ್ಬುರ್ಗಿಯವರ ಹತ್ಯೆಗೆ ಡೇಟ್ ಫಿಕ್ಸ್ ಮಾಡಿಕೊಂಡಿತ್ತು. ತಮ ಪ್ಲಾನ್ ನಂತೆ ಆಗಸ್ಟ್ 30ರಂದು ಕದ್ದ ಬೈಕ್‍ನಲ್ಲಿ ಬಂದಿದ್ದ ಗಣೇಶ್, ಪ್ರವೀಣ್ ವಿದ್ಯಾರ್ಥಿಗಳಂತೆ ಬಂದು ಮನೆ ಬಾಗಿಲು ತಟ್ಟಿದ್ದರು. ಗಣೇಶ್ ಮನೆಯ ಬಾಗಿಲು ತಟ್ಟುತ್ತಿದ್ದಂತೆ ಕಲ್ಬುರ್ಗಿಯವರ ಪತ್ನಿ ಉಮಾದೇವಿ ಬಾಗಿಲು ತೆರೆದಿದ್ದರು. ಇದನ್ನೂ ಓದಿ: ಹಂತಕರ ಮುಂದಿನ ಟಾರ್ಗೆಟ್ ನಾನು, ನಂತ್ರ ಭಗವಾನ್: ನಿಡುಮಾಮಿಡಿ ಶ್ರೀ

ನಾವು ವಿದ್ಯಾರ್ಥಿಗಳು ಕಲ್ಬುರ್ಗಿ ಅವರ ಜೊತೆ ಮಾತನಾಡಬೇಕು ಎಂದು ಪತ್ನಿ ಉಮಾದೇವಿ ಬಳಿ ಆರೋಪಿ ಗಣೇಶ್ ಮಿಸ್ಕಿನ್ ಹೇಳಿದ್ದನು. ಈ ವೇಳೆ ಯಾರು ಬಂದಿದ್ದಾರೆಂದು ಕಲ್ಬುರ್ಗಿಯವರಯ ಮಾತನಾಡಿಸಲು ಹೊರ ಬಂದಿದ್ದಾರೆ. ಕಲ್ಬುರ್ಗಿ ಅವರು ಹೊರಗೆ ಬರುತ್ತಿದ್ದಂತೆ ಹಣೆಗೆ ನೇರ ಗನ್ ಪಾಯಿಂಟ್‍ನಲ್ಲೇ ಶೂಟ್ ಮಾಡಿದ್ದ ಗಣೇಶ್ ಮಿಸ್ಕಿನ್ ಮತ್ತು ಪ್ರವೀಣ ನಂತರ ಎಸ್ಕೇಪ್ ಆಗಿದ್ದರುಂ. ಕಿತ್ತೂರು ಸರ್ಕಲ್ ಬಳಿ ಗನ್ ಜೊತೆ ಬೈಕ್ ಬಿಟ್ಟಿದ್ದ ಹಂತಕರು ಪರಾರಿಯಾಗಿದ್ದರು. ನಂತರ ಬೈಕ್‍ನ್ನು ಅಮೋಲ್ ಕಾಳೆ ತೆಗೆದುಕೊಂಡು ಹೋಗಿದ್ದಾಗಿ ಎಸ್‍ಐಟಿ ಅಧಿಕಾರಿಗಳಿಗಳ ತನಿಖೆ ವೇಳೆ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಇದೂವರೆಗೂ ನಡೆದಿರುವ ವಿಚಾರವಾದಿಗಳ ಹತ್ಯೆಯಾಗಿದ್ದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

mm kalburagi

ಎಸ್‍ಐಟಿ ಅಧಿಕಾರಿಗಳ ತನಿಖೆ ವೇಳೆ, ಕಲ್ಬುರ್ಗಿ ಓರ್ವ ಧರ್ಮ ವಿರೋಧಿ ಹೀಗಾಗಿ ಕೊಲೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಹಂತಕ ಗಣೇಶ್ ಮಿಸ್ಕಿನ್ ಎಂಎಂ ಕಲ್ಬುರ್ಗಿ ಹತ್ಯೆಗೆ ನಿರ್ಧರಿಸಲು ಪ್ರಮುಖ ಕಾರಣ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವಂತೆ ಹೇಳಿಕೆ ಎಂದಿದ್ದಾನೆ. 2012ರ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಯು.ಆರ್.ಅನಂತಮೂರ್ತಿ ರಚಿಸಿರುವ ಕೃತಿಯೊಂದರ ಕುರಿತು ಮಾತನಾಡುತ್ತ ಅದರಲ್ಲಿ ಉಲ್ಲೇಖಿಸಿರುವಂತೆ ದೇವರ ಕಲ್ಲಿನ ವಿಗ್ರಹದ ಮೇಲೆ ಮೂತ್ರ ವಿಸರ್ಜಿಸಿದರು ಏನು ಆಗಲ್ಲವೆಂದು ಎಂಎಂ ಕಲ್ಬುರ್ಗಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಇದನ್ನೂ ಓದಿ: ಪತಿಗೆ ಗುಂಡಿಕ್ಕಿದ ಆರೋಪಿಯನ್ನು ಗುರುತಿಸಿದ ಎಂ.ಎಂ ಕಲಬುರ್ಗಿ ಪತ್ನಿ

mm kalburagi2

ಈ ಮಾತು ನಮ್ಮ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದು ಇದೇ ವಿಚಾರದ ಹಿನ್ನೆಲೆ ಧರ್ಮ ಉಳಿಸುವ ಸಲುವಾಗಿ ಕಲ್ಬುರ್ಗಿ ಹತ್ಯೆ ಮಾಡಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ್ದ ಬೈಕ್ ಮಹಾರಾಷ್ಟ್ರಕ್ಕೆ ರವಾನಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಶರತ್ ಕಳಾಸ್ಕರ್ ಗೆ ಅಡಗಿಸಿಡಲು ನೀಡಿದ್ದನು. ಘಟನೆಯನ್ನು ಕಣ್ಣಾರೆ ಕಂಡಿದ್ದ ಕಲ್ಬುರ್ಗಿಯವರ ಪತ್ನಿ ಉಮಾದೇವಿ ಮತ್ತು ಇಬ್ಬರು ವಿದ್ಯಾರ್ಥಿಗಳು ಹಂತಕರ ಗುರುತು ಪತ್ತೆ ಹಚ್ಚಿದ್ದರು. ಇವತ್ತು ಚೀಫ್ ಐಒ ಎಂ ಎನ್ ಅನುಚೇತ್ ನೇತೃತ್ವದ ತಂಡ ಹುಬ್ಬಳ್ಳಿಯ ಕೋರ್ಟ್ ನಲ್ಲಿ 1,600 ಪುಟಗಳ ಚಾರ್ಜ್ ಸುಟ್ಟು ಸಲ್ಲಿಸಿ, ಪ್ರಕರಣಕ್ಕೆ ಅಂತ್ಯ ಹಾಡಿದೆ. ಇದನ್ನೂ ಓದಿ:   ಒಂದೇ ಒಂದು ಪಿಸ್ತೂಲಿನಿಂದ ದಾಬೋಲ್ಕರ್, ಕಲ್ಬುರ್ಗಿ, ಗೌರಿ ಹತ್ಯೆ!

Share This Article
Leave a Comment

Leave a Reply

Your email address will not be published. Required fields are marked *