ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಸುವಿನ ಮಾಲೀಕ ಚಂದು ಸೇರಿ ಅಭಿಷೇಕ ಎಂಬಾತನ ಬಂಧನವಾಗಿದೆ.
ಈ ಹಿನ್ನೆಲೆ ಹನೂರಿಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಆಗಮಿಸಿದ್ದರು. ತನಿಖಾ ವರದಿ ಕೊಡಲೂ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತನಿಖಾ ತಂಡವನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇಮಿಸಿದ್ದರು. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ – ದೈತ್ಯ ಹುಲಿ ಕೊಂದಿದ್ದು ಪ್ರತೀಕಾರಕ್ಕಾ?
ತನಿಖಾಧಿಕಾರಿ ಮುಂದೆ ಆರೋಪಿಗಳ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಬಹುತೇಕ ಎಲ್ಲರಿಗೂ ಕೂಡ 30 ವರ್ಷಕ್ಕಿಂತ ವಯಸ್ಸು ಕಮ್ಮಿಯಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾಗದಂತೆ ನೀವೆಲ್ಲ ಸೇರಿ ಬುದ್ದಿ ಹೇಳಬೇಕಿತ್ತು. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಆರೋಪಿಗಳ ಕುಟುಂಬಸ್ಥರು ಕೈ ಮುಗಿದು ಮನವಿ ಮಾಡಿಕೊಂಡರು.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ಭೇಟಿ ಕೊಟ್ಟಿದ್ದ ವೇಳೆ ಮಾತನಾಡಿದ್ದಾರೆ. ಇದನ್ನೂ ಓದಿ: ಹಸು ಬೇಟೆಯಾಡಿದ್ದಕ್ಕೆ ಸೇಡು – ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಕೊಂದಿದ್ದ ನಾಲ್ವರು ಅರೆಸ್ಟ್