- 5 ವರ್ಷ ನಮ್ಮಪ್ಪ ಸಿಎಂ
ಗದಗ: ʻಐ ಲವ್ ಮಹಮ್ಮದ್ʼ ಬ್ಯಾನರ್ (I Love Muhammad Banner) ಹೊಸದೇನಲ್ಲ. ಮೊದಲು ಉರ್ದುನಲ್ಲಿ ಹಾಕುತ್ತಿದ್ರೂ, ಉರ್ದು ಓದಲು ಆಗದೇ ಗಲಾಟೆ ಆಗುತ್ತಿರಲಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.
ಗದಗದಲ್ಲಿ (Gadag) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ರಾಜ್ಯದಲ್ಲಿ ನಡೆಯುತ್ತಿರುವ ʻಐ ಲವ್ ಮಹಮ್ಮದ್ʼಬ್ಯಾನರ್ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇವೆಲ್ಲವೂ ಅನಗತ್ಯ ವಿವಾದಗಳು. ಈಗ ಇಂಗ್ಲಿಷ್‌ನಲ್ಲಿ ಹಾಕಿದ್ದಕ್ಕೆ ವಿವಾದ ಮಾಡ್ತಿದ್ದಾರೆ. ಪ್ರತಿಯೊಂದು ಧರ್ಮದವರು ತಮ್ಮ ಮಹನೀಯರು, ದೇವರ ಮೆಚ್ಚುಗೆಯ ಬ್ಯಾನರ್ ಹಾಕುವುದರಲ್ಲಿ ತಪ್ಪಿಲ್ಲ ಎಂದರು. ಇದನ್ನೂ ಓದಿ: ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ
ವರ್ಷಾಂತ್ಯಕ್ಕೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂಬ ಬಿಜೆಪಿಗರು ಹೇಳಿಕೆ ಕುರಿತು, ಪ್ರತಿವರ್ಷ ಹೀಗೆ ಹೇಳ್ತಾನೇ ಇರುತ್ತಾರೆ. ಆದ್ರೆ ಮುಖ್ಯಮಂತ್ರಿಗಳು ಮುಂದುವರೆಯುತ್ತಾರೆ. ಮುಖ್ಯಮಂತ್ರಿ ಸ್ಥಾನ ಯಾವುದೇ ಚರ್ಚೆ ಆಗಿಲ್ಲ ಅಂತ ಸುರ್ಜೇವಾಲ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಇದ್ದಾರೆ ಅವರೇ ಮುಂದುವರೆಯುತ್ತಾರೆ. ಈ ಬಗ್ಗೆ ಸಿಎಂ ಅವರೇ ಹೇಳಿದ್ದಾರೆ. ಮುಂದಿನ 5 ವರ್ಷ ನಾನೇ ಇರುತ್ತೇನೆ. ದಸರಾ ಉದ್ಘಾಟನೆ ಮಾಡುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಜಿಎಸ್‌ಟಿ ವಿಚಾರವಾಗಿ, ಸಿಎಂ ಅವರೇ ಹೇಳಿದ್ದಾರೆ. ಜಿಎಸ್‌ಟಿ ಕಡಿಮೆ ಮಾಡಿರುವುದರಿಂದ ರಾಜ್ಯಕ್ಕೆ ನಷ್ಟ ಆಗುತ್ತಿದೆ. ಅದಕ್ಕೆ ಪರಿಹಾರ ಕೊಡಬೇಕು ಅಂತ ಕೇಳಿಕೊಂಡಿದ್ದಾರೆ. ಕಳೆದ ಬಾರಿ 15ನೇ ಹಣಕಾಸು ಆಯೋಗ ಮಾಡಿದಾಗ ಕರ್ನಾಟಕಕ್ಕೆ ಅನ್ಯಾಯ ಆಗಿತ್ತು. ಆಯೋಗ ಸೂಚಿಸಿದ ಪರಿಹಾರ ಸಹ ಬಂದಿರಲಿಲ್ಲ. ಈ ಬಾರಿ ಮತ್ತೆ ನಷ್ಟವಾಗಿದೆ. ಹಾಗಾಗಿ ಆ ಪರಿಹಾರ ತುಂಬಿಕೊಡಬೇಕು ಎಂದು ಕೇಂದ್ರಕ್ಕೆ ಆಗ್ರಹ ಮಾಡಿದ್ದಾರೆ. ನಾನು ಕೂಡಾ ಆಗ್ರಹ ಮಾಡುತ್ತೇನೆ.
ಬಜೆಟ್‌ನಲ್ಲಿ ಘೋಷಣೆ ಮಾಡಿದ ಭದ್ರಾ ಮೇಲ್ದಂಡೆ ಯೋಜನೆ 5 ಸಾವಿರ ಕೋಟಿ ರೂ. ಕೊಡಲಿಲ್ಲ. ಬಜೆಟ್‌ನಲ್ಲಿ ಪೆರಪೆರಿ ರಿಂಗ್ ರೋಡ್ ಕೊಡುತ್ತೇನೆ ಅಂದ್ರು ಕೊಡಲಿಲ್ಲ. ಕೇಂದ್ರ ಕೊಡದೇ ಇರುವುದನ್ನು ಸಿಎಂ ಕೇಳಿದ್ದು ನ್ಯಾಯಯುತವಾಗಿದೆ. ನಾವು ಕೂಡಾ ಕೇಳುತ್ತಿದ್ದೇವೆ. ಜಿಎಸ್‌ಟಿ ಕಡಿತದಿಂದ ಆದ ನಷ್ಟ ಭರಿಸಿಕೊಡಿ ಅಂತ ನಾವೂ ಕೇಳ್ತೆವಿ ಎಂದರು. ಇದನ್ನೂ ಓದಿ: ಬೆಳಗಾವಿ | ‘ಐ ಲವ್ ಮುಹಮ್ಮದ್’ ಘೋಷಣೆ ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ – 50 ಮಂದಿ ವಿರುದ್ಧ FIR

