ರಾಯಚೂರು: ಮತಯಾಚನೆ ವೇಳೆ ಯುವರೈತನೋರ್ವ ಬೆಳೆಗೆ ಹಾಗೂ ಕುಡಿಯಲು ನೀರು ಕೇಳಿದಕ್ಕೆ ಎಮ್ ಎಲ್ ಸಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರು ಹಲ್ಲೆಗೆ ಮುಂದಾದ ಘಟನೆ ರಾಯಚೂರಿನ ಅತ್ತನೂರು ಗ್ರಾಮದಲ್ಲಿ ನಡೆದಿದೆ.
ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಹಂಪಯ್ಯ ನಾಯಕ್ ರ ಬೆಂಬಲಿಗರು ಹಾಗೂ ಎಂ.ಎಲ್.ಸಿ, ಕೆಪಿಸಿಸಿ ಉಪಾಧ್ಯಕ್ಷ ಎನ್ ಎಸ್ ಬೋಸರಾಜು ದರ್ಪ ಮೆರೆದಿದ್ದಾರೆ.
Advertisement
ಕಾಂಗ್ರೆಸ್ ಪರ ಮತಯಾಚನೆಗೆ ಅತ್ತನೂರು ಗ್ರಾಮಕ್ಕೆ ತೆರಳಿದ್ದ ನಾಯಕರಿಗೆ ಭತ್ತ ಬೆಳೆಗೆ ಹಾಗೂ ಕುಡಿಯಲು ನೀರಿಲ್ಲ. ಈಗ ಮತ ಯಾಚನೆಗೆ ಬಂದಿದ್ದೀರಲ್ಲ ಅಂತ ರೈತ ಮಲ್ಲಪ್ಪ ಮಡಿವಾಳ ಖಾರವಾಗಿ ಪ್ರಶ್ನಿಸಿದ್ದಕ್ಕೆ ಕೊಪಗೊಂಡ ಎಂಎಲ್ ಸಿ ಬೋಸರಾಜ, ಸ್ವತಃ ರೈತನ ಕೈತಿರುವಿ ಹಲ್ಲೆಗೆ ಮುಂದಾಗಿದ್ದಾರೆ. ಬಳಿಕ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ಅವರ ಬೆಂಬಲಿಗರು ರೈತನಿಗೆ ಮನಸೋ ಇಚ್ಛೆ ಬೈದು ಕಳಿಸಿದ್ದಾರೆ.
Advertisement
Advertisement
ನೀರು ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ರೈತ ಮಲ್ಲಪ್ಪ ಇದೀಗ ಆರೋಪಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಪ್ರಚಾರ ಮೊಟಕುಗೊಳಿಸಿ ಶಾಸಕ ಹಂಪಯ್ಯ ನಾಯಕ್ ಹಾಗೂ ಎನ್ ಎಸ್ ಬೋಸರಾಜ್ ಗ್ರಾಮದಿಂದ ಹೊರಟು ಹೋಗಿದ್ದಾರೆ.
Advertisement
ಇತ್ತೀಚೆಗಷ್ಟೇ ಮಾನ್ವಿಯ ತಡಕಲ್ ಗ್ರಾಮದಲ್ಲಿ ಮತಯಾಚನೆ ವೇಳೆ ಶಾಸಕ ಹಂಪಯ್ಯ ನಾಯಕ್ ಗೆ ಜನ ಬೆವರಿಳಿಸಿದ್ದರು. ಎರಡು ಬಾರಿ ಶಾಸಕರಾದ್ರೂ ಏನೂ ಅಭಿವೃದ್ಧಿ ಮಾಡಿಲ್ಲ ಅಂತ ತರಾಟೆಗೆ ತೆಗೆದುಕೊಂಡಿದ್ದರು.