– ಬಾಗಲಕೋಟೆಯಲ್ಲಿ ಬಿಎಸ್‍ವೈ ಆರೋಪಕ್ಕೆ ಕೈ ನಾಯಕರ ತಿರುಗೇಟು
ಬಾಗಲಕೋಟೆ/ ಬೆಂಗಳೂರು: ಸಿಎಂ ಆಪ್ತರಾಗಿರುವ ಎಂಎಲ್‍ಸಿ ಗೋವಿಂದ್‍ರಾಜ್ ಕೇಂದ್ರದ ಕಾಂಗ್ರೆಸ್ ಮುಖಂಡರಿಗೆ ಸಾವಿರ ಕೋಟಿಗೂ ಹೆಚ್ಚಿನ ದುಡ್ಡು ಕೊಟ್ಟಿದ್ದಾರೆ. ಇಂದೋ ನಾಳೆ ಈ ಸತ್ಯ ಹೊರಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಸಿಎಂ ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು, ಜನರ ತೆರಿಗೆ ಹಣದ ಜೊತೆ ಚೆಲ್ಲಾಟವಾಡಿ, ಕಾಂಗ್ರೆಸ್ ನಾಯಕರಿಗೆ ದುಡ್ಡು ಕೊಟ್ಟಿದ್ದಾರೆ, ಈ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಲಿ ಎಂದು ಸವಾಲ್ ಎಸೆದಿದ್ದಾರೆ.
Advertisement
ಗೋವಿಂದ್‍ರಾಜ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ, ಒಂದು ಡೈರಿ ಸಿಕ್ಕಿದೆ, ಸದ್ಯದಲ್ಲೇ ಸಿಬಿಐ ತನಿಖೆ ಸಹ ನಡೆಯಬಹುದು, ಸತ್ಯ ಬೆಳಕಿಗೆ ಬರಲಿದೆ ಎಂದರು.
Advertisement
ಮಾಜಿ ಸಚಿವ ಶಿವರಾಜ್ ತಂಗಡಗಿ ಸಣ್ಣ ನೀರಾವರಿ ಖಾತೆ ಸಚಿವರಾಗಿದ್ದಾಗ, ಕಾಮಗಾರಿ ನಡೆಸದೇ 43.88 ಕೋಟಿ ರೂ ಹಣ ಗುಳುಂ ಮಾಡಿದ್ದಾರೆ, ಈ ಬಗ್ಗೆ ತನಿಖೆಯಾಗಿ ಅಕ್ರಮ ನಡೆದಿರುವುದು ಸಾಬೀತಾಗಿದ್ದರೂ ಸಿಎಂ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
Advertisement
ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ 150 ಕೋಟಿ ರೂ. ಸಿಕ್ಕರೂ ಅವ್ರು ಮಂತ್ರಿಸ್ಥಾನದಲ್ಲೇ ಮುಂದುವರೆದಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಚಾಟಿ ಬೀಸಿದ್ರಲ್ಲದೇ, ನನ್ನ ಬಳಿ ಇನ್ನು ಹಲವಾರು ಮಾಹಿತಿಗಳಿವೆ ಎಂದು ಹೇಳಿ ಸುದ್ದಿಗೋಷ್ಠಿ ಮುಗಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಮಾಡಿರೋ ಆರೋಪಕ್ಕೆ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ.. ಆರೋಪವನ್ನ ರುಜುವಾತು ಮಾಡಲ್ಲಿ ಇಲ್ಲ ರಾಜಕೀಯ ನಿವೃತ್ತಿ ಪಡೆಯಲಿ ಅಂತಾ ಸವಾಲು ಎಸೆದಿದ್ದಾರೆ. ಸಾವಿರ ಕೋಟಿ ಹೈಕಮಾಂಡ್ ಗೆ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಸಿದ ಸಿಎಂ ಸಿದ್ದರಾಮಯ್ಯ,
ಪ್ರೂವ್ ಮಾಡಲಿ: ಬಿಎಸ್‍ವೈ ನೀಡಿರುವ ಹೇಳಿಕೆಯನ್ನ ಪ್ರೂವ್ ಮಾಡಲಿ, ಇಲ್ಲವಾದರೆ ರಾಜಕೀಯಕ್ಕೆ ನಿವೃತ್ತಿ ನೀಡಲಿ ಸಿಎಂ ಸಿದ್ದರಾಮಯ್ಯ ಬಿಎಸ್‍ವೈಗೆ ಸವಾಲು ಹಾಕಿದ್ದಾರೆ.
ಮಾನ ನಷ್ಟ ಕೇಸ್ ಹಾಕ್ಬೇಕು: ರಾಜಕೀಯದಲ್ಲಿ ಇಂತಹ ವ್ಯವಸ್ಥೆ ಬಂದುಬಿಟ್ಟಿದೆ. ಒಂದಿಬ್ಬರ ಮೇಲೆ ಮಾನನಷ್ಟ ಕೇಸ್ ಹಾಕಿದ್ರೆ ಎಲ್ಲವೂ ಬಂದ್ ಆಗುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.