ಬೆಂಗಳೂರು: ಕಾಂಗ್ರೆಸ್‌ನವರು ಅಧಿಕಾರದಲ್ಲಿ ಇದ್ದರೆ ಮನೆ-ಮನೆಗಳಲ್ಲಿ ಚುನಾವಣೆ ಮಾಡಿ ಗಂಡ-ಹೆಂಡತಿಗೆ ಜಗಳ ತಂದು ಇಡುತ್ತಾರೆ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲು ಮುಂದಾಗಿರುವ ಸರ್ಕಾರದ ನಡೆಗೆ ಕಿಡಿಕಾರಿದ ಅವರು, ಜನರು ನೆಮ್ಮದಿಯಾಗಿ ಇರಬಾರದು ಅಂತ ಇದನ್ನ ಮಾಡೋಕೆ ಹೊರಟಿದ್ದಾರೆ ಅನ್ನಿಸುತ್ತೆ. ಕಾಲೇಜುಗಳಲ್ಲಿ ಚುನಾವಣೆ ಆಗಿ ನೆಮ್ಮದಿಯಾಗಿ ಇರಬಾರದು ಅಂತ ಇರಬೇಕು. ಮುಂದೆ ಮನೆ ಮನೆಯಲ್ಲಿ ಚುನಾವಣೆ ಮಾಡಿ ಹೆಂಡತಿ-ಗಂಡ, ಮಕ್ಕಳು ನಡುವೆ ಜಗಳ ತಂದು ಮನೆಯಲ್ಲೂ ಸುಖವಾಗಿ ಇರಬಾರದು ಅಂತ ಮಾಡ್ತಾರೆ ಅನ್ನಿಸುತ್ತೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿ ರಾಜೀನಾಮೆ ನೀಡಲಿ – LPG ದರ ಏರಿಕೆಗೆ ಸಿಎಂ ಕಿಡಿ
ನಮ್ಮ ಸರ್ಕಾರ ಬಂದರೆ ಜನರು ನೆಮ್ಮದಿಯಿಂದ ಇರೋದಕ್ಕೆ ಏನ್ ಮಾಡಬೇಕೋ ಅದನ್ನ ಮಾಡ್ತೀವಿ. ಚುನಾವಣೆ ಮಾಡಿ ನಾಯಕತ್ವ ಬರಬೇಕು ಅಂತ ಇಲ್ಲ. ನಾಯಕತ್ವ ಯಾರು ಕೊಡೋ ಅವಶ್ಯಕತೆ ಇಲ್ಲ. ಧಾರವಾಡದಲ್ಲಿ ನಾಯಕತ್ವ ಇಲ್ಲದೆ ಸಾವಿರಾರು ಜನ ಹೋರಾಟ ಮಾಡಿದ್ರು. ಪಾಠ ಹೇಳಿ ನಾಯಕತ್ವ ಬರೊಲ್ಲ. ಸಂದರ್ಭದಿಂದ ನಾಯಕತ್ವ ಹುಟ್ಟುತ್ತೆ. ನಾಯಕತ್ವ ಸೃಷ್ಟಿಯಾಗೋದು. ಪುಸ್ತಕದಲ್ಲಿ ಬರೋದಲ್ಲ ಎಂದು ಕಾಲೇಜುಗಳಲ್ಲಿ ಚುನಾವಣೆಗೆ ವಿರೋಧ ವ್ಯಕ್ತಪಡಿಸಿದರು.

