ಇದ್ದವರು ಮೂರು ಜನ ಆದ್ರೆ ಕದ್ದವರು ಯಾರು?: ಸಿಎಂ ಕ್ಲೀನ್‌ಚಿಟ್‌ಗೆ ಸಿ.ಟಿ.ರವಿ ವ್ಯಂಗ್ಯ

Public TV
1 Min Read
siddaramaiah and ct ravi

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಸಿಎಂಗೆ ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿರುವ ವಿಚಾರಕ್ಕೆ ಪರಿಷತ್‌ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದು, ಇದ್ದವರು ಮೂರು ಜನ ಆದ್ರೆ ಕದ್ದವರು ಯಾರು ಎಂದು ವ್ಯಂಗ್ಯವಾಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆದಿದೆ ಅಂತ ಸರ್ಕಾರ ಒಪ್ಪಿಕೊಂಡಿದೆ. ಸಿದ್ದರಾಮಯ್ಯ ಕುಟುಂಬದವರು 14 ಸೈಟ್ ವಾಪಸ್‌ ಕೊಟ್ಟರು. ಜಿಲ್ಲಾಧಿಕಾರಿಗಳು ವರದಿ ಕೊಟ್ಟಿದ್ದಾರೆ. ಇದ್ದವರು ಮೂರು ಜನ, ಕದ್ದವರು ಯಾರು ಎಂದು ಪ್ರಶ್ನಿಸಿದರು.

ಲೋಕಾಯುಕ್ತ ತನಿಖೆ ಎಸಿಬಿ ದಾರಿಯಲ್ಲೇ ಇಳಿದಿದೆ. ಕ್ಲೀನ್‌ಚಿಟ್ ಕೊಟ್ಟಿರೋದು ದುರದೃಷ್ಟಕರ. ಲೋಕಾಯುಕ್ತದಿಂದ ಸಮಗ್ರ ತನಿಖೆಯಾಗಿಲ್ಲ. ಹಣ ವರ್ಗಾವಣೆ ಆಗಿರೋದನ್ನು ಇ.ಡಿ ಪತ್ತೆ ಹಚ್ಚಿದೆ. ಅಪರಾಧ ನಡೆಸಿದ ಅಪರಾಧಿ ಯಾರು ಎಂಬುದನ್ನು ಲೋಕಾಯುಕ್ತ ಹೇಳಿಲ್ಲ. ಏನು ನಡೆದೇ ಇಲ್ವಾ ಹಾಗಾದ್ರೆ? ಸತ್ಯವನ್ನ ಸಮಾಧಿ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದರು.

ನಮ್ಮ ಪಕ್ಷದ ವರಿಷ್ಠರ ಜೊತೆ ಸಮಾಲೋಚನೆ ಮಾಡಿ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡ್ತೀವಿ. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಶಾಸಕರಾಗಿ ಮಾತಾಡ್ತಿದ್ದಾರೋ ಗೊತ್ತಿಲ್ಲ. ವಕೀಲರಾಗಿ ಕೆಲಸ ಮಾಡೋದಕ್ಕೆ ಫೀ ಸಿಗುತ್ತೆ. ಶಾಸಕರಾಗಿ ಮಾತಾಡೋದಕ್ಕೂ ಫೀ ಸಿಗುತ್ತೋ ಗೊತ್ತಿಲ್ಲ ಎಂದು ಟಾಂಗ್‌ ಕೊಟ್ಟರು.

Share This Article