ನವದೆಹಲಿ: ಜಯಲಲಿತಾ ನಿಧನರಾದ ಮೇಲೆ ತಮಿಳುನಾಡಿನಲ್ಲಿ ಸಿಎಂ ಕುರ್ಚಿಗಾಗಿ ನಡೆದ ಕುದುರೆ ವ್ಯಾಪಾರ ಈಗ ಬಯಲಾಗಿದೆ.
ರೆಸಾರ್ಟ್ ನಲ್ಲಿದ್ದ ಶಾಸಕರಿಗೆ ಶಶಿಕಲಾ ಬಣದ ಹಾಲಿ ಸಿಎಂ ಇ.ಪಳನಿಸ್ವಾಮಿ ಟೀಂ ಕೋಟಿ ಕೋಟಿ ಸುರಿದಿದೆ. ರಾಷ್ಟ್ರೀಯ ಇಂಗ್ಲಿಷ್ ಚಾನೆಲ್‍ವೊಂದು ಸ್ಟಿಂಗ್ ಆಪರೇಷನ್ ನಡೆಸಿ ಈ ರಹಸ್ಯವನ್ನ ಭೇದಿಸಿದೆ.
Advertisement
ಮೊದಲು ಪನ್ನೀರ್ ಸೆಲ್ವಂ ಬಣ ಪ್ರತಿ ಶಾಸಕರಿಗೆ 1 ಕೋಟಿ ಆಫರ್ ನೀಡಿತ್ತು. ಆದ್ರೆ ಶಶಿಕಲಾ ಬಣ 2 ಕೋಟಿಯಿಂದ 6 ಕೋಟಿಯಷ್ಟು ಹಣ, ಜೊತೆಗೆ ಚಿನ್ನ ಕೊಟ್ಟು ಶಾಸಕರನ್ನ ಖರೀದಿಸಿದೆ. ಈ ಸತ್ಯವನ್ನು ಅಣ್ಣಾಡಿಎಂಕೆ ಶಾಸಕ ಶರವಣನ್ ಸ್ಟಿಂಗ್ ಆಪರೇಷನ್‍ನಲ್ಲಿ ಬಾಯ್ಬಿಟ್ಟಿದ್ದಾರೆ.
Advertisement
ನಾನು 2 ಕೋಟಿ ಪಡೆದು ಇ.ಪಳನಿಸ್ವಾಮಿಯವರಿಗೆ ಬೆಂಬಲ ನೀಡಿದ್ದೇನೆ. ಕೆಲವರು 6 ಕೋಟಿವರೆಗೂ ಹಣ ಪಡೆದಿದ್ದಾರೆ ಅಂತಾ ಒಪ್ಪಿಕೊಂಡಿದ್ದಾರೆ. ನಾವು ಮೊದಲು ರೆಸಾರ್ಟ್‍ಗೆ ಹೋಗಲು ಬಸ್ ಹತ್ತಿದಾಗ 2 ಕೋಟಿ, ರಾಜ್ಯಪಾಲರರ ಭೇಟಿಗೆ ಏರ್‍ಪೋರ್ಟ್‍ಗೆ ಬಂದಾಗ 4 ಕೋಟಿ, ಕೊಯಂಬತ್ತೂರು ತಲುಪಿದಾಗ ಕೆಲವರಿಗೆ 6 ಕೋಟಿ ಹಣ ಸಂದಾಯವಾಗಿದೆ ಅಂತಾ ಹೇಳಿದ್ದಾರೆ.
Advertisement
ನೋಟು ಅಮಾನ್ಯವಾಗಿದ್ರಿಂದ ಹಣದ ಕೊರತೆ ಇತ್ತು. ಅದಕ್ಕೆ ಕೆಲವರಿಗೆ ಚಿನ್ನದ ರೂಪದಲ್ಲಿ ಶಶಿಕಲಾ ಅಂಡ್ ಇಪಿಎಸ್ ಕಡೆಯವ್ರು ಬಾಕಿ ಸಂದಾಯ ಮಾಡಿದ್ರು ಅಂತಾನೂ ಹೇಳಿದ್ದಾರೆ. ಅಷ್ಟೇ ಅಲ್ಲ ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ವೋಟ್ ಮಾಡೋದಕ್ಕೂ ನಮ್ಮದು ಕೆಲವು ಡಿಮ್ಯಾಂಡ್‍ಗಳಿರುತ್ತೆ ಅಂತ ಹೇಳಿಕೊಂಡಿರೋದು ಈಗ ವಿವಾದ ಹುಟ್ಟುಹಾಕಿದೆ.
Advertisement
MLAs were purchased by Sasikala. Want investigation. Governor should look into this issue: TKS Elangovan, DMK, on #MLAsForSale expose pic.twitter.com/75KXMb9QCG
— TIMES NOW (@TimesNow) June 12, 2017
Governor of Tamil Nadu should investigate this issue. All 234 MLAs should be investigated: V Maitreyan, OPS camp #MLAsForSale pic.twitter.com/fcL7KbFqmi
— TIMES NOW (@TimesNow) June 12, 2017