ಧಾರವಾಡ: ಕಿತ್ತೂರಿನಲ್ಲಿ ಮಾತು ಬಾರದ ವೃದ್ಧೆಯ ಜೊತೆ ಶಾಸಕ ವಿನಯ್ ಕುಲಕರ್ಣಿಯವರು (Vinay Kulkarni) ಕೈ ಸನ್ನೆಯಲ್ಲೇ ಸಂಭಾಷಣೆ ನಡೆಸಿದ ವೀಡಿಯೋ ವೈರಲ್ ಆಗಿದೆ.
ಧಾರವಾಡದ (Dharwad) ಜಯನಗರ ನಿವಾಸಿ ವೃದ್ಧೆ ಮುನೀರಾ ಬೇಗಂ ಮುಲ್ಲಾ ತನ್ನ ಸಹೋದರಿ ಮೆಹಬೂಬ್ಬಿ ಮುಲ್ಲಾ ಅವರ ಸಹಾಯದಿಂದ ಕಿತ್ತೂರಿನಲ್ಲಿ (Kitturu) ವಿನಯ್ ಕುಲಕರ್ಣಿಯವರನ್ನು ಭೇಟಿಯಾಗಿದ್ದರು. ಈ ವೇಳೆ ತಮ್ಮ ಕುಟುಂಬದ ಸಮಸ್ಯೆಯನ್ನು ಶಾಸಕರ ಮುಂದೆ ಕೈ ಸನ್ನೆಯಲ್ಲೇ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮಹಿಳೆಗೆ ಅರ್ಥವಾಗುವಂತೆ ಕೈ ಸನ್ನೆಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಗ್ಯಾಸ್ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ, ಪೆಟ್ರೋಲಿಯಂ ಸಚಿವರು ಮಾತಾಡಲಿ: ಮುನಿಯಪ್ಪ
ನಿಮ್ಮ ಪತ್ನಿ ಎಲ್ಲಿದ್ದಾರೆ ಎಂದು ಕೈ ಸನ್ನೆಯಿಂದ ವೃದ್ಧೆ, ಶಾಸಕರಿಗೆ ಕೇಳಿದ್ದಾಳೆ. ಅದಕ್ಕೆ ಮನೆಯಲ್ಲಿ ಇರ್ತಾರೆ, ಅಲ್ಲಿ ಹೋಗಿ ಭೇಟಿ ಮಾಡು ಎಂದು ಅದೇ ಶೈಲಿಯಲ್ಲಿ ಸನ್ನೆ ಮಾಡಿ ಶಾಸಕರು ಉತ್ತರಿಸಿದ್ದಾರೆ. ಕೊನೆಗೆ ತನ್ನ ಅಹವಾಲು ಚೀಟಿಯನ್ನು ಶಾಸಕರಿಗೆ ಕೊಟ್ಟ ತೆರಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: IPL ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್ ತಗೋಳಿ – ಡಿಕೆ ಸುರೇಶ್

