ಬಾಗಲಕೋಟೆ: ಶಾಸಕ, ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಹುನಗುಂದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಘಟನೆ ನಡೆದಿದೆ.
ಇಳಕಲ್ ನಗರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಶಪ್ಪನವರ್, ಲೇ ಮಗನೆ ಎಂದು ಸಂಬೋಧಿಸಿ, ನಿನಗೆಷ್ಟು ತಾಕತ್ತಿದೆ.. ಲೇ ಗಂಡುಮಗನೆ ಇದೇ 15 ರಂದು ಫಲಿತಾಂಶದ ದಿನ ನೀನು ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇನೆ. ನನ್ನ ವಿರುದ್ಧ ಮಾತನಾಡೋಕೆ ಎಷ್ಟಿದೆ ನಿನಗೆ ತಾಕತ್ತು. ಪದೇ ಪದೇ ಇಳಕಲ್ ನಲ್ಲಿ ಬಿಜೆಪಿ ಇದೆ ಅಂತ ಹೇಳ್ತಾನೆ. ಕಳೆದ ಬಾರಿ ಇಟ್ಟಿಲ್ಲವೇ ಎಣ್ಣಿ. ಈ ಸಾರಿನೂ ಮುಟ್ಟಿ ಮಟ್ಟಿ ನೋಡಿಕೊಳ್ಳುವಂಗೆ ಎಣ್ಣಿ ಇಡ್ತಿನಿ. ಇಬ್ಬರು ಹುಚ್ಚನಾಯಿಗಳು ನಮ್ಮ ಮನೆಯಲ್ಲಿ ಉಂಡು ಈಗ ಬಿಜೆಪಿ ಸೇರಿ ನಮಗೆ ದ್ರೋಹಾ ಮಾಡ್ತಿದ್ದಾರೆ. ಇನ್ನಿಬ್ರು ಎಂಐಎಂ ಸೇರಿದ್ದಾರೆ ಅಂತ ಆಕ್ರೋಶದ ಮಾತುಗಳನ್ನು ಹೊರಹಾಕಿದ್ದಾರೆ.
Advertisement
Advertisement
ಕೊಪ್ಪಳದಿಂದ ಜೆರ್ಸಿ ಆಕಳ ಬಂದಿದೆ ಎಂದು ಪಕ್ಷೇತರ ಅಭ್ಯರ್ಥಿ ಎಸ್ ಆರ್ ನವಲಿಹಿರೆಮಠ ಬಗ್ಗೆ ಲೇವಡಿ ಮಾಡಿದ ಕಾಶಪ್ಪನವರ್, ಜೆರ್ಸಿ ಆಕಳಾನು ಕಾಂಗ್ರೆಸ್ದೇ ತಿಂದು ಬೆಳೆದಿದೆ. ಎಂಐಎಂ, ಬಿಜೆಪಿ, ಜೆಡಿಎಸ್, ಬಹುಜನ ಸಮಾಜ ಪಾರ್ಟಿಯವರು ಕೂಡಿದ್ದಾರೆ. ಇನ್ನೂ ಹತ್ತು ಜನ ಕೂಡಿರಿ, ನಾನೂ ಅಂಜೋದಿಲ್ಲ ಅಂತ ಗರಂ ಆಗಿದ್ದಾರೆ.
Advertisement
ಕುಮಾರಸ್ವಾಮಿ ಗೆ ಇಲ್ಲಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಕೊಡೋದಕ್ಕೆ ಧಮ್ ಇಲ್ಲ. ಬಿಜೆಪಿಗೆ ಸಪೋರ್ಟ್ ಮಾಡ್ತಿದ್ದಾನೆ ಅದಕ್ಕೆ ರಾಹುಲ್ ಗಾಂಧಿ ಜೆಡಿಎಸ್ ಅನ್ನ ಬಿ.ಟೀಂ ಅಂತ ಕರೆದಿದ್ದು ಅಂತ ಹೇಳಿದ್ರು.