ರಾಂಚಿ: ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ (National Highway) ತುಂಬಿದ ಕೆಸರಲ್ಲಿ (Mud) ಕುಳಿತು ಶಾಸಕಿಯೊಬ್ಬರು (MLA) ಸ್ನಾನ (Bath) ಮಾಡಿ ಪ್ರತಿಭಟಿಸಿರುವ ಘಟನೆ ಜಾರ್ಖಂಡ್‌ನ (Jharkhand) ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ. ಶಾಸಕಿ ಕೊಳಚೆ ನೀರಿನಲ್ಲಿ ಮಿಂದು ತಕ್ಷಣವೇ ರಸ್ತೆಯ ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.
ಮಹಾಗಾಮಾದ ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಅವರು ತಮ್ಮ ಮೇಲೆ ಕೆಸರು ನೀರನ್ನು ಸುರಿದುಕೊಂಡು, ಈ ರಸ್ತೆಯ ದುರಸ್ತಿಯನ್ನು ಕೈಗೊಂಡು ದೊಡ್ಡ ಗುಂಡಿಗಳನ್ನು ಮುಚ್ಚಲು ಈಗಿಂದೀಗಲೇ ಮುಂದಾಗದಿದ್ದರೆ, ನಾನು ಇಲ್ಲಿಂದ ಕದಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ – ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್
Advertisement
Advertisement
ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಹೋರಾಟದಲ್ಲಿ ನಾನು ಭಾಗಿಯಾಗಲು ಬಯಸಲ್ಲ. ಇದು ಎನ್‌ಹೆಚ್-133 ಆಗಿದ್ದು, ಈ ವರ್ಷ ಮೇ ತಿಂಗಳಿನಲ್ಲಿ ಇದರ ವಿಸ್ತರಣೆಯ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿಕೊಂಡಿದ್ದರು. ಆದರೆ ದುರಸ್ತಿಗೆ ಕೇಂದ್ರ ಹಣವನ್ನು ನೀಡಿಲ್ಲ. ಈ ಹೆದ್ದಾರಿಯಿಂದ ಸಾರ್ವಜನಿಕರು ಕಷ್ಟಪಡುತ್ತಿದ್ದು, ಇದನ್ನು ಸರಿಪಡಿಸುವಂತೆ ನಾನು ಮುಖ್ಯಮಂತ್ರಿಗಳಿಗೆ ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೋಗ್ಬೇಡಿ ಸರ್- ಮಂಡ್ಯದಲ್ಲಿ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರು