ಮಂಡ್ಯ: ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರುಗಳ ಸರಮಾಲೆ ಕೇಳಿ ಬಂದ ಹಿನ್ನೆಲೆಯಲ್ಲಿ, ಅಬಕಾರಿ ಅಧಿಕಾರಿ ಚಂದ್ರಶೇಖರ್ ಗೆ ಕರೆ ಮಾಡಿದ ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್‍ಗೌಡ ಏಕವಚನದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ನಾಗಮಂಗಲ ತಾಲೂಕಿನ ಪಾಲಗ್ರಹಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರವಾಸಿ ತಾಣ ಕೋಟೆಬೆಟ್ಟದಲ್ಲಿ ಶಾಸಕ ಸುರೇಶ್‍ಗೌಡ ಗ್ರಾಮ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಹಿಳೆಯರು ಶಾಸಕರ ಬಳಿ ನೋವು ತೋಡಿಕೊಂಡಿದ್ದಾರೆ.
Advertisement
ಈ ಹಿಂದೆ ನಡೆದ ಎರಡು ಪಂಚಾಯ್ತಿಗಳ ವ್ಯಾಪ್ತಿಯ ಗ್ರಾಮದರ್ಶನ ಕಾರ್ಯಕ್ರಮದಲ್ಲೂ ಸಹ ಇದೇ ದೂರುಗಳು ಕೇಳಿಬಂದಿದ್ದವು. ಇದನ್ನು ಅಬಕಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಹೀಗಾಗಿ ಗ್ರಾಮಸ್ಥರೆದುರೇ ಅಬಕಾರಿ ಅಧಿಕಾರಿಗೆ ಕರೆ ಮಾಡಿ ಶಾಸಕ ಸುರೇಶ್‍ಗೌಡ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Advertisement
ಅಬಕಾರಿ ನಿರೀಕ್ಷಕ ಜ್ಞಾನಪ್ರಕಾಶ ಏನು ಕತ್ತೆ ಮೇಯಿಸುತ್ತಿದ್ದಾನಾ. ಮೊನ್ನೆ 144 ಸೆಕ್ಷನ್ ಜಾರಿ ಇದ್ದರೂ ಬಾರ್ ಗಳಲ್ಲಿ ಡ್ರಿಂಕ್ಸ್ ಮಾರಿದ್ದಾರೆ. ಏನ್ ಕ್ರಮ ತಗೊಂಡಿದ್ದೀರಿ. ಏನ್ ತಮಾಷೆ ಆಡ್ತಿದ್ದೀರ. ಹಳ್ಳಿಗಳನ್ನು ಹಾಳು ಮಾಡುತ್ತಿದ್ದೀರಿ. ಲೋ… ಮಾರುತ್ತಿರುವುದು ಸಾರ್ವಜನಿಕರಿಗೆ ಗೊತ್ತಿದೆ ನಿಮಗೆ ಗೊತ್ತಿಲ್ವ. ಬರೀ ಕಥೆ ಹೇಳಬೇಡಿ. ಮಾರುವ ಅಂಗಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೊದಲು ಅದನ್ನು ವಿತರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಕ್ರೋಶ ಹೊರಹಾಕಿದರು.
Advertisement
ಶಾಸಕರ ಸಿಟ್ಟಿಗೆ ಹೆದರಿ ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿ ಚಂದ್ರಶೇಖರ್ ಬಂದಿದ್ದಾರೆ. ಇನ್ನೂ ಕ್ರಮ ಕೈಗೊಳ್ಳದೇ ಇದ್ದರೆ ನಿಮ್ಮನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಸುರೇಶ್ ಗೌಡ ಎಚ್ಚರಿಕೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv