ಬೆಂಗಳೂರು: ಬಳ್ಳಾರಿ ಹಂಪಿ ಉತ್ಸವವನ್ನು ಆಚರಣೆ ಮಾಡದಿರಲು ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ಬಗ್ಗೆ ಶಾಸಕ ಶ್ರೀರಾಮುಲು ಕಿಡಿಕಾರಿದ್ದು, ಕಾಂಗ್ರೆಸ್ ಪಕ್ಷದ ಕೃತಜ್ಞತಾ ಸಮಾವೇಶ ಮಾಡಿದಾಗ ಬರದ ಬರಗಾಲ ಹಂಪಿ ಉತ್ಸವ ಆಚರಿಸಲು ಬಂತೆ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಶ್ರೀರಾಮುಲು ಅವರು, ದುಂದು ವೆಚ್ಚ ಮಾಡಿ ಬಳ್ಳಾರಿಯಲ್ಲಿ ಕೃತಜ್ಞತಾ ಸಮಾವೇಶ ಮಾಡಿದಾಗ ಅಡ್ಡ ಬರದ ಬರಗಾಲ ಹಂಪಿ ಉತ್ಸವ ಆಚರಿಸಲು ಬಂತೆ? ನಿಮ್ಮ ರೈತಪರ ಕಾಳಜಿಯನ್ನು ರೈತರ ಸಾಲಮನ್ನಾ ಮಾಡುವ ಮೂಲಕ ತೋರಿಸಿ. ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಹಕಾರ ನೀಡುವ ಮೂಲಕ ಕೆಲಸ ಮಾಡಿ ಎಂದು ಬರೆದು ಸಚಿವ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
Advertisement
Advertisement
ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿ, ರಾಜ್ಯದ ನೂರು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಹಂಪಿ ಉತ್ಸವವನ್ನು ಮುಂದೂಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ವರ್ಷ ವಿಜೃಂಭನೆಯಿಂದ ಆಚರಿಸಲಾಗುತ್ತದೆ ಎಂದು ಹೇಳಿದ್ದರು.
Advertisement
ದುಂದು ವೆಚ್ಚ ಮಾಡಿ ಬಳ್ಳಾರಿಯಲ್ಲಿ ಕೃತಜ್ಞನತಾ ಸಮಾವೇಶ ಮಾಡಿದಾಗ ಅಡ್ಡ ಬರದ ಬರಗಾಲ ಹಂಪಿ ಉತ್ಸವ ಆಚರಿಸಲು ಬಂತೆ ? ನಿಮ್ಮ ರೈತಪರ ಕಾಳಜಿಯನ್ನು ರೈತರ ಸಾಲಮನ್ನಾ ಮಾಡುವ ಮೂಲಕ ತೋರಿಸಿ. ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಹಕಾರ ನೀಡುವ ಮೂಲಕ ಮಾಡಿ. @DKShivakumar
— B Sriramulu (@sriramulubjp) November 28, 2018
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv