ಬೆಂಗಳೂರು: ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bengaluru Rural) ಹೊಸಕೋಟೆ (Hoskote) ಶಾಸಕ ಶರತ್ ಬಚ್ಚೇಗೌಡ (Sharath Bache Gowda) ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಹೊಸಕೋಟೆಯಲ್ಲಿ ನಿರ್ಣಾಯಕವಾಗಿರುವ ಅತೀ ಹೆಚ್ಚು ಮತಗಳನ್ನು ಹೊಂದಿರುವ ಸಮುದಾಯವೆಂದರೆ ಅದು ಒಕ್ಕಲಿಗ (Vokkaliga) ಸಮುದಾಯ. ಈ ಸಮುದಾಯ 45 ಸಾವಿರ ಮತಗಳನ್ನು ಹೊಂದಿದೆ. ಹೀಗಾಗಿ ಈ ಮತಗಳನ್ನು ಗಟ್ಟಿಗೊಳಿಸುವ ಸಲುವಾಗಿ ಶಾಸಕ ಶರತ್ ಒಕ್ಕಲಿಗರ ಸಂಘಕ್ಕೆ 6 ಕೋಟಿ ರೂ. ಮೌಲ್ಯದ ಜಮೀನನ್ನು ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಇದನ್ನೂ ಓದಿ ಸಾವರ್ಕರ್, ಅಂಬೇಡ್ಕರ್ ಸಿದ್ಧಾಂತದ ನಡುವೆ ಚುನಾವಣೆ: ಬಿ.ಕೆ ಹರಿಪ್ರಸಾದ್
Advertisement
Advertisement
ಕಳೆದ ಕೆಂಪೇಗೌಡ ಜಯಂತಿಯಲ್ಲಿ ಜಮೀನು ಕೊಡಿಸುವುದಾಗಿ ಶಾಸಕ ಶರತ್ ಭರವಸೆ ನೀಡಿದ್ದರು. ಇದೀಗ ನುಡಿದ ಮಾತಿನಂತೆ ಚುನಾವಣೆ ಸಂದರ್ಭದಲ್ಲಿ ಹೊಸಕೋಟೆ ತಾಲೂಕಿನ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯ ಸಂಘದ ಹೆಸರಿಗೆ ಬರೆದು ಕೊಟ್ಟಿದ್ದಾರೆ.
Advertisement
ದಾನ ಮಾಡಿರುವ ಜಮೀನಿನಲ್ಲಿ ಶಾಲಾ ಕಾಲೇಜುಗಳನ್ನು ನಿರ್ಮಿಸಿ ಎಲ್ಲಾ ಸಮುದಾಯದ ಬಡವರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ.ಇದನ್ನೂ ಓದಿ: ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ- ಸುನಿಲ್‌ಗೆ ಮುತಾಲಿಕ್ ತಿರುಗೇಟು
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k