ಮೈಸೂರು: ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini sindhuri) ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್ (Sa Ra Mahesh) ಅವರಿಂದು 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಾರಾ ಮಹೇಶ್ ಭೂ ಅಕ್ರಮ ಮಾಡಿದ್ದಾರೆ ಎಂಬ ರೋಹಿಣಿ ಸಿಂಧೂರಿ ಆಡಿಯೊ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಸುದ್ದಿಗೋಷ್ಠಿ (Pressmeet) ನಡೆಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಆರೋಪ – 1,500 ಪುಟಗಳ ದಾಖಲೆ ಸಲ್ಲಿಸಿದ ಸಾ.ರಾ.ಮಹೇಶ್
Advertisement
Advertisement
ಸಾ.ರಾ ಮಹೇಶ್ ಭೂ ಕಬಳಿಕೆ ಮಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ಬಿಂಬಿಸಿದ್ದರು. ಈ ಕಾರಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Case) ಹೂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಟ್ಟೆನೋವೆಂದು ಖಾಸಗಿ ಕ್ಲಿನಿಕ್ ಸೇರಿದ ಮಹಿಳೆ – ಆಪರೇಷನ್ ನೆಪದಲ್ಲಿ ಎರಡೂ ಕಿಡ್ನಿ ಕದ್ದ ವೈದ್ಯರು
Advertisement
ಅಲ್ಲದೇ ನಾನು ಬೇಕಿದ್ದರೆ ರಾಜಕಾರಣ (Politics) ಬಿಡುತ್ತೇನೆಯೇ ಹೊರತು ಇಂತಹ ಗೋಮುಖಗಳ ಮುಖವಾಡ ಕಳಚುವುದನ್ನು ಬಿಡುವುದಿಲ್ಲ. ಕಷ್ಟಪಟ್ಟು ಬೆಳೆದ ನನಗೆ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೆಸರು ಎರಚಿದರು. ನನಗೆ ಆದ ಅನ್ಯಾಯದ ವಿರುದ್ಧ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ. ರಾಜಕಾರಣದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಆದರೆ ಎಲ್ಲರೂ ಭ್ರಷ್ಟರಲ್ಲ. ಇವರು ಎಲ್ಲರನ್ನೂ ಭ್ರಷ್ಟರೆಂದು ಬಿಂಬಿಸಲು ಯತ್ನಿಸುತ್ತಾರೆ. ಇಂಥವರ ಮುಖವಾಡ ಕಳಚುತ್ತೇನೆ ಎಂದು ಸವಾಲು ಹಾಕಿದ್ದಾರೆ.
Advertisement
ನಂತರ ಸಾರಾ ಮಹೇಶ್ ಅವರ ಪರ ವಕೀಲ (Lawyer) ಅರುಣ್ ಕುಮಾರ್ ಮಾತನಾಡಿ, ಮಾನನಷ್ಟ ಮೊಕದ್ದಮೆ ಹೂಡುವ ಮುನ್ನಾ ರೋಹಿಣಿ ಸಿಂಧೂರಿ ಅವರಿಗೆ ಲೀಗಲ್ ನೋಟಿಸ್ ಕೊಟ್ಟಿದ್ದೆವು. ನೋಟಿಸ್‌ಗೆ ರೋಹಿಣಿ ಸಿಂಧೂರಿ ಅವರು ಉತ್ತರ ಕೊಟ್ಟಿದ್ದು, ಸಾರಾ ಮಹೇಶ್ ವಿರುದ್ಧ ಮಾತನಾಡಿರೋ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಇದು ಖಾಸಗಿ ಸಂಭಾಷಣೆ ಎಂದು ಹೇಳಿದ್ದಾರೆ. ಇದೇ ಉತ್ತರದ ಆಧಾರದ ಮೇಲೆ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದು ತಿಳಿಸಿದ್ದಾರೆ.
2ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ (District Session Court) ರೋಹಿಣಿ ಸಿಂಧೂರಿ ಅವರಿಗೆ ನೋಟಿಸ್ ಜಾರಿಯಾಗಿದೆ. ಅಕ್ಟೋಬರ್ 20 ರೊಳಗೆ ರೋಹಿಣಿ ಸಿಂಧೂರಿ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.