CrimeLatestLeading NewsMain PostNational

ಹೊಟ್ಟೆನೋವೆಂದು ಖಾಸಗಿ ಕ್ಲಿನಿಕ್ ಸೇರಿದ ಮಹಿಳೆ – ಆಪರೇಷನ್ ನೆಪದಲ್ಲಿ ಎರಡೂ ಕಿಡ್ನಿ ಕದ್ದ ವೈದ್ಯರು

- ಬೇರೊಂದು ಆಸ್ಪತ್ರೆಗೆ ದಾಖಲಿಸಿದ ಬಳಿಕ ರಹಸ್ಯ ಬಯಲು

ಪಾಟ್ನಾ: ಹೊಟ್ಟೆನೋವೆಂದು ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್‌ಗೆ (Private Clinic) ದಾಖಲಾಗಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ (Opration) ಮಾಡುವ ನೆಪದಲ್ಲಿ ವೈದ್ಯರು (Doctors) ಎರಡೂ ಕಿಡ್ನಿಗಳನ್ನು ಕದ್ದಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ (Hospital) ದಾಖಲಿಸಲಾಯಿತು. ಬಳಿಕ ಕಿಡ್ನಿ (Kidney) ತೆಗೆದಿರುವ ವಿಷಯ ತಿಳಿದುಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಿಳೆ ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬರಿಯಾರ್‌ಪುರ ಠಾಣೆಯ ಪೊಲೀಸರು (Police) ತನಿಖೆ ಆರಂಭಿಸಿದ್ದಾರೆ.

ಸಂತ್ರಸ್ತ ಮಹಿಳೆ (Women) ಬಾಜಿರೌತ್ ಗ್ರಾಮದವರಾಗಿದ್ದು, ಮಹಿಳೆಯ ವೈದ್ಯಕೀಯ ವರದಿಗಳನ್ನು ನೀಡುವಂತೆ ಕುಟುಂಬಸ್ಥರನ್ನು ಕೇಳಿದಾಗ ಆಕೆಯ ಎರಡೂ ಕಿಡ್ನಿಗಳನ್ನು ತೆಗೆಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ರೊಚ್ಚಿಗೆದ್ದ ಮಹಿಳೆಯ ಕುಟುಂಬಸ್ಥರು ಕ್ಲಿನಿಕ್ ಮುಂಭಾಗದಲ್ಲೇ ಗಲಾಟೆ ಆರಂಭಿಸಿದ್ದರು. ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ಹಿಂದೆ IT ಕಂಪನಿಗಳ ಕೈವಾಡವೂ ಇದೆ: ಸಂತೋಷ್ ಹೆಗ್ಡೆ

ಅಷ್ಟಕ್ಕೂ ನಡೆದಿದ್ದೇನು?
ಬಾಜಿರೌತ್ ನಿವಾಸಿ ಲಾಲ್‌ದೇವ್ ರಾಮ್ ಅವರ ಪುತ್ರಿ ಸುನೀತಾ ದೇವಿ ಆರೋಗ್ಯ ಕಳೆದ ಆಗಸ್ಟ್ 3 ರಂದು ಕ್ಷೀಣಿಸಿತ್ತು. ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಬರಿಯಾರ್‌ಪುರದ ಖಾಸಗಿ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ಬಳಿಕ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದ ವೈದ್ಯರು 20 ಸಾವಿರ ರೂಪಾಯಿಯಿಂದ ಚಿಕಿತ್ಸೆ ಆರಂಭಿಸಿದ್ದರು. ಅದಾದ ನಂತರವೂ ಹೊಟ್ಟೆನೋವು ಹೆಚ್ಚಾದ ಬಳಿಕ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ವೈದ್ಯರು ತಪಾಸಣೆ ನಡೆಸಿದ ಬಳಿಕ ಎರಡೂ ಕಿಡ್ನಿ ತೆಗೆದಿರುವ ರಹಸ್ಯ ಬಯಲಾಗಿದೆ ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ಯುವತಿ ಕೆರೆ ಪಾಲು – ಉಪ್ಪು ಸುರಿದು ಬದುಕಿಸಲು ಯತ್ನ

ಸದ್ಯ ಪೊಲೀಸರು ವೈದ್ಯಕೀಯ ವರದಿಯ ಮಾಹಿತಿ ಪಡೆಯುತ್ತಿದ್ದಾರೆ. ವೈದ್ಯರಿಂದ ಮಹಿಳೆ ವಂಚನೆಗೆ ಒಳಗಾಗಿದ್ದಾರೆ ಎಂಬುದು ಸತ್ಯಾಂಶವಾಗಿದ್ದು, ಎರಡೂ ಕಿಡ್ನಿ ತೆಗೆಯಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button