– ಸುಮಲತಾ- ದಳಪತಿಗಳ ಪ್ರತಿಷ್ಠೆಯಿಂದ ಇಕ್ಕಟ್ಟಿಗೆ ಸಿಲುಕಿದ ಅಧಿಕಾರಿಗಳು
– ದಿಶಾ ಸಭೆಯಲ್ಲಿ ‘ತಪ್ಪಿತಸ್ಥ’ ಸ್ಥಾನದಲ್ಲಿ ನಿಂತ ಅಧಿಕಾರಿಗಳು
ಮಂಡ್ಯ: ಸಂಸದೆ ವರ್ಸಸ್ ದಳಪತಿಗಳ ಸಮರ ಮತ್ತೊಮ್ಮೆ ತಾರಕ್ಕೇರಿದೆ. ಇಷ್ಟು ದಿನ ಹಾದಿ ಬೀದಿಯಲ್ಲಿ ನಡೆಯುತ್ತಿದ್ದ ವಾಗ್ಯುದ್ಧ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿದ್ದ ಸಭೆಯಲ್ಲೂ ಮುಂದುವರಿದಿದೆ. ಎರಡು ವರ್ಷದಲ್ಲೇ ಮೊದಲ ಬಾರಿಗೆ ಸಂಸದರ ದಿಶಾ ಸಭೆಯಲ್ಲಿ ಭಾಗವಹಿಸಿದ್ದ ದಳಪತಿಗಳು ಸಂಸದರ ವಿರುದ್ಧ ಒಮ್ಮೆಲೇ ಮುಗಿಬಿದ್ರು. ಸಂಸದರ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ತಿರುಗೇಟು ನೀಡಿರುವ ಜೆಡಿಎಸ್ ಶಾಸಕರು ಸುಮಲತಾ ಸುತ್ತಮುತ್ತವಿರುವ ಅಕ್ರಮ ಕೂಟವನ್ನ ಬಹಿರಂಗಪಡಿಸಿದರು.
Advertisement
ಇಂದು ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ದಿಶಾ ಸಭೆ ಕರೆಯಲಾಗಿತ್ತು. ಕಳೆದ ಎರಡೂ ವರ್ಷಗಳಿಂದ ನಡೆದ 8 ದಿಶಾ ಸಭೆಗಳಿಗೆ ನಿರಂತರವಾಗಿ ಗೈರಾಗಿದ್ದ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ಇಂದು ಹಾಜರಾಗಿದ್ರು. ಸಭೆ ಆರಂಭಕ್ಕೂ ಮುನ್ನವೇ ಸಮರಕ್ಕಿಳಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಭಾಂಗಣದೊಳಗಿದ್ದ ಸಂಸದರ ಆಪ್ತ ಕೂಟವನ್ನು ಕಂಡು ಕೆಂಡಾಮಂಡಲರಾದ್ರು. ಮೊದಲು ಅನಧಿಕೃತ ವ್ಯಕ್ತಿಗಳನ್ನು ಹೊರಕಳಿಸುವಂತೆ ಪಟ್ಟು ಹಿಡಿದ್ರು. ಈ ವೇಳೆ ಸಂಸದ ಆಪ್ತ ಕಾರ್ಯದರ್ಶಿ ಎನ್ನಲಾದ ಶ್ರೀನಿವಾಸ್ ಭಟ್ ಎಂಬಾತ ಅಧಿಕೃತನೋ ಅಥವಾ ಅನಧಿಕೃತವೋ. ಸಂಸದರ ಲೆಟರ್ ಹೆಡ್ ಗಳಿಗೆ ನಾಲ್ಕು ಮಂದಿ ಸಹಿ ಮಾಡಿದ್ದಾರೆ ಅದು ಅಕ್ರಮ ಅಲ್ವೇ ಎಂದು ಪ್ರಶ್ನಿಸಿದ್ರು. ಈ ವೇಳೆ ಕೆಲ ಕಾಲ ಸುಮಲತಾ ಅವರು ದಿಗ್ಭ್ರಾಂತರಾದಂತೆ ಕುಳಿತಿದ್ದರು.
Advertisement
Advertisement
ಈ ನಡುವೆ ಸಂಸದೆ ಸುಮಲತಾ ತಮ್ಮ ಆಪ್ತರನ್ನ ಸಮರ್ಥಿಸಿಕೊಳ್ಳಲು ಮುಂದಾದರು. ಈ ವೇಳೆ ರವೀಂದ್ರ ಶ್ರೀಕಂಠಯ್ಯ ಜೊತೆಗೆ ಉಳಿದ ಜೆಡಿಎಸ್ ಶಾಸಕರೂ ಕೂಡ ಧ್ವನಿಗೂಡಿಸಿದ್ರು. ವಿಷಯ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಸದರ ಕೆಲವು ಆಪ್ತರು ಸಭಾಂಗಣದಿಂದ ತಾವಾಗಿಯೇ ಹೊರ ನಡೆದರು. ಇದರ ಜೊತೆಗೆ ಸಂಸದ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿರುವ ಹಾಗೂ ಆಪ್ತ ಕಾರ್ಯದರ್ಶಿ ಹೆಸರಲ್ಲಿ ಅಧಿಕಾರಿಗಳು ಹಾಗೂ ಗಣಿ ಮಾಲೀಕರಿಗೆ ಫೋನ್ ಮಾಡಿ ಬೆದರಿಕೆ ಹಾಕುವವರ ವಿರುದ್ಧ ಕ್ರಮಕ್ಕೆ ಜೆಡಿಎಸ್ ಶಾಸಕರು ಒತ್ತಾಯಿಸಿದರು.
Advertisement
ಅವಧಿಗೂ ಮುನ್ನ ದಿಶಾ ಸಭೆ ನಡೆಸೋಕ್ಕೆ ಸಿಇಓಗೆ ಅಧಿಕಾರ ಇದೆಯಾ? ಈ ಬಗ್ಗೆ ಲಿಖಿತ ಉತ್ತರ ನೀಡುವವರೆಗೂ ಸಭೆ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ಪಟ್ಟು ಹಿಡಿದ್ರು. ಸತತ ಎರಡು ಗಂಟೆ ಸತಾಯಿಸಿ ಬಳಿಕ ಸಿಇಓ ದಿವ್ಯ ಪ್ರಭು ಲಿಖಿತ ಉತ್ತರ ನೀಡಿದ ಬಳಿಕ ಸಭೆ ಆರಂಭವಾಯ್ತು. ಈ ವೇಳೆ ಹಾಸ್ಯದ ಮೂಲಕವೇ ದಳಪತಿಗಳ ಕಾಲೆಳೆದ ಸಂಸದೆ, ನೀವೆಲ್ಲಾ ಸಭೆ ನಡೆಯಬಾರದು ಎಂಬ ಸ್ಟ್ರಾಟರ್ಜಿ ಇಟ್ಟುಕೊಂಡು ಬಂದಿದ್ದೀರಿ. ಇಲ್ಲವಾದ್ರೆ 8 ದಿಶಾ ಸಭೆಗೆ ಒಬ್ಬರೂ ಬರದಿದ್ದವರು ಇವತ್ತು ಒಟ್ಟಿಗೆ ಬಂದು ಹೀಗೆ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ರು. ಈ ವೇಳೆ ಜೆಡಿಎಸ್ ಶಾಸಕ ಈ ಮಾತು ಹಿಂಪಡೆಯುವಂತೆ ಆಗ್ರಹಿಸಿದ್ರು. ಇದನ್ನೂ ಓದಿ: ಏರಿಕೆಯಾಯ್ತು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ
ಸದಾ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರುತ್ತಿದ್ದ ಸಂಸದರಿಗೆ ಇವತ್ತಿನ ದಿಶಾ ಸಭೆ ನುಂಗಲಾರದ ತುತ್ತಾಗಿತ್ತು. ಸಭೆ ಆರಂಭವಾದ ಬಳಿಕವೂ ದಳಪತಿಗಳ ಆರ್ಭಟವೇ ಜೋರಾಗಿತ್ತು. ಸಂಸದರನ್ನೇ ಟಾರ್ಗೆಟ್ ಮಾಡಿಕೊಂಡು ಅಧಿಕಾರಿಗಳ ಬೆವರಿಳಿಸಿದ್ರು. ಗಣಿಗಾರಿಕೆ ವಿಚಾರವನ್ನೇ ಪ್ರಮುಖವಾಗಿ ಜೆಡಿಎಸ್ ಶಾಸಕರು ಲೀಗಲ್ ಮೈನಿಂಗ್ ನಿಲ್ಲಿಸಲು ಅಧಿಕಾರ ಕೊಟ್ಟವರು ಯಾರು? ಯಾರು ಹೇಳಿದ್ದಾರೆ. ನಿಮ್ಮಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿವೆ. ಮಂಡ್ಯ ಜಿಲ್ಲೆಗೆ ಪ್ರತ್ಯೇಕ ಕಾನೂನಿದಿಯಾ ಎಂದು ಗಣಿ ಅಧಿಕಾರಿ ಪದ್ಮಜ ಅವರನ್ನ ತರಾಟೆ ತೆಗೆದುಕೊಂಡ್ರು. ಇದನ್ನೂ ಓದಿ: ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್ಗೆ ರಿಲೀಫ್
ಈ ವೇಳೆ ದಳಪತಿಗಳ ಪ್ರಶ್ನೆಗಳಿಗೆ ಅಧಿಕಾರಿ ಉತ್ತರಿಸಲಾಗದೇ ತಬ್ಬಿಬ್ಬಾದ್ರು. ಈ ವೇಳೆ ಸಂಸದೆ ಸುಮಲತಾ ಮಾತನಾಡಿ, ನನ್ನ ಹೋರಾಟ ಏನಿದ್ರೂ ಅಕ್ರಮದ ವಿರುದ್ಧ ಹೊರತು ಸಕ್ರಮದ ವಿರುದ್ಧವಲ್ಲ ಎಂದೇಳುವ ಮೂಲಕ ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ರು. ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದರಿಗಿಂತ ಶಾಸಕರದ್ದೇ ಸೌಂಡ್ ಜೋರಾಗಿತ್ತು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ