– ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಆಕ್ರೋಶ
– ರಮೇಶ್ ಕುಮಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು
ಬೆಂಗಳೂರು: “ಚಿಂತಾಮಣಿ ತಾಲೂಕಿನಲ್ಲಿ ನಡೆದ ಅಪಘಾತಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇರ ಹೊಣೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮರಿನಾಯಕನಹಳ್ಳಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಕುಮಾರ್ ಅವರನ್ನು ಟೀಕಿಸಿ ಬರೆದ ಪೋಸ್ಟ್ ಈಗ ಫೇಸ್‍ಬುಕ್, ವಾಟ್ಸಪ್‍ನಲ್ಲಿ ವೈರಲ್ ಆಗಿದೆ.
Advertisement
Advertisement
ಪೋಸ್ಟ್ ನಲ್ಲಿ ಏನಿದೆ?
ಭಾನುವಾರ ಚಿಂತಾಮಣಿ ತಾಲ್ಲೂಕು ಮರಿನಾಯಕನಹಳ್ಳಿ ಗ್ರಾಮದ ಬಳಿ ನಡೆದಂತಹ 8 ಜನರ ಮರಣದ ಘೋರ ಅಪಘಾತ ಪ್ರಕರಣಕ್ಕೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ್ ಕುಮಾರ್ ರವರೆ ನೇರಹೊಣೆಗಾರರಾಗಿರುತ್ತಾರೆ.
Advertisement
ಒಂದು ತಿಂಗಳ ಹಿಂದೆ ಈ ಅಪಘಾತ ನಡೆದಂತಹ ಸ್ಥಳದಿಂದ ಕೆಲವೇ ಕೆಲವು ಕಿಲೋಮೀಟರ್ ಗಳ ಅಂತರದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಂತಹ ಚಿಂತಾಮಣಿ ಪೊಲೀಸರ ಕರ್ತವ್ಯವನ್ನು ರಮೇಶ್ ಕುಮಾರ್ ರವರು ತಡೆಯದೆ ಇದ್ದಿದ್ದರೆ, ಪೊಲೀಸರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ ಇದ್ದಿದ್ದರೆ, ಪೊಲೀಸರ ಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿ ಅವರ ಮನೋಸ್ಥೈರ್ಯವನ್ನು ಕುಗ್ಗುವಂತೆ ಮಾಡದೆ ಇದ್ದಿದ್ದರೆ ಮರಿನಾಯಕನಹಳ್ಳಿ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸುತ್ತಿರಲಿಲ್ಲ.
Advertisement
ರಮೇಶ್ ಕುಮಾರ್ ರವರು ಪೊಲೀಸರ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪೊಲೀಸರನ್ನು ಕೆಟ್ಟ ರೀತಿಯಲ್ಲಿ ಬಿಂಭಿಸಿದ್ದರಿಂದ ಇನ್ನು ಮುಂದೆ ಪೊಲೀಸರು ರಸ್ತೆಗಳಲ್ಲಿ ದಂಡ ವಿಧಿಸುವುದಿಲ್ಲ ಎಂಬ ಕೆಟ್ಟ ಸಂದೇಶ ಸಾರ್ವಜನಿಕ ವಲಯದಲ್ಲಿ ರವಾನೆಯಾಗಿ ಮೇಲಿನ ಅಪಘಾತ ಪ್ರಕರಣದ ವಾಹನಗಳ ಚಾಲಕರು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಕೊಂಡು, ಅಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತವನ್ನುಂಟು ಮಾಡಿ 8 ಜನ ಅಮಾಯಕ ಮರಣಕ್ಕೆ ಕಾರಣರಾಗಿರುತ್ತಾರೆ.
ಒಂದು ವೇಳೆ ರಮೇಶ್ ಕುಮಾರ್ ರವರು ಪೊಲೀಸರ ಕರ್ತವ್ಯವನ್ನು ಆ ದಿನ ತಡೆಯದೆ ಇದ್ದಿದ್ದರೆ, ಪೊಲೀಸರು ದಂಡವನ್ನು ಹಾಕುತ್ತಾರೆಂಬ ಭಯದಲ್ಲಿ ವಾಹನಗಳ ಚಾಲಕರು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ವಾಹನಕ್ಕೆ ತುಂಬುತ್ತಿರಲ್ಲಿಲ್ಲ. ಅತಿವೇಗವಾಗಿ, ಅಜಾಗರೂಕತೆಯಿಂದ ವಾಹನಗಳು ಚಾಲನೆ ಮಾಡುತ್ತಿರಲಿಲ್ಲ. ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರು ಸಾಗಿಸಿದರೆ ಪೊಲೀಸರು ಕೇಳುತ್ತಾರೆಂದು ಅಷ್ಟು ಜನ ಪ್ರಯಾಣಿಕರನ್ನು ಸಹ ಕರೆದುಕೊಂಡು ಹೋಗುತ್ತಿರಲಿಲ್ಲ. ಆಗ ಈ ಒಂದು ಅಪಘಾತ ಸಂಭವಿಸುತ್ತಲೂ ಇರಲಿಲ್ಲ. 8 ಜನ ಅಮಾಯಕ ಪ್ರಜೆಗಳು ಸಾಯುತ್ತಿರಲಿಲ್ಲ. ಆದ್ದರಿಂದ ಈ ಒಂದು ಅಪಘಾತದ 8 ಜನರ ಸಾವಿಗೆ ರಮೇಶ್ ಕುಮಾರ್ ರವರೆ ನೇರ ಹೊಣೆಗಾರರಾಗಿರುತ್ತಾರೆ. ಇದನ್ನೂ ಓದಿ: ಇನ್ನೂ ಸಮಯ ಇದೆ, ಅರ್ಜೆಂಟ್ ಏನೂ ಇಲ್ಲ: ಹೆಚ್‍ಡಿಕೆ
ಸಾರ್ವಜನಿಕರಿಗೆ ಕೆಟ್ಟ ಸಂದೇಶವನ್ನು ರವಾನೆ ಮಾಡಿ ಮೇಲ್ಕಂಡ ಅಪಘಾತಕ್ಕೆ ನೇರ ಹೊಣೆಗಾರರಾಗಿರುವ ಹಾಗೂ ಪೊಲೀಸರ ಬಗ್ಗೆ ಕೆಟ್ಟದಾಗಿ ಮಾತನಾಡಿ, ಅವರ ಮನೋಸ್ಥೈರ್ಯ ಕಳೆದುಕೊಳ್ಳುವಂತೆ ಮಾಡಿರುವ ರಮೇಶ್ ಕುಮಾರ್ ರವರು ಈ ಕೂಡಲೇ ಸಾಮಾಜಿಕ ಮಾಧ್ಯಮಗಳ ಮೂಲಕ ಪೊಲೀಸರಿಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮರಣ ಹೊಂದಿರುವ 8 ಜನರ ಆತ್ಮ ಹಾಗೂ ಅವರ ಕುಟುಂಬಗಳ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ
ಪೆÇಲೀಸರು ಅವರ ಸ್ವಾರ್ಥಕ್ಕೆ ಅಥವಾ ಅವರ ಸಂಪಾದನೆಗೆ ದಂಡವನ್ನು ವಿಧಿಸುವುದಿಲ್ಲ. ಸಮಾಜದಲ್ಲಿ ಇಂತಹ ಅಪಘಾತ ಪ್ರಕರಣಗಳು ನಡೆಯಭಾರದೆಂಬ ಉದ್ದೇಶದಿಂದ ದಂಡವನ್ನು ಹಾಕುತ್ತಾರೆ.ವಾಹನ ಸವಾರರು ಅವರ ವಾಹನದ ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಂಡಿದ್ದರೆ ಪೊಲೀಸರಿಗೆ ಏಕೆ ಹೆದರಬೇಕು? ಪೊಲೀಸರ ಜೊತೆ ಏಕೆ ವಾದ ವಿವಾದ ಆಗುತ್ತೆ? ಏಕೆ ದಂಡವನ್ನು ಕಟ್ಟ ಬೇಕಾಗತ್ತೆ? ದಯವಿಟ್ಟು ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು.