ಹಿಂದೂ, ಮುಸ್ಲಿಮರ ಮಧ್ಯೆ ಮತ-ಭೇದ ಪ್ರಾರಂಭವಾಗೋದಕ್ಕೆ ಈ 6 ವಿದ್ಯಾರ್ಥಿನಿಯರೇ ಕಾರಣ: ರಘುಪತಿ ಭಟ್

Public TV
2 Min Read
Raghupati Bhat 1

ಉಡುಪಿ: ಹಿಂದೂ ಮುಸ್ಲಿಮರ ಮಧ್ಯೆ ಮತ ಭೇದ ಪ್ರಾರಂಭವಾಗುವುದಕ್ಕೆ ಈ 6 ಮಕ್ಕಳು ಹಾಗೂ ಅವರ ಪೋಷಕರೇ ಕಾರಣ ಎಂದು ಶಾಸಕ ರಘುಪತಿ ಭಟ್ ಆಕ್ರೋಶ ಹೊರಹಾಕಿದ್ದಾರೆ.

ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಈ ಹೆಣ್ಣು ಮಕ್ಕಳು ನಮ್ಮ ಮಾತು ಕೇಳಿದ್ದರೆ ಈವರೆಗೂ ಬರುತ್ತಿಲಿಲ್ಲ. ಈ 6 ಮಕ್ಕಳಿಗೆ ಧರ್ಮ ಇದೆ, ನಮಗೆ ಧರ್ಮ ಬೇಡವಾ? ನಮಗೂ ಧರ್ಮ ಇದೆ, ನಾವು ಹಲಾಲ್ ತಿನ್ನಲ್ಲ. ನಾವು ಕಾನೂನು ಪ್ರಕಾರ ಜಾತ್ರೆಗಳಲ್ಲಿ ವ್ಯಾಪಾರ ಮಾಡಲು ಬಿಡಲ್ಲ. ಹಿಂದೂ ಮುಸ್ಲಿಮರ ಮಧ್ಯೆ ಮತ ಭೇದ ಪ್ರಾರಂಭ ಆಗುವುದಕ್ಕೆ ಈ 6 ಮಕ್ಕಳು ಹಾಗೂ ಅವರ ಪೋಷಕರೇ ಕಾರಣ. ಈ 6 ಹುಡುಗಿಯರನ್ನು ನಿಯಂತ್ರಣ ಮಾಡಿದೇ ಸಂಘಟನೆಗಳು ಅವರಿಗೆ ಸಹಕರ ನೀಡಿತು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಉಪನ್ಯಾಸಕಿಯರ ಜೊತೆ ಅಸಭ್ಯ ವರ್ತನೆ – ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿತ

HIJAB

ಯಾವುದೇ ಧರ್ಮ ಆಗಲಿ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಾಗ, ಇನ್ನೊಂದು ಧರ್ಮದವರು ಅದನ್ನು ಅತಿಯಾಗಿ ಮಾಡಿದಾಗ ಆಕ್ರೋಶಕ್ಕೆ ಕಾರಣವಾಗುತ್ತದೆ. ಇದು ಯಾರೂ ಸ್ಪ್ರೆಡ್ ಮಾಡಿದ್ದಲ್ಲ, ಇವರಿಗೆ ಮೆದುಳು ಇದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಅವರ ಮೆದುಳನ್ನು ಆ ಮತೀಯ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‍ಐ) ನಿಯಂತ್ರಣ ಮಾಡುವುದಕ್ಕೆ ಶುರುಮಾಡಿತು. ಅದರಿಂದ ಸಮಸ್ಯೆಯಾಗಿದ್ದು, ದೇಶದ್ರೋಹ ಸಂಘಟನೆಗಳೊಂದಿಗೆ ಸಂಪರ್ಕ ಇರುವವರು ನಿಯಂತ್ರಣ ಮಾಡಿದ್ದಕ್ಕೆ, ಮೆದುಳು ಅವರ ನಿಯಂತ್ರಣ ಇಲ್ಲದ್ದಕ್ಕೆ ಈ ಸಮಸ್ಯೆಯಾಯಿತು ಎಂದು ಹೇಳಿದ್ದಾರೆ.

udupi HIJAB STUDENTS PRESS MEET

ಇವರು ಭಯೋತ್ಪಾದಕರು ಅಂತ ನಾವೇನು ಹೇಳಿಲ್ಲ. ಇವರಿಗೆ ತಾಲಿಬಾನ್ ಅವರು ಎಲ್ಲರೂ ಬೆಂಬಲಿಸುವಾಗ ಹೇಳಬೇಕಿತ್ತು. ನಮಗೆ ನಮ್ಮ ಭಾರತದ ಸಂವಿಧಾನದ ಮೇಲೆ ಗೌರವವಿದೆ. ಸುಪ್ರೀಂಕೋರ್ಟ್ ಮೇಲೆ ಗೌರವವಿದೆ. ಯಾರದ್ದೂ ಬೆಂಬಲ ಬೇಕಿಲ್ಲ ಅಂತ ಹೇಳಬೇಕಿತ್ತು. ಆಗ ಸುಮ್ಮನಿದ್ದವರು ಈಗ ಬಂದು ಮಾತನಾಡುತ್ತಾರೆ ಅಂದ ಮೇಲೆ ಅವರ ಹಿನ್ನೆಲೆ ಪ್ರಶ್ನಿಸಬೇಕಾಗುತ್ತದೆ. ಅಲ್‍ಕೈದಾ ವಿರುದ್ಧ ಮುಸ್ಕಾನ್ ತಂದೆ ಮಾತಾಡಿದ್ದರು, ಅವರ ಬೆಂಬಲ ನಮಗೆ ಬೇಕಾಗಿಲ್ಲ ಅಂತ. ಆದರೆ 6 ಮಕ್ಕಳು ಒಂದು ದಿನವಾದರೂ ಹೇಳಿದ್ರಾ? ಸಿಎಫ್‍ಐನವರು ಹೇಳಿದ್ರಾ? ಇವರ ಬಗ್ಗೆ ಹೇಗೆ ಪಾಕಿಸ್ತಾನ ಟಿವಿಗಳಿಗೆ ಗೊತ್ತಾಗಿದೆ. ಭಯೋತ್ಪಾದಕರು ಹೇಗೆ ಇವರಿಗೆ ಬೆಂಬಲಿಸುತ್ತಾರೆ. ಈವರೆಗೆ ಈ ಹೆಣ್ಣು ಮಕ್ಕಳು ಇದನ್ನು ವಿರೋಧಿಸಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಧರ್ಮ ದಂಗಲ್‌ಗೆ ನಾವು ಕಾರಣರಲ್ಲ: ಹಿಜಬ್ ಪರ ವಿದ್ಯಾರ್ಥಿನಿಯರು

SUPREME COURT

ಹಿಜಬ್ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅನುಮತಿ ಕೊಡುವ ವಿಚಾರ: ಅವರಿಗೆ ಬೇಕಾದಷ್ಟು ಅವಕಾಶ ಕೊಟ್ಟಿದ್ದೇವೆ, ಇನ್ನೂ ಪರೀಕ್ಷೆ ಬರುವ ಸಂದರ್ಭದಲ್ಲಿ ಅವರಿಗೆ ಅವಕಾಶ ಕೊಡುವುದಿಲ್ಲ. ಅವರಿಗೆ ಹಾಲ್ ಟಿಕೆಟ್ ಸಿಗಲ್ಲ, ಏಕೆಂದರೆ ಅಟೆಂಡೆನ್ಸ್ ಸಿಗಬೇಕಲ್ಲ. ಅಣ್ಣ-ತಮ್ಮಂದಿರಂತಿದ್ದ ಕಾಲೇಜಿನಲ್ಲಿ ವಿಷ ಬೀಜ ಬಿತ್ತಿದವರು ಎಂದು ಹರಿಹಾಯ್ದಿದ್ದಾರೆ.

Share This Article