ಮಂಡ್ಯ: ಕಬಡ್ಡಿ ಅಂಗಳಕ್ಕಿಳಿದು ಮೇಲುಕೋಟೆ ಶಾಸಕ ಪುಟ್ಟರಾಜು (MLA Puttaraju) ತೊಡೆ ತಟ್ಟಿದ್ದಾರೆ.
ಹೌದು. ಮೈದಾನಕ್ಕಿಳಿದು ಶಾಸಕರು ಕಬಡ್ಡಿ (Kabaddi) ಆಡಿ ಎಲ್ಲರನ್ನು ಮನರಂಜಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶಾಸಕರು ಕಬಡ್ಡಿ ಮೈದಾನಕ್ಕಿಳಿದರು. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ
ಅಲ್ಲದೆ ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದರು. ತೊಡೆ ತಟ್ಟಿ ಅಂಗಳಕ್ಕಿಳಿದರೂ ರೇಡ್ ನಲ್ಲಿ ಪಾಯಿಂಟ್ಸ್ ಗಳಿಸಲು ಶಾಸಕರು ವಿಫಲರಾದರು. ಶಾಸಕರ ಕಬಡ್ಡಿ ಆಟಕ್ಕೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಸರಿಯಿತು. ಈ ಮೂಲಕ ಶಾಸಕರು ರಾಜಕೀಯಕ್ಕೂ ಸೈ, ಕಬಡ್ಡಿಗೂ ಸೈ ಎನ್ನುವಂತೆ ಆಟವಾಡಿದರು.