ಹುಬ್ಬಳ್ಳಿ: ಶ್ರೀಕಾಂತ್ ಪೂಜಾರಿಯನ್ನು ಬಿಡುಗಡೆ ಮಾಡುವುದಿಲ್ಲ. ಠಾಣೆಯ ಇನ್ಸ್‌ಪೆಕ್ಟರ್‌ನ್ನು ಸಹ ಅಮಾನತು ಮಾಡುವುದಿಲ್ಲ. ನಾವು ಬಿಜೆಪಿಯವರನ್ನು ಕೇಳಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ (Congress) ಶಾಸಕ ಪ್ರಸಾದ್ ಅಬ್ಬಯ್ಯ ( Prasad Abbayya) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ಸ್‌ಪೆಕ್ಟರ್ ಮಹಮ್ಮದ್ ರಫೀಕ್ ಅವರಿಗೆ ಯಾವುದೇ ಕಡ್ಡಾಯ ರಜೆ ನೀಡಿಲ್ಲ. ವೈಯಕ್ತಿಕ ಕಾರಣದಿಂದ ರಜೆ ತೆಗೆದುಕೊಂಡಿದ್ದಾರೆ. ಅವರು ಆದಷ್ಟು ಬೇಗ ವಾಪಸ್ ಬರಲಿದ್ದಾರೆ. ಅವರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ. ಅವರು ರೌಡಿಶೀಟರ್‌ಗಳು ನಡುಕ ಹುಟ್ಟಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಭಾರತವನ್ನು ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ತಡೀರಿ – ಮುತಾಲಿಕ್ ಸವಾಲ್
Advertisement
Advertisement
ನ್ಯಾಯಾಲಯದ ಆದೇಶ ಇರುವುದರಿಂದ ಶ್ರೀಕಾಂತ್ ಪೂಜಾರಿಯನ್ನು ಬಂಧನ ಮಾಡಲಾಗಿದೆ. ಆತ ರೌಡಿಶೀಟರ್, ಅವನ ಹಿನ್ನೆಲೆ ತೆಗೆದಾಗ 16 ಕೇಸ್‍ಗಳಿದ್ದು, ಜನ ಛೀಮಾರಿ ಹಾಕುತ್ತಿದ್ದಾರೆ. ರೌಡಿಶೀಟರ್ ಹಾಗೂ ಕ್ರಿಮಿನಲ್ ಇದ್ದವರು ತಮ್ಮ ಪಕ್ಷದ ಪಿಲ್ಲರ್‌ಗಳು ಎಂದು ಬಿಜೆಪಿ (BJP) ಘೋಷಣೆ ಮಾಡಲಿ ಎಂದು ಕಿಡಿಕಾರಿದ್ದಾರೆ.
Advertisement
Advertisement
ರಾಮನ ಭಕ್ತರು ಸರಾಯಿ ಮಾರಾಟ ಮಾಡ್ತಾರಾ? ಮಟ್ಕಾ ಜೂಜಾಟ ಆಡೋನು ರಾಮ ಭಕ್ತನಾ? ಇನ್ನೂ ಪ್ರತಿಭಟನೆ ಮಾಡೋದು ಎಲ್ಲರ ಹಕ್ಕು, ಆದರೆ ಅದರ ಹೆಸರಲ್ಲಿ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಈ ವಿಷಯವನ್ನು ನಮ್ಮ ಜಿಲ್ಲಾಧ್ಯಕ್ಷರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಕಾರ್ಯಕರ್ತರು ಇಂದು ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಯತೀಂದ್ರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ: ರಾಮಲಿಂಗಾ ರೆಡ್ಡಿ