ಒಂದು ಮಗು ಇದ್ದರೂ ಬಸ್ ಓಡಿಸಿ: ಕೆಎಸ್‍ಆರ್‌ಟಿಸಿಯವರಿಗೆ ಸೂಚನೆ
ಚಿಕ್ಕಬಳ್ಳಾಪುರ: ಒಂದೇ ವೋಟ್ ಇದೆ ಎಂದು ನಾವು ಬೇಡಾ ಎನ್ನುತ್ತೇವಾ? ಹಾಗಿದ್ದಾಗ ಒಂದು ಮಗುಗೆ ಬಸ್ ಓಡಿಸಬಾರದಾ? ಶಾಲೆಗೆ ಹೋಗುವ ಒಂದು ಮಗು ಇದ್ದರೂ ಕೆಎಸ್‍ಆರ್‌ಟಿಸಿ (KSRTC) ಬಸ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂಚರಿಸಬೇಕು ಎಂದು ಕಾಂಗ್ರೆಸ್ (Congress) ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ.
Advertisement
ಸೋಮವಾರ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕ್ಷೇತ್ರದ ಪ್ರತಿ ಹಳ್ಳಿಗೂ ಕೆಎಸ್‍ಆರ್‌ಟಿಸಿ ಬಸ್ ಸಂಚರಿಸಬೇಕು. ಶಾಲಾ-ಕಾಲೇಜುಗಳ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಬೇಕು. ಒಂದು ತಿಂಗಳಲ್ಲೇ ಈ ಸೌಲಭ್ಯ ಜನರ ಕೈಗೆ ಸಿಗಬೇಕು. ಯಾವ ಜನ ಕೂಡ ನಮ್ಮ ಹಳ್ಳಿಗೆ ಬಸ್ ಬಂದಿಲ್ಲ ಎಂದು ಹೇಳಬಾರದು. ನಷ್ಟ ಎಂದು ಬಸ್ ಸಂಚಾರ ನಿಲ್ಲಿಸಬೇಡಿ. ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಕಾರು, ಲಾರಿ ಮುಖಾಮುಖಿ ಡಿಕ್ಕಿ – ಕಾಂಗ್ರೆಸ್ ಮುಖಂಡ ಸ್ಥಳದಲ್ಲೇ ಸಾವು
Advertisement
Advertisement
ಅಲ್ಲದೆ ನಗರದಲ್ಲಿ ನನ್ನ ಫ್ಲೆಕ್ಸ್ ಸೇರಿದಂತೆ ಯಾರ ಫ್ಲೆಕ್ಸ್ ಕೂಡ ಇರಬಾರದು. ನಗರ ಸ್ವಚ್ಛವಾಗಿರಬೇಕು. ಯಾರಿಗೂ ಹೆದರದೆ ಫ್ಲೆಕ್ಸ್‍ಗಳನ್ನು ತೆಗೆದು ಹಾಕಿ. ನಗರದಲ್ಲಿ ಫ್ಲೆಕ್ಸ್ ಸಂಸ್ಕೃತಿ ಕೊನೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement
ಜನರಿಗೆ ನಕಲಿ ಹಕ್ಕು ಪತ್ರ ನೀಡಿದವರ ವಿರುದ್ಧ ಎಫ್‍ಐಆರ್ ದಾಖಲಿಸಿ ಎಂದು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಅನುಕೂಲಕ್ಕೆ 22,000 ಜನ ನಿವೇಶನ ರಹಿತರಿಗೆ ಹಕ್ಕು ಪತ್ರ (Claim Letter) ನೀಡಲು ಮಾಜಿ ಸಚಿವ ಸುಧಾಕರ್ ಮುಂದಾಗಿದ್ದರು. ಸಾವಿರಾರು ಮಂದಿಗೆ ಈಗಾಗಲೆ ವಿತರಣೆಯಾಗಿದೆ. ನಕಲಿ ಹಕ್ಕುಪತ್ರ ನೀಡಿದವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ನನ್ನ ಹೊರತುಪಡಿಸಿ ಯಾರೇ ಬಂದು ನನ್ನ ಹೆಸರು ಹೇಳಿದರೂ, ಯಾರ ಮಾತು ಕೇಳಬೇಡಿ. ಅಧಿಕಾರಿಗಳು ಧೈರ್ಯದಿಂದ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ನಾನು 20 ವರ್ಷ ಶಾಸಕನಾಗಬೇಕಿಲ್ಲ. ಒಮ್ಮೆ ಆಗಿದ್ದೇನೆ. ನನ್ನ ಪವರ್ ತೋರಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಎನ್‍ಐಎಯಿಂದ ಮರಣದಂಡನೆಗೆ ಮನವಿ- ಯಾಸಿನ್ ಮಲಿಕ್‍ಗೆ ಹೈಕೋರ್ಟ್ ನೋಟಿಸ್