ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರಯಾಣದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಈಗ ಇರೋ 12 ತಿಂಗಳಲ್ಲಿ ಏನು ಮಾಡಲು ಆಗೋದಿಲ್ಲ. ಆದರೂ ನನ್ನನ್ನ ಈ ಬಾರಿ ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಈಗ ಇರೋ 12 ತಿಂಗಳಲ್ಲಿ ಏನು ಮಾಡಲು ಆಗೋದಿಲ್ಲ. ಆದರೂ ನನ್ನನ್ನ ಈ ಬಾರಿ ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಗೆ ಕಾಲಾವಕಾಶ ಕೇಳಿದ್ದೇನೆ.ಅವರು ಮೀಟಿಂಗ್ ನಲ್ಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ನಾವು ಎಷ್ಟೇ ದೊಡ್ಡವರಾದರೂ ಶಾಲೆ, ಗುರುಗಳು ಅಂದಾಗ ಗೌರವದ ಭಾವ ಮೂಡುತ್ತೆ: ಆರ್.ಅಶೋಕ್
Advertisement
Advertisement
ಇದೇ ವೇಳೆ ರಾಜ್ಯದಲ್ಲಿ ಆಜಾನ್ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಎಲ್ಲರಿಗೂ ಅವರವರ ಧರ್ಮ ದೊಡ್ಡದು. ಪ್ರಾರ್ಥನೆ ಮಾಡಲು ಯಾರು ಬೇಡ ಅನ್ನಲ್ಲ. ಆದರೆ ದಿನಕ್ಕೆ ಐದು ಬಾರಿ ಮೈಕ್ ನಲ್ಲಿ ಕೂಗಿದ್ರೆ ಪಕ್ಕದ ಮನೆಯವರಿಗೆ ತೊಂದರೆಯಾಗುತ್ತೆ. ಕುರಾನ್ ಬರೆದಾಗ ಏನು ಮೈಕ್ ಇತ್ತಾ? ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲರು ನಡೆದುಕೊಳ್ಳಬೇಕು. ದೇಶದ ಕಾನೂನಿಗೆ ಎಲ್ಲರಿಗೂ ಒಂದೇ ಎಂದು ವಾಗ್ದಾಳಿ ನಡೆಸಿದರು.