ಬೆಂಗಳೂರು: ನಾವು ಎಷ್ಟೇ ದೊಡ್ಡವರಾದರೂ ಶಾಲೆ, ಗುರುಗಳು ಅಂದಾಗ ಗೌರವದ ಭಾವ ಮೂಡುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
Advertisement
ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸಹಯೋಗದಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಭೂ-ದಾಖಲಾತಿಗಳನ್ನು ಆಯಾ ಎಸ್‍ಡಿಎಮ್‍ಸಿ ಹಾಗೂ ಮುಖ್ಯ ಶಿಕ್ಷಕರಿಗೆ ಆರ್.ಅಶೋಕ್ ಅವರು ವಿತರಿಸಿದ್ದಾರೆ. ನಂತರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ 552 ಶಾಲೆಗಳಿಗೆ(ಅಂದರೆ ಸುಮಾರು 60%) ದಾಖಲೆಗಳೇ ಇರಲಿಲ್ಲ ಎನ್ನುವುದು ಆಶ್ಚರ್ಯಕರ ಸಂಗತಿ. ಸರಿಯಾದ ದಾಖಲೆ ಇಲ್ಲದಿದ್ದರೆ ಒತ್ತುವರಿ ಮಾಡುವವರಿಗೆ ಅನುಕೂಲ ಎಂದು ವಿವರಿಸಿದರು. ಇದನ್ನೂ ಓದಿ: ಸೌಹಾರ್ದತೆ ಕೆಡಿಸುವ ಕೆಲಸ ಬಿಜೆಪಿಗೆ ತಿರುಗುಬಾಣ ಆಗುತ್ತೆ: ಸಿದ್ದರಾಮಯ್ಯ
Advertisement
ಶಿಕ್ಷಣ ಇಲಾಖೆಯ ಜಮೀನು ರಕ್ಷಣೆ ಆಗಲೇಬೇಕು. ಆ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ. ಹಿಂದೆ ಹಲವಾರು ದಾನಿಗಳು ಶಾಲೆ ಸ್ಥಾಪನೆಗೆ ಕೊಟ್ಟ ಜಮೀನು ಶಾಲೆಗಾಗಿಯೇ ಇರಬೇಕು. ಹಾಗಾಗಿ ಎಲ್ಲ ದಾಖಲೆಯನ್ನು ಪಕ್ಕಾ ಮಾಡಿ ಕೊಡುತ್ತಿದ್ದೇವೆ. ನಾನು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ರಾಜ್ಯಾದ್ಯಂತ ಈ ಕಾರ್ಯಕ್ರಮ ನಡೆಯಬೇಕು. ಶಿಕ್ಷಣ ಇಲಾಖೆಯು ಸಹ ಇದರ ಬಗ್ಗೆ ಚಿಂತನೆ ನಡೆಸಲಿ ಎಂದು ಸೂಚನೆ ಕೊಟ್ಟರು.
Advertisement
Advertisement
ಸರ್ಕಾರಿ ಶಾಲೆಗಳ ಭೂಮಿ ರಕ್ಷಣೆಗೆ ಕಂದಾಯ ಇಲಾಖೆ ಮತ್ತು ಸರ್ಕಾರ ಬದ್ಧವಾಗಿದೆ. ಸ್ಮಶಾನ, ಶಾಲೆ, ಅಂಗನವಾಡಿ ಸಲುವಾಗಿ ಭೂಮಿಯನ್ನು ಮೀಸಲಿಡಿ. ಮುಂದೆ ಇವುಗಳಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ನಾನು ಈಗಾಗಲೇ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕರು ಶಾಲೆಯ ಮೂಲಸೌಕರ್ಯಗಳ ಪರೀಕ್ಷೆ ಮಾಡಬೇಕು. ಜಮೀನಿನ ದಾಖಲೆಗಳನ್ನು ಪರಿಶೀಲನೆ ಮಾಡಿ ಉಪವಿಭಾಗಾಧಿಕಾರಿಗಳಿಗೆ ತಿಳಿಸಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಸುಕಿನಲ್ಲಿ ಸುಪ್ರಭಾತ, ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ, ಇಂದಿನದಲ್ಲ: ಕುಮಾರಸ್ವಾಮಿ
ಈ ವೇಳೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಮಂಜುನಾಥ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.