LatestMain PostNational

ಭಾರತದ ಪ್ರತಿ ಇಂಚು ಜಾಗವೂ ಹಿಂದೂಗಳದ್ದೇ: ರೇಣುಕಾಚಾರ್ಯ

- ಸಚಿವರ ವಿರುದ್ಧ ಎಂಪಿಆರ್ ಅಸಮಾಧಾನ

ನವದೆಹಲಿ: ಭಾರತದ ಪ್ರತಿ ಇಂಚು ಜಾಗವೂ ಹಿಂದೂಗಳದ್ದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸಲು ಅವಕಾಶವಿಲ್ಲ ಎಂಬ ಜಮೀರ್ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಗಣೇಶ ಕುರಿಸೋಕೆ ಜಮೀರ್ ಅಪ್ಪಣೆ ಬೇಕಾಗಿಲ್ಲ. ಅವನೊಬ್ಬ ಗುಜರಿ ಜಮೀರ್, ಭಯೋತ್ಪಾದಕ. ಭಾರತದ ಪ್ರತಿ ಇಂಚು ಜಾಗವು ಹಿಂದೂಗಳದ್ದು ಎಂದು ತಿಳಿಸಿದರು.

ಇಲ್ಲಿ ಎಲ್ಲಾ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ಒಂದಾಗಿ ಬಾಳಬೇಕು. ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿಲ್ಲ ಯಾಕೆ ಎಂದು ಸಿದ್ದರಾಮಯ್ಯ ಕೇಳ್ತಾರೆ. ಮದರಸಾ ಮತ್ತು ಮಸೀದಿ ಮೇಲೆ ರಾಷ್ಟ್ರದ್ವಜ ಯಾಕೆ ಹಾರಿಸಲ್ಲ ಎಂದು ಪ್ರಶ್ನಿಸಿದ ಅವರು, ಮೊದಲು ಅಲ್ಲಿ ರಾಷ್ಟ್ರಧ್ವಜ ಹಾರಿಸಲು ಮೊದಲು ಹೇಳಿ ಎಂದರು.

ಇದೇ ವೇಳೆ ಸಿಎಂ ಬದಲಾವಣೆ ಕುರಿತು ಮಾತನಾಡಿ, ಬಸವರಾಜ್ ಬೊಮ್ಮಾಯಿಯೇ ಮುಖ್ಯಮಂತ್ರಿ. ಮುಂದಿನ ಅವಧಿಗೂ ಅವರೇ ಮುಖ್ಯಮಂತ್ರಿ. ಸೂರ್ಯ ಚಂದ್ರ ಇರುವಷ್ಟೇ ಇದು ಸತ್ಯ. ಸರ್ಕಾರ ಹಾಗೂ ಸಚಿವರ ವಿರುದ್ಧವೂ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: RSS ಕಚೇರಿಗೆ ತೆರಳಿ ರಾಷ್ಟ್ರಧ್ವಜ ನೀಡಿದ ಕಾಂಗ್ರೆಸ್ ಯುವ ಕಾರ್ಯಕರ್ತರು

ಸಿಎಂ ಪರ ಮಾತನಾಡದ ಸಚಿವರ ವಿರುದ್ಧ ಎಂಪಿಆರ್ ಅಸಮಾಧಾನ ವ್ಯಕ್ತಪಡಿಸಿದರು. ಸಿಎಂ ಸಮರ್ಥಿಸಿಕೊಳ್ಳದ ಸಚಿವರು ನಾಲಾಯಕ್. ಸಂಘಟನೆ ಮತ್ತು ಸರ್ಕಾರದ ಸಮರ್ಥನೆ ಮಾಡಿಕೊಳ್ಳಬೇಕಿರುವುದು ಕರ್ತವ್ಯ. ಆದರೆ ಈವರೆಗೂ ಕೆಲವು ಸಚಿವರು ಮಾತೇ ಆಡುತ್ತಿಲ್ಲ. ಸಿಎಂ ಬದಲಾವಣೆ ರೇಣುಕಾಚಾರ್ಯ ಕೈಲಿದೆಯಾ..?. ಸಿಎಂ ಬದಲಾವಣೆ ಬಗ್ಗೆ ಮಾತನಾಡೋಕೆ ಸುರೇಶ್ ಗೌಡ ಯಾರು..? ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಮಾತನಾಡಬೇಕು ಎಂದು ಹೇಳಿದರು.

Live Tv

Leave a Reply

Your email address will not be published.

Back to top button